Breaking News

ಹುಬ್ಬಳ್ಳಿ-ಧಾರವಾಡ

ಲಕ್ಷಾಂತರ ಮೌಲ್ಯದ ಆನೆ ದಂತ ಕಲಾಕೃತಿ ಮಾರಾಟ ಮಾಡುತ್ತಿದ್ದ ಐವರು ಖದೀಮರು ವಶಕ್ಕೆ:

ಹುಬ್ಬಳ್ಳಿ: ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ವಿಶೇಷ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಐವರು ದಂತ ಚೋರರನ್ನು ವಶಕ್ಕೆ ಪಡೆದಿದ್ದಾರೆ. ಹೌದು..ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಅರಣ್ಯ ಇಲಾಖೆಯು ಐವರನ್ನು …

Read More »

ಈಜಲು ಹೋದ ಯುವಕನ ಸಾವು

ಕಲಘಟಗಿ ಪಟ್ಟಣದ ಬೆಂಡಿಗೇರಿ ನಿವಾಸಿಯಾಗಿದ್ದ ಪವನ ನಾರಾಯಣಕರ 19 ವರ್ಷದ ಯುವಕ ಮಡಕಿಹೋನ್ನಳ್ಳಿ ಗ್ರಾಮದ ಸಮೀಪವಿರುವ ಕೆರೆಯಲ್ಲಿ ನಿನ್ನೆ ಮಧ್ಯಾಹ್ನ ಈಜಲು ಹೋಗಿ ಸಾವನ್ನಿಪ್ಪಿರುವ ಘಟನೆ ನಡೆದಿದೆ, ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು,ಇಂದು ಮುಂಜಾನೆ ಮೃತದೇಹ ಸಿಕ್ಕಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯೋಧನಾಗುವ ಆಸೆ ಹೊತ್ತಿದ್ದ ಯುವಕ ಕೆಲವು ತಿಂಗಳ ಹಿಂದೆ ಮಿಲಿಟರಿ ಪರೀಕ್ಷೆಗೆ ಹಾಜರಾಗಿ ಬಂದಿದ್ದ ಎನ್ನಲಾಗಿದೆ. ಸ್ಥಳಕ್ಕೆ ಕಲಘಟಗಿ ಪೋಲಿಸ್ ಠಾಣೆಯ ಸಿಬ್ಬಂದಿ ಆಗಮಿಸಿ …

Read More »

ಮಹಾದಾಯಿ ವಿಚಾರದಲ್ಲಿ ಜನತೆಗೆ ಸುಳ್ಳು ಆರೋಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಜನರ ಕ್ಷಮೆ ಕೇಳಬೇಕು

ಹುಬ್ಬಳ್ಳಿ: ಮಹದಾಯಿ ಯೋಜನೆ ವಿಚಾರದಲ್ಲಿ ಸತತವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಲೇ, ಎಚ್ಚರಿಕೆ ನೀಡುತ್ತಲೇ ಬಂದಾಗ, ಭಾರತೀಯ ಜನತಾ ಪಕ್ಷದ ನಾಯಕರು ರಾಜಕೀಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಮಾಡಬೇಕಾಗಿತ್ತು ಅವರು ಮಾಡಲಿಲ್ಲ. ಕೇವಲ ಸುಳ್ಳು ಹೇಳುವುದಲ್ಲಿಯೇ ಕಾಲಹರಣ ಮಾಡಿದರೆಂದು ಮಾಜಿ ಜಲಸಂಪನ್ಮೂಲ ಸಚಿವ ಎಚ್. ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಜನಾಂದೋಲನವಾಗಿ ಹೋರಾಟ ಮಾಡಿ, ಅನೇಕ ಪ್ರಶ್ನೆಗಳನ್ನು …

Read More »

ಹುಬ್ಬಳ್ಳಿಯಲ್ಲಿ ರಸ್ತೆ ಅಪಘಾತಕ್ಕೆ ವ್ಯಕ್ತಿ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಹುಬ್ಬಳ್ಳಿ: ನಗರದ ನವನಗರ ಹತ್ತಿರ ಬೈಕ್ ಸವಾರನೊಬ್ಬ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನವನಗರದ ಕ್ಯಾನ್ಸರ್ ಆಸ್ಪತ್ರೆ ಹತ್ತಿರ ಬೈಕ್ ಮೇಲೆ ಹೋಗುತ್ತಿರುವಾಗ ಅಡ್ಡ ಬಂದ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪರಶುರಾಮ್ ವಾಲಿಕಾರ ( ಜಪಾನ್ ) ಅನ್ನೋ ಯುವಕನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಭೀಕರ ಅಪಘಾತ ಸೆರೆಯಾಗಿದೆ.ಘಟನೆ ಕುರಿತಂತೆ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ …

Read More »

ಫೆಬ್ರವರಿ ೨೬, ೨೭ ರಂದು ಕಲಬುರಗಿಯಲ್ಲಿ ರಾಜ್ಯಮಟ್ಟದ ಪ್ರಥಮ ಸಮಾವೇಶ

ಹುಬ್ಬಳ್ಳಿ:ಅಖಿಲ ಕರ್ನಾಟಕ ವಿಪ್ರ ಅಡುಗೆದಾರರ ರಾಜ್ಯ ಮಟ್ಟದ ಪ್ರಥಮ ಸಮಾವೇಶ ಕಾರ್ಯಕ್ರಮವನ್ನು ಫೆ.೨೬ ಹಾಗೂ ೨೭ ರಂದು ಕಲಬುರಗಿ ಜಿಲ್ಲೆಯ ಜೀವರ್ಗಿ ರಸ್ತೆಯ ಹಳೇ ಕೋಠಾರಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಗುರುರಾಜ್ ಚಳ್ಳಾರಿ ಹೇಳಿದರು. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಕರ್ನಾಟಕ ವಿಪ್ರ ಅಡುಗೆದಾರರು ಹಾಗೂ ಅಡುಗೆ ಸಹಾಯಕರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಡುಗೆ ಮಾಡುವವರು ಮತ್ತು ಬಡಿಸುವವರ ಸಂಘ …

Read More »

ವಿಪಕ್ಷದ ಮೇಲೆ ಐಟಿ ದಾಳಿ ಸಮಾನ್ಯ: ಎಚ್.ಡಿ.ಕೆ ಹೇಳಿಕೆ

ಹುಬ್ಬಳ್ಳಿ :ವಿರೋಧ ಪಕ್ಷದ ನಾಯಕರ ಮೇಲೆ ಇನ್ನೂ ಎರಡು ತಿಂಗಳು ಐಟಿ ದಾಳಿ ಸಾಮಾನ್ಯ.‌ ಇದು ಯಾಕೆ ಅಂತಲೂ ಎಲ್ಲರಿಗೂ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.ಹುಬ್ಬಳ್ಳಿ ತಾಲೂಕಿನ ಹೆಬಸೂರನಲ್ಲಿ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಭಾಕರ್ ರೆಡ್ಡಿ ಒಬ್ಬ ಉದ್ಯಮಿ ಇದ್ದಾರೆ. ಇಂತಹ ಐಟಿ ದಾಳಿ ಸಾಮಾನ್ಯ ಅದು ಯಾಕೆ ಅಂತ ಗೊತ್ತು. ಇನ್ನೂ …

Read More »

ಅಪಘಾತ ಬೈಕ್ ಸವಾರನ ಸ್ಥಿತಿ ಗಂಭಿರ,ಜೊತೆಗಿದ್ದವನ ಸಾವು

ಕುಂದಗೋಳ : ತಾಲೂಕಿನ ಕುಬಿಹಾಳ ಗ್ರಾಮದ ಬೆಣ್ಣೆ ಹಳ್ಳದ ಬಳಿ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬ್ರಿಡ್ಜ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದೆ. ಹಿಂಬದಿಯಲ್ಲಿ ಕುಳಿತ ಸವಾರ ಸಾವನ್ನಪ್ಪಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಅರಳಿಕಟ್ಟಿ ಗ್ರಾಮದಿಂದ ಹುಲಗೂರ ದರ್ಗಾಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರ ನಿಯಂತ್ರಣ ತಪ್ಪಿ ಹಳ್ಳದ ಬ್ರಿಡ್ಜ್ ಗೆ ಗುದ್ದಿದ ಪರಿಣಾಮ ,ಬೈಕ್’ನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡಿದ್ದರು. ಅರಳಿಕಟ್ಟಿ ಗ್ರಾಮದ 20 …

Read More »

ಧಾರವಾಡದ ಕೆಎಂಎಫ್ ಹತ್ತಿರ ಕಾರ್ ಪಲ್ಟಿ ವ್ಯಕ್ತಿಯೊರ್ವನ ಸಾವು. ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಗಂಭೀರ……..

ಧಾರವಾಡದ ಕೆ ಎಂ ಎಫ್ ಹತ್ತಿರ ರಾತ್ರಿ ಕಾರೊಂದು ಅತಿ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು ಪರಿಣಾಮವಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಜೊತೆಗಿದ್ದ ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಕಾರು ಸಂಖ್ಯೆ ಕೆಎ 25 ಎಂಸಿ 0829 ಬಿಆರ್ ಟಿಎಸ್ ಬ್ಯಾರಿಗೆಡ್ ಗೆ ಹೊಡೆದು ಪಲ್ಟಿ ಆಗಿದ್ದು, ಪರಿಣಾಮವಾಗಿ ಸಿದ್ದಾರ್ಥ್ ಅನ್ನೋ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ , ಇನ್ನೊಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಬೇಟಿ …

Read More »

ಫೆ.16 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ……

ಹುಬ್ಬಳ್ಳಿ ಹೆಸ್ಕಾಂನ ರಾಮನಕೊಪ್ಪ 110 ಕೆ.ವಿ. ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಫೆಬ್ರವರಿ 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಛಬ್ಬಿ, ವರೂರ, ತಡಸ, ರಾಮನಕೊಪ್ಪ, ಎನ್.ಜೆ.ವಾಯ, ಪಾಲಿಕೊಪ್ಪ (ಎನ್.ಜೆ.ವಾಯ), ತಡಸ (ಎನ್.ಜೆ.ವಾಯ), ಇಂಡಸ್ಟೀಯಲ್ ಫೀಡರ್‌ನಲ್ಲಿ ಬರುವ ಹೊಸಕಟ್ಟಿ, ವಿಠಲಾಪೂರ, ಜಿಗಳೂರ, ಬೆಳ್ಳಿಗಟ್ಟಿ, ಗುರುವಿನಹಳ್ಳಿ, ಮಳಲಿ, ಕುಂಕೂರ, ತೀರ್ಥ, ಮುತ್ತಳ್ಳಿ, ಹಳೇಮುತ್ತಳ್ಳಿ, ಗಾಯತ್ರಿ ಮಠ, ಕಮಲಾ …

Read More »

ಹುಬ್ಬಳ್ಳಿ ನಗರದಲ್ಲಿಂದು ಸಂಚಾರಿ ಪೊಲೀಸರು ಫೀಲ್ಡ್ ಗೆ ಇಳಿದಿದ್ದು,10ಕ್ಕೂ ಆಟೋಗಳನ್ನುಸೀಜ್ ಮಾಡಿದ್ದಾರೆ.

ಹುಬ್ಬಳ್ಳಿ: ನಗರದಲ್ಲಿಂದು ಸಂಚಾರಿ ಪೊಲೀಸರು ಫೀಲ್ಡ್ ಗೆ ಇಳಿದಿದ್ದು, ಖಾಸಗಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ನಿಗದಿತ ಪ್ರಯಾಣಿಕರಿಗಿಂತ ಅಧಿಕ ಪ್ರಮಾಣದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 10ಕ್ಕೂ ಆಟೋಗಳನ್ನು ಹುಬ್ಬಳ್ಳಿಯ ಉತ್ತರ ಸಂಚಾರಿ ಠಾಣೆಯ ಪೊಲೀಸರು ಸೀಜ್ ಮಾಡಿದ್ದಾರೆ. ಒಂದು ಆಟೋದಲ್ಲಿ ಮೂರು ಜನರಿಗೆ ಪ್ರಯಾಣ ಮಾಡಲು ಸ್ಥಳಾವಕಾಶ ಇದ್ದರು ಕೂಡಾ ಕೆಲವೊಂದಿಷ್ಟು ಅಟೋ ಚಾಲಕರು 10ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಶಾಲೆಗೆ ಬಿಡಲು ಹಾಗೂ ಕರೆತರುವ ಕಾರ್ಯವನ್ನು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು …

Read More »