Breaking News

ದೆಹಲಿ

ಅರಮನೆ ನಗರಿಯಲ್ಲಿ ಮತ್ತೊಂದು ಓಮಿಕ್ರಾನ್‌ ಪತ್ತೆ-ರಾಜ್ಯದಲ್ಲಿ 39ಕ್ಕೆರಿದ ಸೋಂಕಿತರ ಸಂಖ್ಯೆ-ಮೈಸೂರಲ್ಲಿ 2

ಮೈಸೂರು : ಮೈಸೂರಿನಲ್ಲಿ ಮತ್ತೋರ್ವ ವಿದ್ಯಾರ್ಥಿನಿಗೆ ಕೊರೊನಾ ರೂಪಾಂತರಿ ಒಮಿಕ್ರಾನ್‌ ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಮೈಸೂರು ವಿವಿ ವಿದೇಶಿ ವಿದ್ಯಾರ್ಥಿನಿಗೆ ಒಮಿಕ್ರಾನ್‌ ದೃಢಪಟ್ಟಿದ್ದು, ಈಕೆ ಡಿಸೆಂಬರ್‌ 20ರಂದು ತಾಂಜೇನಿಯಾ ದೇಶದಿಂದ ಮೈಸೂರಿಗೆ ಆಗಮಿಸಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಸೋಂಕಿತೆಯನ್ನ ಪ್ರತ್ಯೇಕವಾಗಿರಿಸಿದ ಜಿಲ್ಲಾಡಳಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ಇನ್ನು ಸೋಂಕಿತೆಯ ಸಂಪರ್ಕಿತರನ್ನ ಜಿಲ್ಲಾಡಳಿತ ಪತ್ತೆ …

Read More »

ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್‌ಗೆ ಕೋವಿಡ್ ದೃಢ

ಕೋಲ್ಕತ್ತ: ‘ನನಗೆ ಕೋವಿಡ್‌-19 ಇರುವುದು ದೃಢಪಟ್ಟಿದ್ದು. ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದೇನೆ’ ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಹಿರಿಯ ನಾಯಕ, ಸಂಸದ ಡೆರೆಕ್ ಓಬ್ರಿಯಾನ್ ಮಂಗಳವಾರ ಹೇಳಿದ್ದಾರೆ. ‘ಕಳೆದ ಮೂರು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಮತ್ತು ರೋಗಲಕ್ಷಣಗಳನ್ನು ಹೊಂದಿರುವವರು ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ’ ಎಂದೂ ಡೆರೆಕ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Read More »

‘ಸ್ವಾವಲಂಬಿ ಭಾರತ’ ಪರಿಕಲ್ಪನೆಯ ಸಾಕಾರಕ್ಕಾಗಿ ಎನ್‌ಇಪಿ ಜಾರಿ: ಯೋಗಿ ಆದಿತ್ಯನಾಥ್

ಕಾನ್ಪುರ: ‘ಸ್ವಾವಲಂಬಿ ಭಾರತ’ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ. ಕಾನ್ಪುರ ಐಐಟಿಯ 54ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿರುವ ಯೋಗಿ, ‘ಸ್ವಾವಲಂಬಿ ಭಾರತ ಪರಿಕಲ್ಪನೆಯ ಸಾಕಾರಕ್ಕಾಗಿ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020ರಲ್ಲಿ ಅನುಷ್ಠಾನಗೊಳಿಸಲಾಗಿದೆ. ದೂರದೃಷ್ಟಿ ಮತ್ತು ರಾಜ್ಯದ ಯುವಕರಿಗೆ ಹೊಸ ದಾರಿ ತೋರುವ ಕಾನ್ಪುರ ಐಐಟಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ -ಐಐಟಿ, ಲಖನೌ ಐಐಟಿಯನ್ನು …

Read More »

ಅರುಣಸಿಂಗ್‌ ಹಾಗೂ ಕೇಂದ್ರದ ವರಿಷ್ಠರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ-ಸಿಎಂ ಬೊಮ್ಮಾಯಿ

ಹುಬ್ಬಳ್ಳಿ- ಪಕ್ಷದ ಸಂಘಟನೆ,ಮುಂಬರೋ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗುತ್ತೆ. ಹುಬ್ಬಳ್ಳಿ ಏರ್ ಪೊರ್ಟ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ. ಕಾರ್ಯಕಾರಣಿಯಲ್ಲಿ ಕೆಲ ಮಹತ್ವದ ಕೈಗೊಳ್ಳಾಗುತ್ತೆ ಸಂಪುಟ ವಿಸ್ತರಣೆ ಬಗ್ಗೆ ನಾನು ಪ್ರತಿಕ್ರಿಯೇ ನೀಡಲ್ಲ. ಕಾರ್ಯಕಾರಣಿ ಅಜೆಂಡಾ ಬಗ್ಗೆ ಪಕ್ಷ ಹೇಳುತ್ತೆ. ಸಿಎಂ ವಿಶ್ರಾಂತಿ ಪಡೆದು ಕೆಲಸ‌ ಮಾಡಲಿ ಎನ್ನೋ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆ ವಿಚಾರ. ಎಂ.ಪಿ ಕುಮಾರಸ್ವಾಮಿಗೆ ನನ್ಮೇಲೆ ಬಹಲ ಪ್ರೀತಿ ಇದೆ. ವರ್ಷಪೂತಿ ದಿನಾಲು …

Read More »

11 ವರ್ಷದ ‘ಅಪ್ರಾಪ್ತ ತಾಯಿ’ ಗರ್ಭಪಾತಕ್ಕೆ ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಮುಂಬೈ: ತನ್ನ 22 ವರ್ಷದ ಸೋದರಸಂಬಂಧಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿಯಾಗಿದ್ದ ಹನ್ನೊಂದು ವರ್ಷದ ಬಾಲಕಿಯ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯಕ್ಕೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಸೋಮವಾರ, ನ್ಯಾಯಮೂರ್ತಿಗಳಾದ ಎಸ್‌ಜೆ ಕಥವಾಲ್ಲಾ ಮತ್ತು ಅಭಯ್ ಅಹುಜಾ ಅವರ ರಜಾಕಾಲದ ಪೀಠವು ಅನುಮತಿಸಲಾದ 20 ವಾರಗಳ ಮಿತಿಯನ್ನು ಮೀರಿದ ಹೊರತಾಗಿಯೂ ಮತ್ತು ಭ್ರೂಣವು ಕೇವಲ ಸಣ್ಣ ಅಸಹಜತೆಗಳನ್ನು ಹೊಂದಿದ್ದರೂ ಸಹ ಹುಡುಗಿಗೆ (11 ವರ್ಷ 9 ತಿಂಗಳು) ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ …

Read More »

ಪಂಜಾಬ್ ಚುನಾವಣೆ 2022: 15 ಸ್ಥಾನಗಳಿಗೆ ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚಂಡೀಗಢ : ಪಂಜಾಬ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 15 ಅಭ್ಯರ್ಥಿಗಳಿಗೆ ಪಕ್ಷದಲ್ಲಿ ಟಿಕೆಟ್ ನೀಡಲಾಗಿದೆ. ಇದರಲ್ಲಿ ಪ್ರಮುಖವಾದ ಹೆಸರು ಡಾ.ಚರಂಜಿತ್ ಸಿಂಗ್ ಅವರದ್ದು. ಚಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಎಎಪಿ ಡಾ.ಚರಂಜಿತ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಪ್ರಸ್ತುತ ಪಂಜಾಬ್‌ನ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್‌ನ …

Read More »

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿದ ಅರುಣ ಸಿಂಗ್

ಹುಬ್ಬಳ್ಳಿ :ಹುಬ್ಬಳ್ಳಿಯಲ್ಲಿಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ. ಕಾರ್ಯಕಾರಿಣಿಯ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ. ಪೂರ್ಣ ಕುಂಭದೊಂದಿಗೆ ಅರುಣ್ ಸಿಂಗ್ ಅವರನ್ನ ಹೋಟೆಲ್ ಆವರಣಕ್ಕೆ ಕರೆತಂದ ಮಹಿಳಾ ಕಾರ್ಯಕರ್ತೆಯರು. ಅರುಣ್ ಸಿಂಗ್ ರಾಜ್ಯ ಬಿಜೆಪಿ ಉಸ್ತುವಾರಿ. ದೀನದಯಾಳ ಅವರ ಚಿಂತನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರವಸಾಧನೆ ಸಾರುವ ಪ್ರದರ್ಶಿನಿ ಉದ್ಘಾಟಿಸಿದ ಅರುಣ್ ಸಿಂಗ್. ದೀಪ ಬೆಳಗಿಸುವ ಮೂಲಕ ಚಾಲನೆ. ಅರುಣ್ ಸಿಂಗ್ ಅವರಿಗೆ ಸಾಥ್ ನೀಡಿದ ಕೇಂದ್ರ ಸಚಿವ ಪ್ರಹ್ಲಾದ …

Read More »

ಕಲಾವಿದರ ಕುಂಚದಿಂದ ಅರಳಿದ ಬಿಜೆಪಿ ನಾಯಕರ ಸಾಧನೆಯ ಚಿತ್ರ ಪ್ರದರ್ಶನ

ಹುಬ್ಬಳ್ಳಿ: ನಗರದ ಖಾಸಗಿ ಹೊಟೇಲನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ದೀನದಯಾಳಜಿ ಅವರ ಚಿಂತನೆ, ಮೋದಿಯವರ ಸಾಧನೆ ಹಾಗೂ ಬಿಜೆಪಿ ಸಾಧನೆಯ ಕುರಿತು ಕಲಾವಿದರ ಕುಂಚದಿಂದ ಅರಳಿದ ಚಿತ್ರ ಪ್ರದರ್ಶಿನಿ ಏರ್ಪಡಿಸಲಾಗಿತ್ತು.. ಬಿಜೆಪಿ ಸಾಧನೆ ಹಾಗೂ ನಾಯಕರ ಚಿತ್ರ ಪ್ರದರ್ಶನಕ್ಕೆ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ನಳೀನ್ ಕುಮಾರ್ ಕಟೀಲು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೋವಿಂದ್ ಕಾರಜೋಳ, ಜಗದೀಶ್ ಶೆಟ್ಟರ್, ಡಿ.ಕೆ.ಅರುಣಾ, ಮಹೇಶ …

Read More »

ಬಿಜೆಪಿ ಕಾರ್ಯಕಾರಣಿ ಸಭೆಗೆ ಸಕಲ ಸಿದ್ಧತೆ: ಮಹತ್ವದ ಚರ್ಚೆ ಕ್ಷಣಗಣನೆ…!

ಹುಬ್ಬಳ್ಳಿ: ಸತತ 10 ವರ್ಷಗಳ ನಂತರ ಉತ್ತರ ಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿಗೆ ಸಜ್ಜುಗೊಂಡಿದ್ದು, ಕಮಲ ಪಡೆಯ ನಾಯಕರ ಆಗಮನಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ಮತ್ತು ನಾಳೆ ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ಸಭೆಗೆ ಸಕಲ‌ ಸಿದ್ಧತೆ ನಡೆದಿದ್ದು, ಇಡೀ ನಗರ ಕೇಸರೀಮಯವಾಗಿ ರಾರಾಜಿಸುತ್ತಿದೆ. ಸತತ 10 ವರ್ಷಗಳ ನಂತರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ಬಿಜೆಪಿ …

Read More »

ಗೋವಾದಲ್ಲಿ ಮೊದಲ ಓಮಿಕ್ರಾನ್ ಪತ್ತೆ

ಪಣಜಿ: ಯುಕೆಯಿಂದ ಹಿಂದಿರುಗಿದ 8 ವರ್ಷದ ಬಾಲಕನಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ಗೋವಾದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ವರದಿಯಾಗಿದೆ. ಡಿಸೆಂಬರ್ 17 ರಂದು ಇಂಗ್ಲೆಂಡ್‍ನಿಂದ ಆಗಮಿಸಿದ 8 ವರ್ಷದ ಬಾಲಕನಲ್ಲಿ ಓಮಿಕ್ರಾನ್ ಪತ್ತೆಯಾಗಿದ್ದು, ಇದು ರಾಜ್ಯದಲ್ಲಿ ದಾಖಲಾದ ಮೊದಲ ಓಮಿಕ್ರಾನ್ ಪ್ರಕರಣ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ತಿಳಿಸಿದ್ದಾರೆ. ಬಾಲಕನ ಗಂಟಲ ದ್ರವ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಗೆ …

Read More »