Breaking News

ಬೆಂಗಳೂರು

ಈ ರೀತಿಯ ಪೊಲೀಸ್ ಮಹಾನಿರ್ದೇಶಕರ (DGP) ಹಾಗೂ ಸರ್ಕಾರದ ಆದೇಶಗಳಿಗೆ ಇಂದು ಕವಡೆ ಕಾಸಿನಷ್ಟು ಬೆಲೆಯೂ ಉಳಿದಿಲ್ಲ…?

ಡಿಜಿ ಆದೇಶಗಳನ್ನು ಗಾಳಿಗೆ ತೂರಿ, ಕೆಲ ಟ್ರಾಫಿಕ್ ಪೊಲೀಸರು ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು ತಮ್ಮ ಆಟವನ್ನಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರ ಮುಂದೆ ನಿಂತಿದೆ.ರಸ್ತೆಯಲ್ಲಿ ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು..? ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದವರು ಮಾಡಿದ್ದೇನು ಗೊತ್ತಾ…? ಪೊಲೀಸ್ ಕಂಡ ಕಥೆಗಳು… ಕಡ್ಡಾಯವಾಗಿ ವಾರದ ರಜೆ ನೀಡಬೇಕು ಎಂಬ ಆದೇಶ ಬಂದು ಸಾಕಷ್ಟು ವರ್ಷಗಳೇ ಕಳೆದರೂ, ಅದು ಇಂದಿಗೂ ಕಾಗದದಲ್ಲೇ ಉಳಿದಿದೆ. …

Read More »

ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ​​​​​​​​​ ಕೇಸ್, ಮೂವರು Police inspectors Suspended…

ಡ್ರಗ್ ಕೇಸ್ ಗೆ Drug case ಸಂಬಂಧಪಟ್ಟಂತೆ ಮಹಾರಾಷ್ಟ್ರ ಪೊಲೀಸರು Maharashtra police ಬೆಂಗಳೂರಲ್ಲಿ ಮಾದಕ ವಸ್ತು ತಯಾರಿಕ ಘಟಕದ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೂವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು Police inspectors Suspended ಈ ಸಂಬಂಧ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ Seemant Kumar Singh ಅವರು ಅಧಿಕೃತ ಆದೇಶ ಹೊರಡಿಸಿದ್ದು, ಕೊತ್ತನೂರು, ಬಾಗಲೂರು, ಅವಲಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಿದ್ದಾರೆ.ಮಹಾರಾಷ್ಟ್ರ ಎಎನ್‌ಟಿಎಫ್‌ ಬೆಂಗಳೂರಲ್ಲಿ …

Read More »

ಸಣ್ಣ ಜೆರಾಕ್ಸ್ ಅಂಗಡಿ ಮಾಲೀಕನಿಂದ ₹1.6 ಲಕ್ಷ ವಸೂಲಿ; PSI ಸಸ್ಪೆಂಡ್…

ನಕಲಿ ಆಧಾರ್ ಕಾರ್ಡ್ ತಯಾರಿಕೆಯ ಸುಳ್ಳು ಆರೋಪ ಮಾಡಿ ಕನಕಪುರದ ಜೆರಾಕ್ಸ್ ಅಂಗಡಿ ಮಾಲೀಕ ರಾಜೇಶ್ ಅವರಿಂದ ₹1.6 ಲಕ್ಷ ವಸೂಲಿ ಮಾಡಿದ್ದ ಕಗ್ಗಲೀಪುರ ಪಿಎಸ್‌ಐ ಹರೀಶ್ ಅವರನ್ನು ರಾಮನಗರ ಎಸ್.ಪಿ. ಶ್ರೀನಿವಾಸ್ ಗೌಡ ಅಮಾನತುಗೊಳಿಸಿದ್ದಾರೆ. ಗೃಹ ಸಚಿವರಿಗೆ ದೂರು ನೀಡಿದ ನಂತರ ಕ್ರಮ ಕೈಗೊಳ್ಳಲಾಗಿದೆ. ರಾಮನಗರ: ನಕಲಿ ಆಧಾರ್ ಕಾರ್ಡ್ ತಯಾರಿಕೆಯ ಸುಳ್ಳು ಆರೋಪದ ಬೆದರಿಕೆ ಹಾಕಿ, ಜೆರಾಕ್ಸ್ ಅಂಗಡಿ ಮಾಲೀಕರೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದ …

Read More »
Featured Video Play Icon

BREAKING : 7.11 ಕೋಟಿ ದರೋಡೆ ಕೇಸ್ : ‘CCB’ ಪೊಲೀಸರಿಂದ ಇಬ್ಬರು ಆರೋಪಿಗಳು ಅರೆಸ್ಟ್.!

ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ… ಆಂಧ್ರದ ತಿರುಪತಿಯಲ್ಲಿ ದರೋಡೆಗೆ ಬಳಸಿದ್ದ ಕಾರು ಪತ್ತೆಯಾಗಿದ್ದು. ಈ ಬೆನ್ನಲ್ಲೇ ಬಾಣಸವಾಡಿಯ ಕಲ್ಯಾಣಗರದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆದರೆ ಪ್ರಮುಖ ಆರೋಪಿಗಳು ಇನ್ನೂ ಕೂಡ ಪತ್ತೆಯಾಗಿಲ್ಲ.ದರೋಡೆಕೋರರ ಗ್ಯಾಂಗ್ ತಿರುಪತಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತಿರುಪತಿ ಪೊಲೀಸರ ಜೊತೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.. ಆರ್ ಬಿ …

Read More »

ಸದ್ಯ ಇಬ್ಬರನ್ನೂ ಸಸ್ಪೆಂಡ್ ಮಾಡಲಾಗಿದೆ, ತನಿಖೆ ನಡೆಯುತ್ತಿದೆ….

ಡಿ.ಜೆ.ಹಳ್ಳಿ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟ‌ರ್ ಸುನೀಲ್‌ ಅಮಾನತು… ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಯೇ ಅತ್ಯಾ*ಚಾರದ ಆರೋಪಕ್ಕೆ ಗುರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್ ಇಲಾಖೆಗೆ ದೊಡ್ಡ ಮುಜುಗರ ತಂದಿದೆ. ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುನಿಲ್ ವಿರುದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾ*ಚಾರ ನಡೆಸಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪದಡಿ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ… ಈ ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ, ಇನ್‌ಸ್ಪೆಕ್ಟರ್ ಸುನಿಲ್ ಮತ್ತು ಅವರೊಂದಿಗೆ …

Read More »

ಸರ್ವಿಸ್ ಕಾರ್ಡ್ ನಲ್ಲಿ ಷರ ಕಡ್ಡಾಯ! ಪೊಲೀಸರ ಭ್ರಷ್ಟಾಚಾರ ಕಳ್ಳಾಟಕ್ಕೆ ಬ್ರೇಕ್ ಫಾಸ್ಟಿಂಗ್ ಬಡ್ತಿ ನೀಡುವಾಗ ಪರಿಶೀಲನೆ…

ಪೊಲೀಸರ ಭ್ರಷ್ಟಾಚಾರಕ್ಕೆ ಗೃಹ ಸಚಿವರ ಹೊಸ ತಂತ್ರ! ಸರ್ವಿಸ್ ರೆಕಾರ್ಡ್ ನಲ್ಲಿ ಷರ ಕಡ್ಡಾಯ. ಪೊಲೀಸರು ಸರ್ವಿಸ್ ರೆಕಾರ್ಡ್ ನಲ್ಲಿ ಮೇಲಾಧಿಕಾರಿಗಳು ಕಡ್ಡಾಯವಾಗಿ ಷರ ಬರೆಯಬೇಕು ಹಾಗೂ ಇದನ್ನು ವರ್ಗಾವಣೆ ಮತ್ತು ಬಡ್ತಿ ಸಮಯದಲ್ಲಿ ಪರಿಗಣಿಸಲು ಗೃಹ ಇಲಾಖೆ ನಿರ್ಧರಿಸಿದೆ. ಅಧಿಕಾರಗಳು ಸಿಬ್ಬಂದಿ ಅಕ್ರಮ ಚಟುವಟಿಕೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬರುತ್ತಿದೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಆದ ಕಾರಣ ಕರ್ತವಲೋಪ ಎಸುಕಿದ ಅಧಿಕಾರಿಗಳು ಸಿಬ್ಬಂದಿ ಸರ್ವಿಸ್ …

Read More »

ಡ್ರಗ್‌ ಪೆಡ್ಲರ್‌ಗಳ ಜತೆ ಪಾರ್ಟಿ: ಇನ್ಸ್ ಪೆಕ್ಟರ್‌ ಸೇರಿ 11 ಪೊಲೀಸರ ಸಸ್ಪೆಂಡ್

ಕಡಿಮೆ ಬೆಲೆಗೆ ಮಾತ್ರೆ ಖರೀದಿ ಮಾಡಿಸ್ತಿದ್ದ ಖಾಕಿ ಡ್ರಗ್ ಪೆಡ್ಲರ್‌ಗಳ ಜೊತೆಗೇ ಪೊಲೀಸರ ಖಾಕಿ ನಂಟು… ಬೆಂಗಳೂರು ಡ್ರಗ್‌ ಪೆಡ್ಲರ್‌ಗಳ ಜೊತೆ ಪಾರ್ಟಿ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಸೇರಿದಂತೆ 11 ಪೊಲೀಸರನ್ನು ಅಮಾನತು ಮಾಡಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಟಿ ಮಂಜಣ್ಣ ಅವರನ್ನು ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಅಮಾನತುಗೊಳಿಸಿ ಆದೇಶಿಸಿದ್ದರೆ, ಉಳಿದ ಸಿಬ್ಬಂದಿಗಳನ್ನು ಡಿಸಿಪಿ …

Read More »

ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು,ಆಸ್ಪತ್ರೆಗೆ ದಾಖಲು!

ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ತಕ್ಷಣ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಂದು ಬೆಳಗ್ಗೆ ಅವರು ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದು ಓವರ್ ಆಸಿಡಿಟಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಅದು ಬಿಟ್ರೆ ಇನ್ನು ಯಾವುದೇ ಗಂಭೀರವಾದ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಟ ಉಪೇಂದ್ರ ಅವರಿಗೆ …

Read More »

ಕಾರು ಪಲ್ಟಿ ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಇಬ್ಬರು ಸಾವು, ನಾಲ್ವರಿಗೆ ಗಾಯ!

ತಿರುಮಲದ ತಿರುಪತಿಗೆ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಒಂದೇ ಕುಟುಂಬದ ಆರು ಮಂದಿ ತೆರಳುತ್ತಿದ್ದ ಕಾರು ಕಾಶಿಪೆಂಟ್ಲಾ ಹೆರಿಟೇಜ್ ಬಳಿ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.ಚಂದ್ರಗಿರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ಕಾರಣ ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.

Read More »

ಶಾಸಕ ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ, ಅಶ್ಲೀಲ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಆರೋಪ!

ಶಾಸಕ ಮುನಿರತ್ನ ಸೇರಿ 7 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ. ಒಟ್ಟು 3 ಸಾವಿರ ಪುಟಗಳ ಚಾರ್ಜ್​ಶೀಟ್​​ನಲ್ಲಿ ಮುನಿರತ್ನ, ಸುಧಾಕರ್, ಇನ್ಸ್​ಪೆಕ್ಟರ್ ಐಯ್ಯಣ್ಣ ರೆಡ್ಡಿ, ಲೋಹಿತ್ ಗೌಡ, ಶ್ರೀನಿವಾಸ್, ಕಿರಣ್ ಕುಮಾರ್, ಮಂಜುನಾಥ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ.ಆರೋಪಿಗಳು ಪಿಐಗಳು, ಎಸಿಪಿಗಳ ಅಶ್ಲೀಲ ಫೋಟೋ, ವಿಡಿಯೋ ಮಾಡಿರುವುದು ಚಾರ್ಜ್​ಶೀಟ್​ನಿಂದ ಬಯಲಾಗಿದೆ. ತಮ್ಮ ಪರ ಕೆಲಸ ಮಾಡುವಂತೆ ಮಾಡಲು ಬ್ಲ್ಯಾಕ್​ಮೇಲ್ ಮಾಡಿದ ಬಗ್ಗೆಯೂ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಾಯಕರ ಅಶ್ಲೀಲ …

Read More »