Breaking News

ಮಾಜಿ ಸಿಎಂಗೆ ಕೋನರೆಡ್ಡಿ ನಿವಾಸದಲ್ಲಿ ಅತಿಥಿ ಸ್ವೀಕಾರ

ಧಾರವಾಡ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಧಾರವಾಡ ಜಿಲ್ಲೆ ಪ್ರವಾಸದಲ್ಲಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಿನ ಉಪಹಾರವನ್ನು ಇತ್ತೀಚಿಗೆ ಜೆಡಿ(ಎಸ್)ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಎನ್ ಎಚ್ ಕೋನರೆಡ್ಡಿ ನಿವಾಸದಲ್ಲಿ ಸೇವಿಸಿದರು.

ಈ ಭಾಗದ ಜನಪ್ರಿಯ ತಿಂಡಿಗಳಾಗಿರುವ ಪಡ್ಡು ಮತ್ತು ಪೂರಿಯನ್ನು ಅವರು ಇಷ್ಟಪಟ್ಟು ಸವಿದರು. ಜೊತೆಗೆ ಮಾವಿನ ಹಣ್ಣಿನ ಸೀಕರಣೆಯನ್ನೂ ಅವರಿಗೆ ಬಡಿಸಲಾಯಿತು. ಸಿದ್ದರಾಮಯ್ಯನವರೊಂದಿಗೆ ಪಕ್ಷದ ಕಾರ್ಯಕರ್ತರು ಎಷ್ಟಿದ್ದರೆಂದರೆ ಕೋನರೆಡ್ಡಿ ಅವರ ಕುಟುಂಬದ ಹೆಣ್ಣುಮಕ್ಕಳಿಗೆ ಮಾಜಿ ಮುಖ್ಯಮಂತ್ರಿಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಕೂಡ ಸಾಧ್ಯವಾಗಲಿಲ್ಲ.

Share News

About BigTv News

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *