Breaking News

ದೆಹಲಿ

ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭ

ನವದೆಹಲಿ : ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಒಟ್ಟು 1,200 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 50 ಸಾವಿರ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಎಲ್ಲ ರಾಜ್ಯಗಳಲ್ಲಿ ಒಟ್ಟು 650ಕ್ಕೂ ಹೆಚ್ಚು ವೀಕ್ಷಕರು ಕಾರ್ಯನಿರ್ವಹಿಸಲಿದ್ದು,ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಪತ್ರಗಳ ಎಣಿಕೆ ನಡೆಯಲಿದೆ. ‌ 403 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 750ಕ್ಕೂ …

Read More »

ದೇಶದ 28 ಸಾಧಕಿಯರಿಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

ನವದೆಹಲಿ: ದೇಶದ 28 ಸಾಧಕಿಯರಿಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪರಿಗಣಿಸಿ ಮಾ.8ರ ಮಹಿಳಾ ದಿನಾಚರಣೆಯಂದು ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ರವರು ನಾರಿ ಶಕ್ತಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗವಹಿಸಲಿದ್ದಾರೆ.“ವಯಸ್ಸು, ಭೌಗೋಳಿಕ ಅಡೆತಡೆಗಳು, ಸಂಪನ್ಮೂಲಗಳನ್ನು ಹೊಂದಲು ಇರುವ ಅಡ್ಡಿಗಳನ್ನು ಮೀರಿ ಈ ಸಾಧಕಿಯರು ಗಣನೀಯ ಸಾಧನೆ ಮಾಡಿದ್ದಾರೆ.

Read More »

ಭಾರತದಲ್ಲಿ ಗಣನೀಯವಾಗಿ ಇಳಿಕೆ ಕಂಡ ಕೋವಿಡ್ ಪ್ರಕರಣಗಳು

ಹೊಸದಿಲ್ಲಿ: ಭಾರತದಲ್ಲಿ ಮೂರನೇ ಅಲೆ ಮುಕ್ತಾಯವಾಗಿರುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಕಳೆದ 22 ತಿಂಗಳಲ್ಲೇ ಕನಿಷ್ಠ ಸಾಪ್ತಾಹಿಕ ಪ್ರಕರಣಗಳು ಕಳೆದ ವಾರ ದೇಶದಲ್ಲಿ ವರದಿಯಾಗಿವೆ. 2020ರ ಮೇ ತಿಂಗಳ ಬಳಿಕ ಇಷ್ಟೊಂದು ಕಡಿಮೆ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು.ಕಳೆದ ನಾಲ್ಕು ವಾರಗಳಲ್ಲಿ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಪ್ರತಿ ವಾರ ಅರ್ಧದಷ್ಟು ಕಡಿಮೆಯಾಗಿದೆ. ಫೆಬ್ರವರಿ 21-27ರ ಅವಧಿಯಲ್ಲಿ ದೇಶದಲ್ಲಿ 86097 ಪ್ರಕರಣಗಳು ವರದಿಯಾಗಿದ್ದವು. ಅದಕ್ಕೂ ಹಿಂದಿನ ಮೂರು ವಾರಗಳಲ್ಲಿ ಅನುಕ್ರಮವಾಗಿ …

Read More »

ಇಂದು ಪ್ರಧಾನಿ ಮೋದಿ ಪುಣೆ ಮೆಟ್ರೋ ರೈಲು ಯೋಜನೆಗೆ ಚಾಲನೆ

ನವದೆಹಲಿ: ಮೂಲಸೌಕರ್ಯಗಳನ್ನು ಒದಗಿಸುವ ಪ್ರಯತ್ನದಲ್ಲಿ ಪ್ರಧಾನಿ ಮೋದಿ ಇಂದು ಪುಣೆಗೆ ಆಗಮಿಸಲಿದ್ದು, ಪುಣೆ ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ. ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.ಬೆಳಗ್ಗೆ 11 ಗಂಟೆ ಸುಮಾರಿಗೆ ಪುಣೆ ಮಹಾನಗರ ಪಾಲಿಕೆ ಆವರಣದಲ್ಲಿ ʻಛತ್ರಪತಿ ಶಿವಾಜಿ ಮಹಾರಾಜʼರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಪ್ರತಿಮೆಯು 1,850 ಕೆಜಿ ಗನ್‌ಮೆಟಲ್‌ನಿಂದ ಮಾಡಲ್ಪಟ್ಟಿದೆ ಮತ್ತು ಸುಮಾರು 9.5 ಅಡಿ ಎತ್ತರವಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ಪುಣೆ …

Read More »

ದೇಶದಲ್ಲಿ ಕೊರೊನಾ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಕಳೆದ 24 ಗಂಟೆಯಲ್ಲಿ ಕೇವಲ 6,396 ಜನರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. 24 ಗಂಟೆಯಲ್ಲಿ ಮತ್ತೆ 201 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 514589 ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 69897 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 13450 ಜನರು ಕೋವಿಡ್ …

Read More »

ಉಕ್ರೇನ್‌ನಲ್ಲಿ ಸಿಲುಕಿರುವ 6 ಸಾವಿರ ಜನ ಭಾರತಕ್ಕೆ ವಾಪಸ್

ಹೊಸದಿಲ್ಲಿ: ಉಕ್ರೇನ್‌ನಲ್ಲಿ ಸಿಲುಕಿರುವ 20 ಸಾವಿರ ಭಾರತೀಯರಲ್ಲಿ 6 ಸಾವಿರ ಮಂದಿಯನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ವಿ. ಮುರಳೀಧರನ್‌ ತಿಳಿಸಿದ್ದಾರೆ. ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ನಾಗರಿಕರು ಸೇರಿ ಒಟ್ಟು 20,000 ಮಂದಿಯಿದ್ದಾರೆ. ಅವರಲ್ಲಿ 6,000 ಮಂದಿಯನ್ನು ವಾಪಸ್‌ ಕರೆಯಿಸಿಕೊಳ್ಳಲಾಗುತ್ತಿದೆ. ವಾಪಸ್‌ ಬಂದವರಲ್ಲಿ 4,000 ಮಂದಿಯನ್ನು ಯುದ್ಧ ಆರಂಭಕ್ಕೆ ಅಂದರೆ ಫೆ. 24ಕ್ಕಿಂತ ಮುನ್ನವೇ ಸ್ವದೇಶಕ್ಕೆ …

Read More »

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಳಿಕೆ

ನವದೆಹಲಿ : ದೇಶದಲ್ಲಿ ಇಂದು ಕೊರೊನಾ ವೈರಸ್  ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 6,561 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 6,561 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಕಳೆದ 24 ಗಂಟೆಗಳಲ್ಲಿ 142 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್-19 | ಭಾರತವು 6,561 ಹೊಸ ಪ್ರಕರಣಗಳು, 142 ಸಾವುಗಳು ಮತ್ತು 14,947 ಚೇತರಿಕೆಗಳನ್ನು ವರದಿ …

Read More »

ಉಕ್ರೇನ್‌ನಲ್ಲಿ ಸಿಲುಕಿರು 200 ವಿದ್ಯಾರ್ಥಿಗಳು ರೊಮೇನಿಯಾದಿಂದ ದೆಹಲಿಗೆ ಆಗಮನ

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಸುಮಾರು 200 ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಇಂದು ರೊಮೇನಿಯಾದಿಂದ ದೆಹಲಿ ತಲುಪಿದೆ. ʻಆಪರೇಷನ್ ಗಂಗಾ ಅಡಿಯಲ್ಲಿ ಇಂಡಿಗೋ ವಿಶೇಷ ವಿಮಾನವು ಬುಧವಾರ (ಸ್ಥಳೀಯ ಕಾಲಮಾನ) ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಹೊರಟಿದೆ. ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ನಾಗರಿಕರನ್ನು ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ‘ನಾವು ಕಷ್ಟಗಳ ನಡುವೆಯೂ ನಮ್ಮ ನಾಗರಿಕರನ್ನು ಮರಳಿ ಕರೆತರುತ್ತಿದ್ದೇವೆ. ಸಂಕಷ್ಟದಲ್ಲಿರುವ …

Read More »

ರೊಮೇನಿಯಾದ ಪ್ರಧಾನಿಗೆ ಕರೆ ಮೂಲಕ ಧನ್ಯವಾದ ತಿಳಿಸಿದ ಮೋದಿ

ನವದೆಹಲಿ: ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ರೊಮೇನಿಯಾದ ಪ್ರಧಾನಿ ನಿಕೋಲೇ-ಐಯೋನೆಲ್ ಸಿಯುಕಾ ಜತೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಉಕ್ರೇನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ರೊಮೇನಿಯಾ ನೀಡಿದ ನೆರವಿಗಾಗಿ ಪ್ರಧಾನಿ ನಿಕೊಲೆ – ಐಯೋನೆಲ್ ಸಿಯುಕಾ ಅವರಿಗೆ ಧನ್ಯವಾದ ಹೇಳಿದರು. ಭಾರತೀಯ ನಾಗರಿಕರಿಗೆ ವೀಸಾಗಳಿಲ್ಲದೇ ರೊಮೇನಿಯಾ ಪ್ರವೇಶಿಸಲು ಅವಕಾಶ ನೀಡಿದ್ದನ್ನು ವಿಶೇಷವಾಗಿ ಶ್ಲಾಘಿಸಿದರು. ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು …

Read More »

ಗತಿಶಕ್ತಿ ಯೋಜನೆಯಿಂದ ನವದಿಶೆ ಸಿಗಲಿದೆ : ಮೋದಿ

ನವದೆಹಲಿ: ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಿಂದ ಆಧುನಿಕ ಮೂಲಭೂತ ಸೌಲಭ್ಯ ನಿರ್ಮಾಣಕ್ಕೆ ನವದಿಶೆ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್‌ಗೆ ಸಂಬಂಧಿಸಿ ನಡೆದ ವೆಬ್‌ ಗೋಷ್ಠಿಯಲ್ಲಿ ಪಾಲ್ಗೊಂಡು ಮೋದಿ ಮೇಲಿನಂತೆ ನುಡಿದರು. ಗತಿಶಕ್ತಿ ಯೋಜನೆಯನ್ನು ಕಳೆದ ವರ್ಷ ಘೋಷಿಸಲಾಗಿತ್ತು. ಯಾವುದೇ ಮೂಲಸೌಕರ್ಯ ನಿರ್ಮಾಣದ ವೇಳೆ ಬೇರೆಬೇರೆ ಇಲಾಖೆಗಳಿಂದ ಎದುರಾಗುವ ಅಡೆತಡೆಗಳನ್ನು ನಿವಾರಿಸಲು, ಅತ್ಯುತ್ತಮವಾದ, ಏಕೀಕೃತವಾದ ರೀತಿಯಲ್ಲಿ ಯೋಜನೆ ಮಾಡಿ, ಜಾರಿ ಮಾಡಲು ಇದನ್ನು ಆರಂಭಿಸಲಾಗಿದೆ. ಇದರ ಮೂಲಕ ಸರ್ಕಾರಿ-ಖಾಸಗಿ …

Read More »