BigTv News
November 30, 2021
Breaking News, ಅಪರಾಧ, ಕರ್ನಾಟಕ, ಧಾರವಾಡ
ಧಾರವಾಡ: ಬಡ್ಡಿ ಹಣಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರೇ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು. ಜಿಲ್ಲಾಧಿಕಾರಿ ಬಳಿ ಬಂದ ಏಳೆಂಟು ಜನ ಹಣದ ವ್ಯವಹಾರಕ್ಕಾಗಿ ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸ್ ಪೇದೆಯೊಬ್ಬರು ಬಂದು ಇಲ್ಲಿಂದ ಆಕಡೆ ಹೋಗಿ ಇದು ಡಿಸಿ ಕಚೇರಿ ಎಂದು ಹೇಳಿದರೂ ಕೇಳದ ಆ ಗುಂಪು ಅಲ್ಲೇ ವಾಗ್ವಾದ ನಡೆಸಿತು. ನಂತರ ಮಾತಿಗೆ ಮಾತು ಬೆಳೆದು ಎರಡೂ …
Read More »
BigTv News
November 28, 2021
Breaking News, ಅಪರಾಧ, ಕರ್ನಾಟಕ, ಧಾರವಾಡ
ಧಾರವಾಡ: ಹುಬ್ಬಳ್ಳಿ, ಧಾರವಾಡ ಮಧ್ಯೆ ಇರುವ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಧಾರವಾಡದ ಮೈಕ್ರೊ ಫಿನಿಶ್ ಕಂಪೆನಿ ಎದುರುಗಡೆಯೇ ಈ ಘಟನೆ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಬೈಕ್ ಮೇಲೆ ಬರುತ್ತಿದ್ದ ಇಬ್ಬರಿಗೆ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ನಲ್ಲಿದ್ದ ಇಬ್ಬರೂ ಸವಾರರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತಪಟ್ಟ ಇಬ್ಬರೂ ಯುವಕರು ಧಾರವಾಡದ ಹೊಸಯಲ್ಲಾಪುರದವರೆಂದು ತಿಳಿದು ಬಂದಿದ್ದು, ಇನ್ನೂ ಅವರ ಹೆಸರು …
Read More »
admin
November 27, 2021
Breaking News, ಕರ್ನಾಟಕ, ಧಾರವಾಡ, ಬೆಂಗಳೂರು, ರಾಜಕೀಯ ಸುದ್ದಿ
ಬೆಂಗಳೂರು: ಕೋವಿಡ್ ನಿಯಂತ್ರಣ, ಲಸಿಕೆ ವಿಚಾರ ಹಾಗೂ ಹೊಸ ತಳಿ ಸಂಬಂಧ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸರ್ಕಾರಿ ನಿವಾಸದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಈ ಸಂಬಂಧ ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಮಾತನಾಡಿರುವ ಸಿಎಂ, ಧಾರವಾಡ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳಲ್ಲಿ ಕೋವಿಡ್ ಉಲ್ಬಣವಾಗಿದೆ. ಕೇರಳದಲ್ಲೂ ಸೋಂಕು ಹೆಚ್ಚಳವಾಗುತ್ತಿದೆ. ಇದನ್ನು ಗಮನಿಸಿ ಶೀಘ್ರದಲ್ಲೇ ಮುಂಜಾಗ್ರತಾ …
Read More »
admin
November 21, 2021
Breaking News, ಕರ್ನಾಟಕ, ಧಾರವಾಡ
ಧಾರವಾಡ : ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಮಧ್ಯದಲ್ಲಿ ಮಾರಾ ಮಾರಿ ನಡೆದಿರುವಂತಹ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ. ನಗರದ ಬಹುತೇಕ ಶಾಲಾ ಕಾಲೇಜುಗಳಿಗೆ ತೆರಳ ಬೇಕಾದರೆ, ಹಳೆ ಬಸ್ ನಿಲ್ದಾಣವೇ ಸಂಪರ್ಕಕೊಂಡಿಯಾಗಿದ್ದು, ಹೀಗಾಗಿ ಧಾರವಾಡ ನಗರಕ್ಕೆ ಆಗಮಿಸುವ ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳು ನಗರದ ಹಳೆ ಬಸ್ ನಿಲ್ದಾಣವನ್ನೇ ಬಳಸುತ್ತಾರೆ. ಅದರಂತೆ ಇಂದು ಕೂಡ ಬೆಳಗ್ಗೆ ಕಾಲೇಜಿಗೆ ತೆರಳು ಬಂದಿದ್ದ ವಿದ್ಯಾರ್ಥಿಗಳು, ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿಕೊಂಡಿದ್ದು, ಕೆಲ …
Read More »
BigTv News
November 20, 2021
Breaking News, ಕರ್ನಾಟಕ, ಧಾರವಾಡ
ಧಾರವಾಡ : ಜಿಲ್ಲೆಯಾದ್ಯಂತ ಸತತ ಐದನೇ ದಿನವೂ ಮುಂದುವರೆದಿದ್ದು ಮಳೆಯ ಅಬ್ಬರದಿಂದ ಧಾರವಾಡ ತಾಲೂಕಿನ ಕವಲಗೇರಿ, ಚಂದನಮಟ್ಟಿ, ಅಮ್ಮಿನಭಾವಿ ಭಾಗದ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಹಿಂಗಾರು ಬಿತ್ತನೆ ಮಾಡಿ ಉತ್ತಮವಾದ ಬೆಳೆಯ ನೀರಿಕ್ಷೆಯಲ್ಲಿದ್ದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸತತ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ರೈತರು ಹಿಂಗಾರು ಬಿತ್ತನೆ ಮಾಡಿದ ಕಡಲೆ, ಗೋಧಿ, ಕುಸುಬಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ನಿಂತು ಕೋಳೆಯುಂತಾಗಿದೆ. ಧಾರವಾಡ ಗ್ರಾಮೀಣ ಪ್ರದೇಶಗಳಲ್ಲಿ …
Read More »
admin
November 16, 2021
Breaking News, ಕರ್ನಾಟಕ, ಧಾರವಾಡ, ರಾಜಕೀಯ ಸುದ್ದಿ
ಕೋಳಿವಾಡ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನೆಡೆಸಿದರು, ಹುಬ್ಬಳ್ಳಿ: ಅದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ. ಅಲ್ಲದೇ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮಾವನವರ ಊರು. ಈ ಊರಿನಲ್ಲಿಯೇ ಜನರು ಅವ್ಯವಸ್ಥೆ ಕುರಿತು ಆಕ್ರೋಶಗೊಂಡಿದ್ದಾರೆ. ಏಕಾಏಕಿ ರಸ್ತೆ ತಡೆದು ಪ್ರತಿಭಟನೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ಮಾವನವರ ಊರು ಇಲ್ಲಿಗೆ ಸುಮಾರು ಸಾರಿ ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ. ಅಲ್ಲದೆ …
Read More »
BigTv News
November 11, 2021
Breaking News, ಧಾರವಾಡ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಉತ್ತರ ಕರ್ನಾಟಕದ ಪ್ರಸಿದ್ಧ ತಬಲಾ ಕಲಾವಿದ ಪಂ. ಷಡಾಕ್ಷರಯ್ಯ ಗುಡ್ಡದಮಠ (74) ಇಂದು (ಗುರುವಾರ) ಬೆಳಿಗ್ಗೆ ನಿಧನರಾಗಿದ್ದಾರೆ. ಪಂ.ಷಡಕ್ಷರಯ್ಯ ಅವರು ಪತ್ನಿ, ಪುತ್ರ, ಪುತ್ರಿ, ಅಪಾರ ಬಂದು ಬಳಗ ಹಾಗೂ ಶಿಷ್ಯ ವೃಂದವನ್ನು ಅಗಲಿದ್ದಾರೆ. ಪಂ.ಷಡಕ್ಷರಯ್ಯ ಅವರು ರಾಜ್ಯ ಹಾಗೂ ದೇಶದ ವಿವಿಧ ಭಾಗದಲ್ಲಿ ತಬಲಾ ಕಾರ್ಯಕ್ರಮ ನೀಡಿದ್ದರು. ಅವರ ತಬಲಾ ಸೇವೆಗೆ ವಿವಿಧ ಪ್ರಶಸ್ತಿ, ಪುರಸ್ಕಾರ ಒಲಿದು ಬಂದಿವೆ. ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ …
Read More »
admin
November 11, 2021
Breaking News, ಅಪರಾಧ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಗಾಂಜಾ ಮಾರುತ್ತಿದ್ದ ಆರೋಪಿಗಳು ಧಾರವಾಡ :ಧಾರವಾಡದ ಸಪ್ತಾಪುರ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.ನಗರದ ಶಿವಗಿರಿ, ಸಾಯಿ ಹಾಸ್ಟೇಲ್,ಜಯನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ದೃವ ಅನಿಲ್ ಮದನ್,ಶಿವಕುಮಾರ ಮಡಿವಾಳ ಬಂಧಿತ ಆರೋಪಿಗಳು.ವಿದ್ಯಾರ್ಥಿಗಳನ್ನು ದಾಳವಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.ಖಚಿತ ಮಾಹಿತಿ ಮೇರೆಗೆ ದಾಳಿ ನೆಡೆಸಿದ ಅಬಕಾರಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »
admin
September 12, 2019
ಧಾರವಾಡ, ಸುದ್ದಿ
ಧಾರವಾಡ:ಪ್ರಸ್ತುತ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಈ ದುರಂತವನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪರಿಸ್ಥಿತಿಯಲ್ಲಿ ಆಗಿರುವ ಹಾನಿಯನ್ನು ಅಂದಾಜಿಸುವಲ್ಲಿ ರಾಜ್ಯ ಸರ್ಕಾರ ಕೂಡ ವಿಫಲವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜಾನುವಾರುಗಳು ಸತ್ತಿವೆ. ಹೊಲ-ಗದ್ದೆಗಳಲ್ಲಿನ ಅಪಾರ ಮೌಲ್ಯದ ಬೆಳೆ …
Read More »
admin
September 12, 2019
ಧಾರವಾಡ, ಸುದ್ದಿ
ಧಾರವಾಡ:ಇವತ್ತು ಮತ್ತು ನಾಳೆ ಉತ್ತರ ಕರ್ನಾಟಕ ಭಾಗದಲ್ಲಿ ಓಡಾಡಲಿದ್ದೇನೆ. ನಮ್ಮ ಪಕ್ಷದ ವರಿಷ್ಠರು ನಿನ್ನೆ ಸಂತ್ರಸ್ತರ ನೆರವಿಗೆ ಧಾವಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಾವು ಬಂದಿದ್ದೇವೆ ಎಂದು ನಟ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.ನಗರದಲ್ಲಿ ಹೊಳೆ ಆಲೂರಿನ ಸಂತ್ರಸ್ತ ಅಂಧ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ದಕ್ಷಿಣ ಮತ್ತು ಉತ್ತರ ಕರ್ನಾಟಕ ಬೇರೆಯಲ್ಲ. ನಮ್ಮ ಕಡೆಯಿಂದ …
Read More »