Breaking News

ದೆಹಲಿ

ಸರಣಿ ಸ್ಫೋಟ, ನ್ಯೂಜಿಲ್ಯಾಂಡ್ ಘನೆಯ ಪ್ರತೀಕಾರ: ಐಸಿಸ್​

ದೆಹಲಿ: 3 ಚರ್ಚ್​, 3 ಹೋಟೆಲ್​ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಸಂಭವಿಸಿದ ಸರಣಿ ಬಾಂಬ್​ ಸ್ಫೋಟಕ್ಕೆ ತಾನೇ ಕಾರಣ ಅಂತಾ ಐಸಿಸ್​ ಉಗ್ರ ಸಂಘಟನೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಸಂಬಂಧ ಉಗ್ರ ಸಂಘಟನೆಯ ನ್ಯೂಸ್​ ಏಜೆನ್ಸಿ ಒಮ್ಯಾಕ್​ ವಿಡಿಯೊವೊಂದನ್ನು ಕೂಡ ಬಿಡುಗಡೆ ಮಾಡಿದೆ. ಸುಮಾರು ಒಂದು ನಿಮಿಷದ ವಿಡಿಯೋದಲ್ಲಿ 8 ಮಂದಿ ಉಗ್ರರು , ಆತ್ಮಾಹುತಿ ದಾಳಿಗೆ ಕೈಜೋಡಿಸ್ತಿರುವುದ ದೃಶ್ಯ ಸೆರೆಯಾಗಿದೆ. ಇನ್ನೊಂದೆಡೆ ಏಳು ಉಗ್ರರ ಹೆಸರನ್ನು ರಿಲೀಸ್​ …

Read More »

ನಡೆದ ಆತ್ಮಾಹುತಿ ದಾಳಿಕೋರನ ಬಗ್ಗೆ ಇಂಚಿಂಚೂ ಮಾಹಿತಿ ಕೊಟ್ಟಿತ್ತು ಭಾರತ..!

ದೆಹಲಿ: ಝಹರನ್​ ಹಶೀಮ್​ ಈತನಿಗೆ ಭಾರತದಲ್ಲಿ ಸೆರೆಸಿಕ್ಕ ಶಂಕಿತ ಐಸಿಸ್​ ಉಗ್ರನೊಬ್ಬ ಆತ್ಮಾಹುತಿ ದಾಳಿ ಬಗ್ಗೆ ಶ್ರೀಲಂಕಾದಲ್ಲೇ ತರಬೇತಿ ನೀಡಿದ್ದಾನೆ ಎಚ್ಚರವಿರಲಿ ಅಂತಾ ಅಲ್ಲಿನ ಸರ್ಕಾರದ ಭಾರತದ ಭದ್ರತಾ ಸಂಸ್ಥೆಗಳು ಮೊದಲೇ ಎಚ್ಚರಿಕೆ ನೀಡಿದ್ದವು. ಈ ಬಗ್ಗೆ ಇದೀಗ ಪೂರಕ ಮಾಹಿತಿ ಹೊರಬಿದ್ದಿದ್ದು, ಕೇಂದ್ರದ ಗುಪ್ತಚರ ಸಂಸ್ಥೆ ಹಾಗೂ ಎನ್​ಐಎ ಶ್ರೀಲಂಕಾದಲ್ಲಿ ಅತಿದೊಡ್ಡ ದುಷ್ಕೃತ್ಯಗಳು ಸಂಭವಿಸಲಿದೆ, ಉಗ್ರ ಸಂಘಟನೆ ಎನ್​ಟಿಜೆ ಐಸಿಸ್​ನೊಂದಿಗೆ ಸೇರಿ, ಈ ಕೃತ್ಯವೆಸಗಲಿದೆ ಅದರ ರೂವಾರಿ ಝಹರನ್​ …

Read More »

ಗ್ಯಾಂಗ್ ರೇಪ್ ಸಂತ್ರಸ್ತೆ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಆದೇಶ.

ನವದೆಹಲಿ: 2002ರ ಗುಜರಾತ್ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.ಅಷ್ಟೇ ಅಲ್ಲದೆ, 2002ರಿಂದ ಸಂತ್ರಸ್ತ ಮಹಿಳೆ ಅಲೆಮಾರಿ ಜೀವನ ನಡೆಸುತ್ತಿದ್ದಾಳೆ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಾಸಿಸಲು ಮನೆಯನ್ನೂ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.ಪ್ರಕರಣ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಾಧೀಶ ರಾಜನ್ ಗೊಗೊಯ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠಕ್ಕೆ …

Read More »

ವಿವಿಪ್ಯಾಟ್ ಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಜಾರಿಗೆ ಕ್ರಮ: ಆಯೋಗ..

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಒಂದು ಕ್ಷೇತ್ರದಿಂದ ಒಂದು ಇವಿಎಂನಲ್ಲಿ ಒಂದು ವಿವಿಪ್ಯಾಟ್ ಬದಲಾಗಿ 5 ಇವಿಯಂಗಳಿಂದ ವಿವಿಪ್ಯಾಟ್ ರಶೀದಿಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.ಭಾರತದ ಚುನಾವಣಾ ಆಯೋಗವು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯರೂಪಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಲಿದೆ” ಎಂದು ಚುನಾವಣಾ ಸಮಿತಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ನಿಖರತೆ …

Read More »

ಮತದಾನಕ್ಕೆ 48 ಗಂಟೆ ಇರುವಾಗ ರಾಜಕೀಯ ಜಾಹೀರಾತುಗಳು ಬ್ಯಾನ್

ನವದೆಹಲಿ: ಲೋಕಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜಕೀಯ ಪಕ್ಷಗಳು ಮತದಾರರ ಮನ ಮುಟ್ಟಲು ಜಾಹೀರಾತುಗಳ ಮೊರೆ ಹೋಗುತ್ತಿವೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಜಾಹೀರಾತುಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಚುನಾವಣೆ ನಡೆಯುವ ದಿನ ಹಾಗೂ ಅದಕ್ಕೂ ಹಿಂದಿನ ದಿನ ಯಾವುದೇ ಜಾಹೀರಾತು ಪ್ರಕಟಿಸದಂತೆ ಆಯೋಗ ಸೂಚಿಸಿದೆ.ದೇಶದಲ್ಲಿ ಒಟ್ಟಾರೆಯಾಗಿ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈ 7 ಹಂತಗಳಲ್ಲೂ ಚುನಾವಣೆ ನಡೆಯುವ ದಿನದ ಹಾಗೂ …

Read More »

ಸಂಕಲ್ಪ ಪತ್ರ’ ಇದು ಇಂದು ಬಿಡುಗಡೆಯಾಗಲಿರೋ ಬಿಜೆಪಿ ಪ್ರಣಾಳಿಕೆ

ನವದೆಹಲಿ: ಲೋಕಸಭಾ ಚುನಾವಣೆಯ ಮಹಾಸಮರದಲ್ಲಿ ಈಗಾಗಲೇ ಅಖಾಡಕ್ಕಿಳಿದಿರುವ ಸರ್ವಪಕ್ಷಗಳು ಸೀಟು ಗೆದ್ದು ಸಿಹಿ ತಿನ್ನಲು ರಣತಂತ್ರ ರೂಪಿಸುತ್ತಿವೆ. ಅದ್ರಲ್ಲೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮತದಾರರಿಗೆ ಭರ್ಜರಿ ಆಫರ್ ಒಡ್ಡಿವೆ. ಈಗ ಮತ್ತೆ ದೇಶದ ಜನರನ್ನ ತನ್ನತ್ತ ಸೆಳೆದುಕೊಳ್ಳಲು ಪ್ರಣಾಳಿಕೆ ಬಿಡುಗಡೆಗೊಳಿಸುವ ಸರದಿ ಬಿಜೆಪಿಯದ್ದು. ‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಪಕ್ಷದ …

Read More »

2019: ಏಪ್ರಿಲ್ 7ಕ್ಕೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಧ್ಯತೆ

ನವದೆಹಲಿ: ಲೋಕಸಭಾ ಚುನಾವಣೆಗೆ ಒಂದು ವಾರವಷ್ಟೇ ಇರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯನ್ನು ಏಪ್ರಿಲ್ 7ರಂದು ಬಿಡುಗಡೆ ಮಾಡುವ ಸಾಧ್ಯತೆಯಿದೆ.ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಪ್ರಣಾಲೈಕ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಪ್ರಣಾಳಿಕೆ ಸಮಿತಿಯಲ್ಲಿ ಕೇಂದ್ರ ಸಚಿವರಾದ …

Read More »

ಆರ್‌ಬಿಐನಿಂದ ರೆಪೋ ದರ ಇಳಿಕೆ..

ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ನಿರೀಕ್ಷೆಯಂತೆ ಸತತ ಎರಡನೇ ಬಾರಿಗೆ ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ಇಂದು ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಆರ್‌ಬಿಐ ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯನ್ನು ಬಲಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ರೆಪೋ ದರವನ್ನು ಶೇ.0.25ರಷ್ಟು ಕಡಿಮೆ ಮಾಡಲಾಗಿದೆ. ಆರ್‌ಬಿಐನ ಈ ನಿರ್ಧಾರದಿಂದಾಗಿ ಗೃಹ ಹಾಗೂ …

Read More »

ಗುಡ್ ನ್ಯೂಸ್: ಆಧಾರ್-ಪ್ಯಾನ್ ಲಿಂಕ್ ಗಡುವು ವಿಸ್ತರಣೆ.

ನವದೆಹಲಿ: ‘ಆಧಾರ್’ ಸಂಖ್ಯೆಯನ್ನು ‘ಪ್ಯಾನ್’ ಕಾರ್ಡ್ ನೊಂದಿಗೆ ಸಂಪರ್ಕಿಸಲು ಸರ್ಕಾರ ಮತ್ತೆ ಆರು ತಿಂಗಳು ಗಡುವು ವಿಸ್ತರಿಸಿದೆ. ಆರನೇ ಬಾರಿಗೆ ಸರ್ಕಾರ ಆಧಾರ್-ಪ್ಯಾನ್ ಲಿಂಕ್ ಗಡುವನ್ನು ವಿಸ್ತರಿಸಿದ್ದು, ಸೆಪ್ಟೆಂಬರ್ 30, 2019 ರವರೆಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ಯಾನ್‌-ಆಧಾರ್‌ ಜೋಡಣೆಗೆ ಈ ಮೊದಲು 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ವಿಸ್ತರಿಸಿ 2019ರ ಮಾರ್ಚ್‌ 31 ರೊಳಗೆ ಆಧಾರ್‌-ಪ್ಯಾನ್‌ ಕಾರ್ಡ್ ಲಿಂಕ್‌ …

Read More »

ಆರ್‌ಬಿಐನಿಂದ ರೆಪೋ ದರ ಇಳಿಕೆ ಸಾಧ್ಯತೆ..

ನವದೆಹಲಿ: ಮುಂಬರುವ ದಿನಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ರೆಪೋ ದರವನ್ನು ಇಳಿಕೆ ಮಾಡುವ ಸಂಭವವಿದೆ ಎನ್ನಲಾಗಿದೆ. ಆರ್‌ಬಿಐ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸುವ ಸಂಭವವಿದೆ.ಗೃಹ ಮತ್ತು ವಾಹನ ಸಾಲಗಳು ಆರ್‌ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆರ್‌ಬಿಐ ರೆಪೋ ದರ ಕಡಿಮೆಯಾದಲ್ಲಿ ಗೃಹ ಮತ್ತು ವಾಹನ ಸಾಲಗಳು ಸೇರಿದಂತೆ ಇತರೆ ಸಾಲಗಳ ಮೇಲಿನ ಬಡ್ಡಿದರ ಕೂಡಾ ಇಳಿಕೆಯಾಗುತ್ತದೆ. ಇದರಿಂದ ಇಎಂಐ ಕೂಡಾ ಕಡಿಮೆಯಾಗಲಿದೆ.ರೆಪೋ ದರ ಎಂದರೇನು?ಆರ್​ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ …

Read More »