Shaikh BigTv
October 14, 2024
Breaking News, ಧಾರವಾಡ
ಧಾರವಾಡ: ಡಾ.ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಭಾನುವಾರ ರೆಡ್ಡಿ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭ ಜರುಗಿತು. ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ರಾಮಲಿಂಗಾ ರೆಡ್ಡಿ, ಆರ್.ಬಿ.ತಿಮ್ಮಾಪುರ, ಎಚ್.ಕೆ.ಪಾಟೀಲ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಎನ್.ಎಚ್.ಕೋನರಡ್ಡಿ, ಪ್ರಕಾಶ ಕೋಳಿವಾಡ, ಪ್ರಸಾದ್ ಅಬ್ಬಯ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾನು ಯಾವತ್ತೂ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ನನಗೆ ಸಹಕಾರಿ ಕ್ಷೇತ್ರದಲ್ಲಿ ಜ್ಞಾನ …
Read More »
Shaikh BigTv
October 14, 2024
Breaking News, ಧಾರವಾಡ
ಅಣ್ಣಿಗೇರಿ: ಪಟ್ಟಣದ ದಾಸೋಹ ಮಠದ ಶ್ರೀಗಳಾದ ಶಿವಕುಮಾರ ಮಹಾಸ್ವಾಮಿಗಳು ಬೆಂಗಳೂರಿನ ಚಾಮರಾಜಪೇಟೆಯ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೇದಾಂತ ವಿಭಾಗದಿಂದ ಶ್ರೀಮದ್ ಭಗವದ್ಗೀತಾ ಕೈವಲ್ಯಪದ್ಧತ್ಯೋಃ ತೌಲನಿಕ ಮಧ್ಯಯನಮ್ ವಿಷಯದ ಕುರಿತು ಪ್ರೌಢ ಪ್ರಭಂದವನ್ನು ಮಂಡಿಸಿ ಡಾಕ್ಟರೇಟ್ ಪದವಿ (ವಿದ್ಯಾವಾರಧಿ)ಯನ್ನು ಪಡೆದಿದ್ದಾರೆ. ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವೇದಾಂತ ವಿಭಾಗ ಸಹಾಯಕ ಪ್ರಾಧ್ಯಾಪಕರಾದ ಡಾ.ಶರತ್ ಚಂದ್ರ ಸ್ವಾಮಿ ಮಾರ್ಗದರ್ಶನ ನೀಡಿದ್ದಾರೆ ಎಂದು ದಾಸೋಹ ಮಠದ ನಿರಂತರ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
Read More »
Shaikh BigTv
October 14, 2024
Breaking News, ಧಾರವಾಡ
ಕಲಘಟಗಿ : ಕಲಘಟಗಿ ತಾಲ್ಲೂಕಿನ ರೈತರು ಹಲವು ವರ್ಷಗಳಿಂದ ತಮ್ಮ ಹೊಲಗಳಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಕಬ್ಬಿನ ಬೆಳೆ ಇಳುವರಿ ಬಾರದೆ ಇರುವುದರಿಂದ ರೈತ ಸಂಕಷ್ಟ ಎದುರಿಸಿದ್ದಾನೆ. ಈ ವರ್ಷ ಅದೇ ರೀತಿ ನಷ್ಟ ಅನುಭವಿಸಬಾರದು ಎಂದು ಬಹಳಷ್ಟು ರೈತರು ಕಬ್ಬುಗಳನ್ನು ತೆಗೆದು ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. ಆದರೆ ರೈತನ ದುರದೃಷ್ಟಕ್ಕೆ ಈ ವರ್ಷ ಹೆಚ್ಚು ಮಳೆ ಆಗಿದ್ದು ಹೊಲಗಳಲ್ಲಿ ನೀರು ನಿಂತು ಗೋವಿನ …
Read More »
Shaikh BigTv
October 12, 2024
Breaking News, ಧಾರವಾಡ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಕೋಮು ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ನಾಳೆ ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿ ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಕೇಸ್ ವಜಾಗೊಳಿಸಬಾರದೆಂದು ಮನವಿ ಸಲ್ಲಿಸಲಾಗುತ್ತದೆ. ಅದಕ್ಕೂ ಬಗ್ಗದೆ ಇದ್ರೆ ಧಾರವಾಡ ಜಿಲ್ಲಾ ಬಿಜೆಪಿ ವತಿಯಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸ್ಪಂದನೆ ಮಾಡಿ ಈ ಕೇಸ್ ಹಿಂಪಡೆಯದೆ ಇದ್ರೆ ಇಲ್ಲಿಗೆ …
Read More »
Shaikh BigTv
October 11, 2024
Breaking News, ಧಾರವಾಡ
ಕುಂದಗೋಳ: ದೇವಸ್ಥಾನಕ್ಕೆ ಹೋಗಿ ವಾಪಾಸ್ ಮನೆಗೆ ತೆರಳುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದ, ಘಟನೆ ರಾಮಗಿರಿ ಬಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಲಕ್ಷೇಶ್ವರ ರಾಜ್ಯ ಹೆದ್ದಾರಿಯ ರಾಮಗಿರಿ ಬಳಿಯಲ್ಲಿ ಲಕ್ಷ್ಮೀಶ್ವರ ಪಟ್ಟಣದ ಲಕ್ಷ್ಮಣ ಗೌಡನಾಯ್ಕರ್, ನೀಲಪ್ಪ ಎಂಬಾತರೇ ಗಾಯಗೊಂಡಿದ್ದಾರೆ. ಇವರು ನವರಾತ್ರಿ ನಿಮಿತ್ತ ರಾಮಗಿರಿಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ, ಪುನಃ ರಸ್ತೆ ಎಡಬದಿಯಲ್ಲಿ ಲಕ್ಷ್ಮೀಶ್ವರಕ್ಕೆ ತೆರಳುತ್ತಿದ್ದ ವೇಳೆ ತಕ್ಷಣ ಬೈಕ್ ಬಲಬದಿಗೆ ತೆಗೆದುಕೊಂಡ ವೇಳೆ ಸಾರಿಗೆ ಬಸ್ …
Read More »
Shaikh BigTv
October 11, 2024
Breaking News, ಧಾರವಾಡ
ನವಲಗುಂದ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಮೈದುಂಬಿ ಹರಿಯುತ್ತಿವೆ. ನಗರದಲ್ಲಿ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳ ಸಂಗಮವಾಗುವದು. ಯಮನೂರು ಮತ್ತು ನರಗುಂದ ಮಾರ್ಗಗಳ ಮಧ್ಯ ಇರುವ ಸೇತುವೆಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಿದ್ದು, ಅಕ್ಕ ಪಕ್ಕದ ಜಮೀನುಗಳು ಜಲಾವೃತಗೊಂಡಿವೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಳ್ಳದ ಪಕ್ಕದ ಜನರು ಮುಂಜಾಗ್ರತೆ ವಹಿಸಿ ಎಂಬ ಮುನ್ಸೂಚನೆ ನೀಡಿದ್ದಲ್ಲದೆ ಆಯಾ ತಾಲೂಕಿನಲ್ಲಿ ಸಹಾಯವಾಣಿ ಆರಂಭಿಸಿದ್ದಾರೆ. ಇನ್ನೂ ಸಾರ್ವಜನಿಕರು ಎಚ್ಚರಿಕೆ ವಹಿಸಿ …
Read More »
Shaikh BigTv
October 11, 2024
Breaking News, ಧಾರವಾಡ
ಅಳ್ಳಾವರ: ಭತ್ತದ ಬೆಳೆ ಸಂಪೂರ್ಣ ಜಲಾವೃತವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಳ್ಳಾವರ ತಾಲೂಕಿನಾದ್ಯಂತ ವರ್ಷದ ಸರಾಸರಿಗಿಂತ ಈ ಬಾರಿ ತುಸು ಹೆಚ್ಚೇ ಮಳೆಯಾಗಿದೆ. ಭಾರೀ ಪ್ರಮಾಣದ ಮಳೆಗೆ ಬೆಳೆಗಳೆಲ್ಲ ಮಳೆ ನೀರಿಗೆ ಆಹುತಿಯಾಗಿವೆ. ಕಟಾವಿಗೆ ಬಂದ ಭತ್ತದ ಬೆಳೆ ಮೇಲೆಯೇ ನೀರು ಹರಿಯುತ್ತಿದ್ದು, ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ಅಲ್ಪ ಸ್ವಲ್ಪ ಬಂದ ಬೆಳೆಯು ಕೈಗೆ …
Read More »
Shaikh BigTv
October 11, 2024
Breaking News, ಧಾರವಾಡ
ಕುಂದಗೋಳ : ಐಕ್ಯೂಎಸಿ ಯುವ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋಟರಿ ಕ್ಲಬ್ ಮಿಡ್’ಟೌನ್ ಧಾರವಾಡದ ಸಹಯೋಗದೊಂದಿಗೆ ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದ ಜಿ.ಎಸ್.ಪಾಟೀಲ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನೂ ಪ.ಪೂ.ಶಿವಾನಂದ ಮಹಾ ಸ್ವಾಮೀಜಿ ಹಾಗೂ ಕಲ್ಯಾಣಪುರಮಠದ ಬಸವಣ್ಣ ಅಜ್ಜ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ಜೆ.ಎನ್. ಆರಿಕಟ್ಟಿ ರಕ್ತದಾನದ ಮಹತ್ವ ಪ್ರಯೋಜನ ಕುರಿತು ವಿದ್ಯಾರ್ಥಿಗಳಿಗೆ ಅರಿವು …
Read More »
Shaikh BigTv
October 10, 2024
Breaking News, ಧಾರವಾಡ
ಧಾರವಾಡ: ಸಂಪಿಗೆನಗರ, ನೀಲ ಸಿಟಿ, ವ್ಯಾಸ ವಿಹಾರ ಲೇಔಟ್, ಶ್ರೀಶ್ ರೆಸಿಡೆನ್ಸಿ ಲೇಔಟ್‌ಗಳಲ್ಲಿ ವ್ಯಾಪಕವಾಗಿ ಮಳೆ ನೀರು ನುಗ್ಗಿದೆ. ಮನೆಯ ಮುಂದೆ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಜನ ಹೊರಗಡೆ ಬರಲೂ ಆಗುತ್ತಿಲ್ಲ. ನೀರಿನೊಂದಿಗೆ ಹಾವು, ಚೇಳುಗಳು ಸಹ ಬರುತ್ತಿದ್ದು, ಜನ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ, ಪ್ರೋಣ್ ಕ್ಯಾಮೆರಾ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಸ್ಥಳೀಯರು …
Read More »
Shaikh BigTv
October 10, 2024
Breaking News, ಧಾರವಾಡ
ಕುಂದಗೋಳ : ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ಇಂದು ಬೆಳಿಗ್ಗೆವರೆಗೂ ಸುರಿದ ಧಾರಾಕಾರ ಮಳೆಗೆ ರೈತಾಪಿ ಜನ ಕಿತ್ತು ಕೈ ಬಿಟ್ಟ ಶೇಂಗಾ, ಸೋಯಾಬಿನ್ ಸೇರಿದಂತೆ ಹತ್ತಿ ಬೆಳೆ ಸಂಪೂರ್ಣ ಜಲಾವೃತವಾಗಿವೆ. ಇನ್ನೂ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಕೆರೆ ಕಾಲುವೆ ಒಡೆದು ಅಕ್ಕಪಕ್ಕದ ಹೊಲಗಳಿಗೆ ರಭಸದಿಂದ ನೀರು ನುಗ್ಗಿದ ಪರಿಣಾಮ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿವೆ. ಸದ್ಯ ನೀರಿನ ವೇಗ ಹೆಚ್ಚುತ್ತಿರುವ ಕಾರಣ ರೈತಾಪಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. …
Read More »