Breaking News

ಕಲಬುರಗಿ

ಕಲಬುರಗಿ: ಹೊರವಲಯದ ಕುರಿಕೋಟಾ ಸೇತುವೆ ಮೇಲಿಂದ ಯುವಕನೋರ್ವ ಜಿಗಿದು ಆತ್ಮಹತ್ಯೆ

ಕಲಬುರಗಿ ನಗರದ ಗ್ರಂಥಾಲಯಕ್ಕೆ ಹೋಗುವುದಾಗಿ ಹೇಳಿ ಹೋದ ಯುವಕ ಪ್ರಥಮೇಶ್, ತನ್ನ ಅಕ್ಕನ ಸ್ಕೂಟಿ ತೆಗೆದುಕೊಂಡು ಗುರುವಾರ ಮಧ್ಯಾಹ್ನ ಹಳೆಯ ಕುರಿಕೋಟಾ ಸೇತುವೆ ಮೇಲೆ ನಿಲ್ಲಿಸಿ, ಬಳಿಕ ಸೇತುವೆ ಮೇಲಿಂದ ನದಿಗೆ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ. ಯುವಕ ಪ್ರಥಮೇಶ್,ಗುರುವಾರ ಮಧ್ಯಾಹ್ನವೇ ಜಿಗಿದಿರುವುದು ಶಂಕಿಸಲಾಗಿದೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಮೃತದೇಹ ಪತ್ತೆಗಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಹಾಗಾoವ್ ಪೊಲೀಸ್ ಠಾಣೆಯ …

Read More »

ಕಲಬುರಗಿ : 11 ಮಂದಿಗೆ ನಂಬಿಸಿ 14 ಲಕ್ಷ ರೂ. ಪಡೆದು, ವಂಚಿಸಿದ ಆರೋಪಿಗಳು

ಆರೋಪಿಗಳು ಅಮಾಯಕ ನಿರುದ್ಯೋಗಿ ಯುವಕರನ್ನ ಗುರಿಯಾಗಿಸಿಕೊಂಡು ಅವರಿಗೆ ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುತ್ತೇನೆ ಅಂತ ಆಮಿಷ ಒಡ್ಡಿ ಅವರಿಂದ‌ ಲಕ್ಷಾಂತರ ರೂಪಾಯಿ ದುಡ್ಡು ವಸೂಲಿ ಮಾಡಿ ನಕಲಿ ನೇಮಕಾತಿ ಆದೇಶಗಳನ್ನ ಕೊಟ್ಟು ಕಳುಹಿಸ್ತಿದ್ದರು.ಇದರಲ್ಲಿ ನೀನು ಜೈಲಿಗೆ ಹೋಗುತ್ತೀಯಾ” ಅಂತ ಹೆದರಿಸಿ ಕೇಳುಹಿಸಿದ್ದಾರೆ. ಹೀಗೆ, ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದ ನಾಗೇಶ್ ಮತ್ತು ಅಭಿಷೇಕ್​ ಇಬ್ಬರನ್ನು ಕಲಬುರಗಿ ಜಿಲ್ಲಾ ಸೆನ್ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ.

Read More »

ತಂದೆಯನ್ನೇ ಕೊಂದು ಅಪಘಾತ ಕಥೆ ಕಟ್ಟಿದ ಮಗ,ಸತ್ಯ ಬಯಲು.!

ರಾಜು ಕುಡಿತ ಜಾಸ್ತಿ ಆಗಿತ್ತು‌ ಕಳೆದ 4-5 ವರ್ಷಗಳಿಂದ ಕೆಲಸ ಮಾಡುವುದು ಕಡಿಮೆ ಮಾಡಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದರು. ಕೊನೆಗೆ ಹಣ ಕಿತ್ತುಕೊಂಡು ಹೋಗಿ ಕುಡಿದು ಬಂದು ಅವರನ್ನೇ ಹೊಡೆಯುತ್ತಿದ್ದರು. ತಂದೆ ಕಾಟಕ್ಕೆ ಬೇಸತ್ತು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ಸೇರಿಕೊಂಡು ರಾಜು ಗಾಯಕವಾಡ ಅವರ ಹಲ್ಲೆ ಮಾಡಿದ್ದಾರೆ.ಮೃತದೇಹವನ್ನು ಬೈಕ್ ಮೇಲೆ ತೆಗೆದುಕೊಂಡು ಶಾಹಬಾದ್ ಮುಖ್ಯರಸ್ತೆಯಲ್ಲಿ ಎಸೆದು, ತಲೆ ಮೇಲೆ ಕಲ್ಲು …

Read More »

ಕಲಬುರಗಿ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ.

ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್​ ಆಗಿದ್ದ ಸಂತೋಷ್​ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.‌ ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ‌ ಮಾಡಿರುವ ಸಂತೋಷ್ ಕೊನೆಗೆ‌ ತಾ‌ನೂ ಕೂಡ ಮನೆಯ ಫ್ಯಾನ್​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಘನಘೋರ ಕೃತ್ಯ ‌ಕಂಡು‌ ಇಡೀ ಕಲಬುರಗಿ ಬೆಚ್ಚಿಬಿದ್ದಿದೆ. ಸ್ಟೇಷನ್ ಬಜಾರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More »

ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆಗೆ ಶರಣು!

ಕಮಲಾಪುರ ತಾಲ್ಲೂಕಿನ ಕಲಮೂಡ ಗ್ರಾಮದ ಯುವ ರೈತ ಓಂಕಾರ ಚಂದ್ರಪ್ಪ ಬಿರಾದಾರ (24) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದ ಗಿಡಕ್ಕೆ ಸೋಮವಾರ ರಾತ್ರಿ ನೇಣು ಬಿಗಿದುಕೊಂಡಿದ್ದಾರೆ. ಬೆಳಿಗ್ಗೆ ನೋಡಿದ ಸಾರ್ವಜನಿಕರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಓಂಕಾರ ತಾಯಿ ಹೆಸರಿನಲ್ಲಿ 3 ಎಕರೆ ಜಮೀನಿದೆ. ಕಮಲಾಪುರ ಕೆನರಾ ಬ್ಯಾಂಕಿನಲ್ಲಿ ₹1.25 ಲಕ್ಷ ಸಾಲವಿದೆ. ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತಂದೆಯನ್ನೇ ಕೊಂದು ಅಪಘಾತವೆಂದು ಬಿಂಬಿಸಿದ್ದ ಮಗ.!

ಕಲಬುರಗಿ ಹೊರ ವಲಯ ಶಾಹಬಾದ್ ರಸ್ತೆಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ರಾಜು ಗಾಯಕವಾಡ ಕೂಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಾಜು ಕುಡಿತ ಜಾಸ್ತಿ ಆಗಿತ್ತು‌ ಕಳೆದ 4-5 ವರ್ಷಗಳಿಂದ ಕೆಲಸ ಮಾಡುವುದು ಕಡಿಮೆ ಮಾಡಿದ್ದರು. ಹೆಂಡತಿ ಮತ್ತು ಮಕ್ಕಳಿಗೆ ಗಲಾಟೆ ಮಾಡುತ್ತಿದ್ದರು. ತಂದೆ ಕಾಟಕ್ಕೆ ಬೇಸತ್ತು ಅಪ್ರಾಪ್ತ ಮಗ ಮತ್ತು ಅಳಿಯ ಸಚಿನ್ ಇಬ್ಬರು ಸೇರಿಕೊಂಡು ರಾಜು ಗಾಯಕವಾಡ ಅವರ ಹಲ್ಲೆ ಮಾಡಿದ್ದಾರೆ.

Read More »

ಚಲಿಸುತ್ತಿರುವ ಬಸ್ ನಲ್ಲೆ ಏಕಾಏಕಿ ಕುಸಿದುಬಿದ್ದು ಕಂಡಕ್ಟರ್ ಸಾವು.!

ಕಲಬುರಗಿಯಲ್ಲಿ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಸಾರಿಗೆ ಬಸ್‍ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ಸಾವನ್ನಪ್ಪಿದ್ದಾರೆ.ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಘೂ ಪ್ರಯಾಣಿಕರು ಸೇರಿ ಬಸ್‍ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳು.

ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಹಾಗೂ ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು,ಚೆನ್ನೈ, ಕಲಬುರಗಿ ಕಾರವಾರಕ್ಕೆ ವಿಶೇಷ ರೈಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

Read More »

ಆಟವಾಡುವಾಗ ಸಂಪ್ ನಲ್ಲಿ ಬಿದ್ದು ಇಬ್ಬರು ಮಕ್ಕಳ ಸಾವು!

ಕಲ್ಬುರ್ಗಿಯಲ್ಲಿ ಘೋರವಾದಂತಹ ದುರಂತ ಸಂಭವಿಸಿದ್ದು, ಆಟವಾಡುತ್ತಿದ್ದಾಗ ಸಂಪ್‌ಗೆ ಬಿದ್ದು ಇಬ್ಬರು ಮಕ್ಕಳು ಸಾವನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕೋಳಕೂರ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಆಟವಾಡುತ್ತಿದ್ದಾಗ ಇಬ್ಬರು ಮಕ್ಕಳು ಕಣ್ಮರೆ ಆಗಿದ್ದರು. ಪೋಷಕರು ಎಷ್ಟೇ ಹುಡುಕಾಡಿದರು ಮಕ್ಕಳು ಸಿಕ್ಕಿರಲಿಲ್ಲ. ಮಕ್ಕಳು ಕಾಣದೆ ಇದ್ದಾಗ ಗಾಬರಿಯಾದ ಪೋಷಕರು ಗ್ರಾಮದ ಸಿದ್ದಬಸವೇಶ್ವರ ದೇವಸ್ಥಾನದ ಮೈಕ್ ಮೂಲಕ ಮಕ್ಕಳು ಕಾಣೆಯಾಗಿರುವ ಬಗ್ಗೆ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದರು. ಕೊನೆಗೆ ಪೊಲೀಸರು ಸಂಪ್ ತೆರೆದು ನೋಡಿದಾಗ …

Read More »

ಕಲಬುರ್ಗಿ:ಲಾರಿ ಹರಿದು 5 ವರ್ಷದ ಬಾಲಕ ದುರ್ಮರಣ!

ಲಾರಿಯೊಂದು ಬಾಲಕ ಮೇಲೆ ಹರಿದು ಸ್ಥಳದಲ್ಲೇ 5 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕಲಬುರ್ಗಿಯ ಮಳಖೇಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ.ಕಲಬುರ್ಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಅಲೂರ ಗ್ರಾಮದ ಕೂಲಿ ಕಾರ್ಮಿಕನ ಮಗು ಅಯ್ಯಪ್ಪ ಬಸವರಾಜ ಮೃತಪಟ್ಟಿರುವ ಬಾಲಕ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಚಿತ್ತಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸುತ್ತಿದ್ದಾರೆ.

Read More »