Breaking News

ಧಾರವಾಡ

ಪ್ರೀತಿಸಿದ್ದ ಯುವತಿಗೆ ಮದುವೆ ನಾಟಕ ಮಾಡಿ ಕೈ ಕೊಟ್ಟ ಪ್ರೇಮಿ

ಯುವಕನೊಬ್ಬ ಪ್ರೀತಿಸಿ ಮದುವೆಯಾದ ಯುವತಿಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಕೈಕೊಟ್ಟು ಹುಬ್ಬಳ್ಳಿಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷ ದಿಂದ ಯುವತಿಯನ್ನು ಲವ್ ಮಾಡುತ್ತಿದ್ದ ನವಲಗುಂದ ನಿವಾಸಿ ಕಲ್ಮೇಶ ಬೋರಶೆಟ್ಟಿ ಎಂಬುವ ಯುವಕ ಕಾಡಿ ಬೇಡಿ ಯುವತಿಯನ್ನ ಲವ್ ಮಾಡಿದ್ದ. ಮದುವೆಯಾಗುವದಾಗಿ ನಂಬಿಸಲಿಕ್ಕೆ ವಿಷ ಸಹಿತ ಕುಡಿದಿದ್ದ. ಅಲ್ಲದೇ ಬೇರೆ ಹುಡುಗರ ಜತೆಗೆ ಯುವತಿ ಮದುವೆಯಾಗಲು ಬಿಡುತ್ತಿರಲಿಲ್ಲ ಎಂಬುವಂತ ಮಾಹಿತಿಯನ್ನು ನೊಂದ ಯುವತಿ ಸಾಮಾಜಿಕ …

Read More »

ಮನೆಗೆ ಕನ್ನ ಹಾಕಿದ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು

ಕಾಮತ್ ‌ಹೋಟೆಲ್ ಮಾಲೀಕ ರಘುರಾಮ ಕಾಮತ್ ಅವರ ಮನೆಗೆ ಚಡ್ಡಿ ಬನಿಯನ್ ಗ್ಯಾಂಗ್ ನ ಕಳ್ಳರು ಕನ್ನ ಹಾಕಿದ್ದಾರೆ. ಅಶೋಕ ನಗರದಲ್ಲಿರುವ ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.ನಿನ್ನೆ ರಾತ್ರಿ ಸುಮಾರು 2 .30 ಗಂಟೆಯ ಸುಮಾರಿಗೆ ಮನೆಯ ಗೇಟ್ ಮೂಲಕ ಒಳಪ್ರವೇಶ ಮಾಡಿದ ಮೂರ್ನಾಲ್ಕು ಜನರ ಗುಂಪು ಮನೆಯಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.‌ ಕಳ್ಳರ ಗುಂಪಿನ ಸದಸ್ಯರು ಅರೆಬರೆ ಬಟ್ಟೆ ತೊಟ್ಟು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ದೃಶ್ಯಗಳು ಮನೆಯಲ್ಲಿ …

Read More »

ಚುನಾವಣೆ ಮುಗಿದರು ಬಸ್‌ ಟಿಕೇಟನಲ್ಲಿ ನಿಲ್ಲದ ಮತದಾನ ಜಾಗೃತಿ

ಲೋಕಸಭಾ ಚುನಾವಣೆ ಮುಗಿದು ಕೇಂದ್ರ ಸರಕಾರದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಾಯ್ತು.ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾತ್ರ “ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ”ಎನ್ನುವ ಮೂಲಕ ಜಾಗೃತಿ ನೀಡುತ್ತಿದೆ. ಕೆಲವು ಬಸ್‌ಗಳಲ್ಲಿ ನೀಡುವ ಟಿಕೇಟ್‌ ನಲ್ಲಿ ಜಾಗೃತಿ ಮೂಡಿಸುತ್ತಿದೆ.ಹೌದು.ಲೋಕಸಭಾ ಚುನಾವಣೆಗೆ ಮತದಾರರನ್ನು ತಪ್ಪದೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಮಹತ್ವ ನೀಡುವ ಮೂಲಕ ನಿತ್ಯವೂ ಹಲವಾರು ರೀತಿಯಲ್ಲಿ ಜಾಗೃತಿ ಅಭಿಯಾನದ ಮೂಲಕ ಗಮನ …

Read More »

ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧ

ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ರಂಜಾನ್ ಹಬ್ಬಕ್ಕೂ ಮೂರುಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇಂದು ರಂಜಾನ್ ಹಬ್ಬದ ಪ್ರಾರ್ಥನೆ ನಂತರ ಮುಸ್ಲಿಂ ಬಾಂಧವರು ಮೂರು ಸಾವಿರ‌ ಮಠಕ್ಕೆ ಭೇಟಿ ನೀಡಿ ಮೂರು ಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಶ್ರೀಗಳಿಂದ ಆಶೀರ್ವಾದ ಪಡೆಯುತ್ತಿದ್ದರು. ಕಳೆದ ಹಲವು ದಶಕಗಳಿಂದಲೂ ಈ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಈ ವರ್ಷವೂ ಕೂಡ ಶ್ರೀ ರಾಜಯೋಗೀಂದ್ರ ಶ್ರೀಗಳು ಮುಸ್ಲಿಂ ಬಾಂಧವರಿಗೆ ಶುಭಕೋರಿದರು. ಎಂದೆಂದಿಗೂ ಹಿಂದು ‌ಮುಸ್ಲಿಂರಲ್ಲಿ ಸಾಮರಸ್ಯ ನೆಲೆಸಲಿ. …

Read More »

ಮೇಲಾಧಿಕಾರಿಗಳಿಗೆ WPC ಫುಲ್ ಅವಾಜ್

ಮೇಲಾಧಿಕಾರಿಗಳಿಗೆ WPC ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸಿಪಿಐ ಡಿಸೋಜಾ ಅವರಿಗೆ ಅವಾಜ್ ಹಾಕಿದ್ದ WPC ಎಂದು ತಿಳಿದು ಬಂದಿದೆ. ನಿನ್ನೆ ಮುಸ್ಲಿಂ ಬಾಂಧವರ ಹಬ್ಬದ ಹಿನ್ನೆಲೆಯಲ್ಲಿ ರಜೆ ಕೊಡಲಿಲ್ಲ ಅನ್ನೊ‌ ಕಾರಣಕ್ಕೆ ಸಿಪಿಐ ಅವರನ್ನ ಎಲ್ಲರ ಎದುರೇ WPC ನಿಂದಿಸಿದ್ದಾರೆ. ಸಿಪಿಐ ಕ್ಯಾಬಿನ್ ಗೆ ನುಗ್ಗಿ ಫುಲ್ ಆವಾಜ್ ಹಾಕಿದ್ದಾರೆ. ಠಾಣೆಯ ಸಿಬ್ನಂದಿಗಳೆಲ್ಲ ಸಮಾಧಾನ ಮಾಡಿದರೂ ಕೂಲ್ ಆಗದ WPC, …

Read More »

ಭವಿಷ್ಯದ ಕೌಶಲ್ಯಗಳ ಕುರಿತಾದ ಎಪಿಜೆ ಕಲಾಂ ಫ್ಯೂಯಲ್ ಸಮಾವೇಶ ಜೂ.2ಕ್ಕೆ

ಫ್ರೇಂಡ್ಸ್ ಯೂನಿಯನ್ ಫಾರ್ ಎನರ್ಜೈಸಿಂಗ್ ಲೈವ್ಸ್ (ಪ್ಯೂಲ್) ವತಿಯಿಂದ ಎಪಿಜೆ ಕಲಾಂ ಫ್ಯೂಯೆಲ್ ಫೆಲೋಗಳ ಸಂಕಿರಣ ಮತ್ತು ಭವಿಷ್ಯದ ಕೌಶಲ್ಯಗಳ ಕುರಿತಾದ ಸಮಾವೇಶವನ್ನು ಮೇ.2 ರಂದು ಬೆಳಿಗ್ಗೆ 11 ಕ್ಕೆ ಇಲ್ಲಿನ ಡೆನಿಸನ್ಸ್ ಹೊಟೆಲ್ ನಲ್ಲಿ ಆಯೋಜಿಸಲಾಗಿದೆ ಎಂದು ಪ್ಯೂಯೆಲ್ ಅಧ್ಯಕ್ಷ ಚೇತನ ದೇಶಪಾಂಡೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಫ್ಯೂಯೆಲ್ ಫೆಲೋಗಳ ಸಂಕಿರಣ, ನಾಯಕತ್ವ ಪ್ರಶಸ್ತಿಗಳ ಪ್ರಧಾನ ಮತ್ತು ಶಿಕ್ಷಣದಲ್ಲಿ ನಾವೀನ್ಯತೆ, ಉದ್ಯಮಕ್ಕೆ ಪೂರಕವಾಗಿರುವ ಶಿಕ್ಷಣವನ್ನು …

Read More »

ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 19ಕ್ಕೆ ಏರಿಕೆ..

ಧಾರವಾಡ: ಮಾರ್ಚ್ 19, ಮಂಗಳವಾರದಂದು ನಗರದ ಕುಮಾರೇಶ್ವರನಗರದಲ್ಲಿ ಕಟ್ಟಡ ಕುಸಿದು ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 19 ಕ್ಕೆ ಏರಿದೆ.ಅಂತಿಮ ಹಂತದ ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿದ್ದ ಮತ್ತಿಬ್ಬರ ಮೃತದೇಹವನ್ನು ಹೊರತೆಗೆಯಲಾಗಿದೆ. ಮೃತರನ್ನು ವಾಘು ಮೋರೆ(24), ಸಹದೇವ(50) ಎಂದು ಗುರುತಿಸಲಾಗಿದೆ.ಮಂಗಳವಾರ ಸಂಭವಿಸಿದ ಈ ದುರ್ಘಟನೆಯಲ್ಲಿ 19 ಮಂದಿ ಮರಣ ಹೊಂದಿದ್ದು, 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. …

Read More »

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.ಕಳೆದ ತಿಂಗಳು ವಿಷಾಹಾರ ಸೇವನೆಯಿಂದಾಗಿ ಅವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.56 ವರ್ಷದ ಶಿವಳ್ಳಿ 1999ರಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ದಿ. ಎಸ್. ಬಂಗಾರಪ್ಪ ಅವರ ಬೆಂಬಲಿಗರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ 3 …

Read More »

ಕಟ್ಟಡ ಕುಸಿತ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ; ಸಿಎಂ..

ಧಾರವಾಡ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವೊಂದು ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಆರಂಭಿಸಿ ಇದುವರೆಗೆ 54 ಜನರ ಜೀವ ರಕ್ಷಣೆ ಮಾಡಲಾಗಿದೆ. 13 ಜನ ಮೃತಪಟ್ಟಿದ್ದಾರೆ ಅವಶೇಷಗಳಡಿ ಇನ್ನೂ ಸುಮಾರು 12 ರಿಂದ 14 ಜನ ಇರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯಲಿದೆ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆಗೂ ಸರ್ಕಾರ …

Read More »

ಕಟ್ಟಡ ಕುಸಿದ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ

ಧಾರವಾಡ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಸಂಜೆ ಧಾರವಾಡಕ್ಕೆ ಭೇಟಿ ನೀಡಿ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಡೆಸಿದರು.ಧಾರವಾಡದಲ್ಲಿ ಕಟ್ಟಡ ಕುಸಿದ ಸ್ಥಳ ಪರಿಶೀಲನೆ ನಂತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡಗಳೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು ಪಡೆದುಕೊಂಡರು. ಬಳಿಕ ಅವರು ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು.ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳು ಈಗಾಗಲೇ ಪ್ರಕರಣದಲ್ಲಿ ಮೃತಪಟ್ಟವರಿಗೆ 2 ಲಕ್ಷ ರೂಪಾಯಿ ಪರಿಹಾರ …

Read More »