Breaking News

ಧಾರವಾಡ

ವೀರ ಸಾವರ್ಕರ್ ಫೋಟೋ ವಿವಾದದ ಮಧ್ಯೆಯೂ ನರೇಂದ್ರದಲ್ಲಿ ಅದ್ದೂರಿ ಮೆರವಣಿಗೆ

ಧಾರವಾಡ : ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ವಿವಾದ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ . ಈ ವಿವಾದ ಇನ್ನೂ ಹಸಿರಿರುವಾಗಲೇ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಗಿದೆ . 101 ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಮೆರಗು ಹೆಚ್ಚಿಸಿದರಲ್ಲದೇ ಈ ಮೆರವಣಿಗೆಗೆ ಶಾಸಕ ಅಮೃತ ದೇಸಾಯಿ ಅವರೇ ಚಾಲನೆ ನೀಡಿದರು . ಚಕ್ಕಡಿಯಲ್ಲಿ ಸಾವರ್ಕರ್ ಭಾವಚಿತ್ರವನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ …

Read More »

ಬಸ್ -ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ : 2 ಸಾವು

ಧಾರವಾಡ :  ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ -ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲಘಟಗಿಯ ಧಾರವಾಡ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ರೂಸರ್ ನಲ್ಲಿದ್ದವರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ನಂದಿಗದ್ದಿ ಗ್ರಾಮದವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನಾಲ್ವರಿಗೆ ಗಂಭೀರ ಗಾಯಗೊಂಡಿದ್ದು, ಗಾಯಗೊಂಡವರನ್ನು …

Read More »

ಕಾಂಗ್ರೆಸ್ ಗೂಂಡಾಗಳನ್ನು ಕೂಡಲೇ ಬಂಧಿಸಿ : ಸತ್ತಿಗೇರಿ

ಧಾರವಾಡ : ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಭಾವಚಿತ್ರ ಸುಟ್ಟ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು ಇಲ್ಲದೇ ಹೋದರೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತದೆ ಎಂದು ಭಜರಂಗದಳ ಮುಖಂಡ ಶಿವಾನಂದ ಸತ್ತಿಗೇರಿ ಎಚ್ಚರಿಸಿದ್ದಾರೆ . . ಪ್ರತಿಭಟನೆ ಮಾಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಸುಟ್ಟು ಅಪಮಾನ ಮಾಡಿದ್ದಾರೆ . ಇವರ ಮೇಲೆ ಎಫ್‌ಐಆರ್‌ ದಾಖಲಿಸಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಸತ್ತಿಗೇರಿ ಆಗ್ರಹಿಸಿದರು .

Read More »

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆತ : ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದಿದ್ದಕ್ಕೆ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು ಆಡಳಿತ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದಿದ್ದಕ್ಕೆ ಖಂಡನೆ ವ್ಯಕ್ತಪಡಿಸಿದ್ದರು. ಇದೇ ವೇಳೆ ಸಿದ್ದರಾಮಯ್ಯ ಅವರು ಪದೇ ಪದೇ ವೀರ ಸಾವರ್ಕರ್ ವಿರುದ್ಧ ಹೇಳಿಕೆ ನೀಡುತ್ತಿರುವುದು ಆಕ್ರೋಶಕ್ಕೆ …

Read More »

ರಾಜಸ್ಥಾನದಲ್ಲಿ ದಲಿತರ ಮೇಲೆ ಕೊಲೆ ಮಾಡಿದ ಪ್ರಕರಣ ಖಂಡಿಸಿ ಧಾರವಾಡ ದಲ್ಲಿ ಪ್ರತಿಭಟನೆ

ಧಾರವಾಡ :ರಾಜಸ್ಥಾನದಲ್ಲಿ ದಲಿತರ ಮೇಲೆ ಹಲ್ಲೆಮಾಡಿ ಕೊಲೆ ಮಾಡಿದ ಪ್ರಕರಣ ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಹಲ್ಲೆ ಹಾಗೂ ಕೊಲೆಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗುತ್ತಿದ್ದು ಕಠಿಣ ಕಾನೂನು ಕ್ರಮ ರೂಪಿಸಿ ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ರಾಜಸ್ಥಾನ ನಡೆದ ಕೊಲೆ ಪ್ರಕರಣ ಬಹಳಷ್ಟು ಖಂಡನೀಯ ಎಂದು ಘೋಷಣೆ ಕೂಗುತ್ತ ಪ್ರತಿಭಟನಾಕಾರರು …

Read More »

ಕಾರಾಗೃಹದಿಂದ ಆರು ಜನ ಕೈದಿಗಳಿಗೆ ಬಿಡುಗಡೆ ಭಾಗ್ಯ

ಧಾರವಾಡ :ಕೇಂದ್ರ ಕಾರಾಗೃಹದಲ್ಲಿ ಅಲ್ಪಾವಧಿಯ ಶಿಕ್ಷೆಗೆ ಗುರಿಯಾದ ಆರು ಜನ ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ನಾರಾಯಣ ತಂದೆ ಬಾಬು , ಮುರುಗಪ್ಪ ತಂದೆ ಕರಿಯಪ್ಪ , ಶ್ರೀನಿವಾಸ ತಂದೆ ರಾಮಣ್ಣ , ಶಿವಾನಂದ ತಂದೆ ಮಡಿವಾಳಪ್ಪ ಮಲ್ಲಿಕಾರ್ಜುನ ತಂದೆ ಯಲ್ಲಪ್ಪ ಹಾಗೂ ಸೋಮನಾಥ ಅವರು ಇಂದು ಬಿಡುಗಡೆಯಾದ ಕೈದಿಗಳು ಕೇಂದ್ರ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಲ್ಪಾವಧಿಯ ಶಿಕ್ಷೆಗೆ ಒಳಗಾದ ಮತ್ತು ಈಗಾಗಲೇ ಶೇ .66 ರಷ್ಟು …

Read More »

ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪೂರ್ವ ನಿಯೋಜಿತವಾಗಿದೆ : ಮುತಾಲಿಕ್ ಆರೋಪ

ಧಾರವಾಡ: ಶಿವಮೊಗ್ಗದಲ್ಲಿ ನಡೆದ ಚಾಕು ಇರಿತ ಪೂರ್ವ ನಿಯೋಜಿತವಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಘಟನೆ ಆಕಸ್ಮಿಕವಾದದ್ದು ಅಲ್ಲ, 40 ವರ್ಷದಿಂದಲೂ ಹಿಂದೂ ಮಹಾಸಭಾ ಗಣೇಶೋತ್ಸವ ಆಚರಣೆ ಮಾಡುತ್ತದೆ. ಆಗ ಗಣೇಶ ಮೆರವಣಿಗೆ ಮಸೀದಿಯಲ್ಲೂ ಹೋಗಬಾರದು ಅಂತಾ ಗಲಾಟೆ ಮಾಡಿದ್ದರು. ಆಗಿನಿಂದಲೇ ಇದು ಆರಂಭವಾಗಿದೆ ಎಂದರು. ಇದು ಸೊಕ್ಕಿನ ನಡೆ, ಸಾವರ್ಕರ್ ಅವರನ್ನು ವಿರೋಧ ಶುರು ಮಾಡಿದ್ದು ಕಾಂಗ್ರೆಸ್. …

Read More »

ಹುಬ್ಬಳ್ಳಿಯಲ್ಲಿ ಒಂದೇ ದಿನ ಏರೇಡು ಕಡೆ ಚಾಕು ಇರಿತ..!

ಹುಬ್ಬಳ್ಳಿಯಲ್ಲಿ ದಿನ ನಿತ್ಯ ಒಂದಿಲ್ಲ ಒಂದು ಹಲ್ಲೆಯ ಘಟನೆ ನಡಿತಾ ಇದೆ. ಇವತ್ತು ಕೂಡ ಇಬ್ಬರ ಮೇಲೆ ಚಾಕು ಇರಿತ ವಾಗಿದೆ. ಹಳೆ ಹುಬ್ಬಳ್ಳಿಯ ಹೇಗ್ಗೆರಿ ಯಲ್ಲಿ ಸನ್ಮೂನ್ ಕಾಬಾಡೆ ಅನ್ನೋ ಯುವಕನಿಗೆ ಹಣ ಕಾಸಿನ ವಿಷಯಕ್ಕೆ ಚಾಕು ಇರಿತ ಮಾಡಲಾಗಿದೆ. ಅನಿಲ್ ನಾಯ್ಕ್ ಅನ್ನೋ ವ್ಯಕ್ತಿ ಇಂದ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ಹಾಗೂ ಕಸಬೇಪಟೆ ವ್ಯಾಪ್ತಿಯಲ್ಲಿ ಆಟೋ ಬಾಡಿಗೆ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿ ಅರ್ಬಾಜ್ …

Read More »

ನೂಪುರ್ ಶರ್ಮಾ ಬಗ್ಗೆ ನಮ್ಮ ಪಕ್ಷ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ ; ಸಚಿವ ಅಶ್ವತ್ಥ ನಾರಾಯಣ

ಧಾರವಾಡ : ಪ್ರವಾದಿ ಮುಹಮ್ಮದ್ ಅವರ ಕುರಿತು ನಮ್ಮ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ನೀಡಿರುವ ಹೇಳಿಕೆ ಕುರಿತು ನಮ್ಮ ಪಕ್ಷ ಸ್ಪಷ್ಟವಾದ ನಿಲುವು ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು . ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಕೆಲವರು ಇದೇ ಸಂದರ್ಭವನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದರು . ಕೆಲವು ಸಂಘಟನೆಗಳು ಕೂಡ ಈ ಘಟನೆಗೆ ಕೋಮು …

Read More »

ಮಾಜಿ ಸಿಎಂಗೆ ಕೋನರೆಡ್ಡಿ ನಿವಾಸದಲ್ಲಿ ಅತಿಥಿ ಸ್ವೀಕಾರ

ಧಾರವಾಡ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ ಜಿಲ್ಲೆ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಿನ ಉಪಹಾರವನ್ನು ಇತ್ತೀಚಿಗೆ ಜೆಡಿ(ಎಸ್)ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಎನ್ ಎಚ್ ಕೋನರೆಡ್ಡಿ ನಿವಾಸದಲ್ಲಿ ಸೇವಿಸಿದರು. ಈ ಭಾಗದ ಜನಪ್ರಿಯ ತಿಂಡಿಗಳಾಗಿರುವ ಪಡ್ಡು ಮತ್ತು ಪೂರಿಯನ್ನು ಅವರು ಇಷ್ಟಪಟ್ಟು ಸವಿದರು. ಜೊತೆಗೆ ಮಾವಿನ ಹಣ್ಣಿನ ಸೀಕರಣೆಯನ್ನೂ ಅವರಿಗೆ ಬಡಿಸಲಾಯಿತು. ಸಿದ್ದರಾಮಯ್ಯನವರೊಂದಿಗೆ ಪಕ್ಷದ ಕಾರ್ಯಕರ್ತರು ಎಷ್ಟಿದ್ದರೆಂದರೆ ಕೋನರೆಡ್ಡಿ ಅವರ ಕುಟುಂಬದ ಹೆಣ್ಣುಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳ …

Read More »