Breaking News

ಬೆಂಗಳೂರು

ಪ್ಲಾಟ್ ಹೆಸರನಲ್ಲಿ 51.88 ರೂ.ದೋಖಾ-ವಾಣಿಜ್ಯ ನಗರಿ ಜನರೇ ಎಚ್ಚರ

ಹುಬ್ಬಳ್ಳಿ: ಪ್ಲಾಟ್ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಬರೋಬ್ಬರಿ 51.88 ಲಕ್ಷ ರೂ.ಪಡೆದು ವಂಚನೆ ಮಾಡಿದ ಘಟನೆ, ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅವಿನಾಶ ಸವಣೂರ ಎಂಬಾತನೇ ವಂಚನೆ ಮಾಡಿದ ವ್ಯಕ್ತಿ ಎಂದು ದೂರಲಾಗಿದೆ. ಕುಸುಗಲ್ ರಸ್ತೆಯ ಹೇಮಂತನಗರ ಕ್ರಾಸ್‌ನಲ್ಲಿ ನಿರ್ಮಾಣ ಆಗಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪ್ಲಾಟ್ ಕೊಡುತ್ತೇನೆ ಎಂದು ಹಣ ಪಡೆದಿದ್ದರು. ಬಳಿಕ ಬುಕ್ಕಿಂಗ್ ಮಾಡಿದ್ದ ಫ್ಲಾಟ್‌ನ್ನು ಬೇರೊಬ್ಬರಿಗೆ ಲೀಜ್‌ಗೆ ನೀಡಿ ನಮಗೆ ನೋಂದಣಿ ಮಾಡಿಕೊಟ್ಟಿಲ್ಲ ಎಂದು ವಿಕ್ರಮ …

Read More »

ಸದೃಢ ಸಮಾಜ ನಿರ್ಮಾಣ ಸಂಕಲ್ಪದ ಯಾತ್ರೆ-

ಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಮಹಾಸಭಾ ಧಾರವಾಡ ಜಿಲ್ಲೆ ಮುಖ್ಯ ಘಟಕ ಕೈಗಾರಿಕಾ ಘಟಕ ಮಹಿಳಾ ಘಟಕ ಯುವ ಘಟಕ ಆಶ್ರಯದಲ್ಲಿ ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ಧೂಮಪಾನ ಮಧ್ಯಪಾನ ದುಶ್ಚಟಗಳಿಂದ ಯುವಕರು ದೂರವಿದ್ದು ಸದೃಢ ಸಮಾಜ ನಿರ್ಮಾಣ ಮಾಡಲು ಜಾಗೃತಿಗಾಗಿ ಯಾತ್ರೆ ಹೊರಟ ಪೊಲೀಸ್ ಅಧಿಕಾರಿಗಳಾದ ಮುರುಗೇಶ್ ಚನ್ನನ್ನವರ್, ಪ್ರಶಾಂತ್ ಹಿಪ್ಪರಗಿ, ಸದಾನಂದ ಅಮರಾಪುರ ,ಹುಬ್ಬಳ್ಳಿಗೆ ಆಗಮಿಸಿದಾಗ ಚಿತ್ತೂರು ರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಸ್ವಾಗತಿಸಿ ,ಸನ್ಮಾನಿಸಿ, ಗೌರವಿಸಲಾಯಿತು. …

Read More »

ಧ್ವಜಕ್ಕೆ ಅವಮಾನ ಮಾಡಿದರೇ ದೇಶಕ್ಕೆ ಅವಮಾನ ಮಾಡಿದಂತೆ: ಹಿರಿಯ ನಟ ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಎಂಇಎಸ್ ಪುಂಡಾಟಿಕೆಯ ಕುರಿತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿದ್ದಾರೆ. ಕಲಾ ಗಂಗೋತ್ರಿ 50ನೇ ವರ್ಷದ ಪ್ರೇಸ್ ಮೀಟ್ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಮರಾಠ ಮಂಡಳಿಯನ್ನು ತಡೆಹಿಡಿಯಬೇಕು. ಇದೊಂದು ರಾಜಕೀಯ ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದಿದ್ದಾರೆ. ನಾನು ಮರಾಠ ವಿರೋಧಿಯಲ್ಲ. ಆದರೆ ಯಾವುದೇ ಕಾರಣಕ್ಕೂ ಬಾವುಟವನ್ನು ಸುಡುವುದು ಸರಿಯಲ್ಲ. ನಮ್ಮವರ ಮೇಲೆ ಕೇಸ್ ಹಾಕಿರುವುದನ್ನು ವಾಪಾಸ್ ತೆಗೆದುಕೊಳ್ಳಬೇಕು. ನಾವು ಬಿಡಿ …

Read More »

ರಾಮಮಂದಿರ ಟ್ರಸ್ಟ್ ಭೂ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿ – ಪ್ರಿಯಾಂಕಾ ಗಾಂಧಿ ಗಂಭೀರ ಆರೋಪ

ನವದೆಹಲಿ : ಮರ್ಯಾದ ಪುರುಷೋತ್ತಮ ಶ್ರೀರಾಮ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದುಬಾರಿ ಬೆಲೆಗೆ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ಭೂಮಿ ಖರೀದಿಸುತ್ತಿದೆ ಎಂದು ಹೇಳಿದ್ದಾರೆ.ಶ್ರೀರಾಮ ಮಂದಿರ ನಿರ್ಮಾಣ ಘೋಷಣೆ ಬಳಿಕ ದೇವಸ್ಥಾನದ ಸುತ್ತಲಿನ ಭೂಮಿಗೆ ಭಾರೀ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ …

Read More »

ಅರಮನೆ ನಗರಿ ಜನರಿಗೆ ಓಮಿಕ್ರಾನ್‌ ಆತಂಕ-9 ವರ್ಷದ ವಿದ್ಯಾರ್ಥಿನಿಗೆ ಸೋಂಕು

ಮೈಸೂರು: ವಿಶ್ವದಲ್ಲಿ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್‍ನ ಹೊಸ ರೂಪಾಂತರಿ ಓಮಿಕ್ರಾನ್ ಮೈಸೂರಿಗೂ ಕಾಲಿಟ್ಟಿದ್ದು, ವಿದೇಶದಿಂದ ಬಂದಿದ್ದ ಬಾಲಕಿಯಲ್ಲಿ ಪತ್ತೆಯಾಗಿದೆ. ಕೊರೊನಾದಿಂದ ತತ್ತರಿಸಿದ್ದ ಮೈಸೂರು ಈಗತಾನೇ ಚೇತರಿಸಿಕೊಳ್ಳುತ್ತಿದೆ. ಆದರೆ ಈಗ ಅರಮನೆ ನಗರಿಯಲ್ಲಿ ಓಮಿಕ್ರಾನ್ ಆತಂಕ ಶುರುವಾಗಿದೆ. ವಿದೇಶದಿಂದ ಆಗಮಿಸಿದ್ದ 9 ವರ್ಷದ ಬಾಲಕಿಗೆ ಓಮಿಕ್ರಾನ್ ದೃಢವಾಗಿತ್ತು. ಬಾಲಕಿಯು ಸ್ವಿಜರ್ಲೆಂಡ್‍ನಿಂದ ಮೈಸೂರಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಪಾಸಿಟಿವ್ ಬಂದಿದ್ದರಿಂದ, ಮಾದರಿಯನ್ನು ಜೀನೋಮ್ …

Read More »

ಮತಾಂತರ ನಿಷೇಧ ಕಾಯ್ದೆ ಜಾರಿ‌ ಬೆನ್ನಲ್ಲೇ ಮತ್ತೆ ಮತಾಂತರಕ್ಕೆ‌ ಮುಂದಾದ ಕ್ರೈಸ್ತ ಮಿಶನರಿಗಳು

ಹುಬ್ಬಳ್ಳಿ ಮತಾಂತರ ನಿಷೇಧ ಕಾಯ್ದೆ ಜಾರಿ‌ ಬೆನ್ನಲ್ಲೇ ಮತ್ತೆ ಮತಾಂತರಕ್ಕೆ‌ ಮುಂದಾದ ಕ್ರೈಸ್ತ ಮಿಶನರಿಗಳು ಹುಬ್ಬಳ್ಳಿ ತಾಲೂಕಿನ ಕೋಳಿವಾಡದ ಗ್ರಾಮದ ಮನೆಯೊಂದರಲ್ಲಿ ಧರ್ಮಪ್ರಚಾರ ಮಾಡಲು ತೆರಳಿದ್ದ ಕ್ರೈಸ್ತ ಸಮುದಾಯದ ಮುಖಂಡರು. 30 ಕ್ಕೂ ಅಧಿಕ ಜನರನ್ನ ಮನೆಯೊಂದರಲ್ಲಿ ಸೇರಿಸಿ ಧರ್ಮಪ್ರಚಾರಕ್ಕೆ ಮುಂದಾದ ಕ್ರೈಸ್ತ ಸಮುದಾಯದ ಮುಖಂಡರು ವಿಷಯ ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ದಾಳಿ ನಿನ್ನೆ ಸಂಜೆ ವೇಳೆ ಗ್ರಾಮದ ಮನೆಯೊಂದರಲ್ಲಿ ಧರ್ಮಪ್ರಚಾರಕ್ಕೆ ಮುಂದಾಗಿದ್ದ ಮುಖಂಡರು 15 ಕ್ಕೂ ಹೆಚ್ಚು …

Read More »

ದೈಹಿಕ ಶಿಕ್ಷಕರ ಪ್ರತಿಭಟನೆ ಬೆಳಗಾವಿಯ ಸುವರ್ಣ ಸೌಧ ದ ಮುಂದೆ ಹೋರಾಟ

ಬೆಳಗಾವಿ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೈಹಿಕ ಶಿಕ್ಷಕರ ಪ್ರತಿಭಟನೆ ಮುಂದುವರೆದಿದೆ.ಹೌದು ಕಳೆದ ಒಂದು ವಾರದಿಂದ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ದೈಹಿಕ ಶಿಕ್ಷಕರು ಬೇಡಿಕೆಗಳನ್ನು ಈಡೇರಿಕೆಗೆ ಪಟ್ಟು ಹಿಡಿದು ಈ ಒಂದು ಪ್ರತಿಭಟನೆ ಮಾಡತಾ ಇದ್ದಾರೆ ಬೆಳಗಾವಿಯ ಸುವರ್ಣ ಗಾರ್ಡನ್ ನಲ್ಲಿ ಈ ಒಂದು ಪ್ರತಿಭಟನೆ ನಡೆಯುತ್ತಿದ್ದು ಇಂದು ಕೂಡಾ ಮುಂದುವರಿದಿ ದ್ದು ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ. ಪ್ರತಿಭಟ ನೆಯಲ್ಲಿ ನೂರಾರು ಶಿಕ್ಷಕರು ಭಾಗಿಯಾಗಿದ್ದಾರೆ. ದೈಹಿಕ …

Read More »

2 ತಿಂಗಳ ಹಿಂದೆಯೇ ಮೃತಪಟ್ಟ ಮಹಿಳೆಗೂ ಕೋವಿಡ್ ವ್ಯಾಕ್ಸಿನ್ – ಪತಿ ಮೊಬೈಲ್‍ಗೆ ಸಂದೇಶ

ಪಟ್ನಾ: ಎರಡು ತಿಂಗಳ ಹಿಂದೆಯೇ ಮೃತಪಟ್ಟ ಮಹಿಳೆ ಹೆಸರಿನಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿರುವ ಸಂದೇಶ ಬಂದಿರುವುದು ಅಚ್ಚರಿ ಮೂಡಿಸಿದೆ. ಮೃತ ಮಹಿಳೆಯ ಪತಿ ಬಳಿ ಇದ್ದ ಮೊಬೈಲ್‍ಗೆ ಈ ಸಂದೇಶ ಬಂದಿದೆ. ಲಾಲೊ ದೇವಿ ಅವರ ಪತಿ ರಾಮ್ ಉದ್ಗಾರ್ ಥಾಕೂರ್ ಈ ಕುರಿತು ಪ್ರತಿಕ್ರಿಯಿಸಿ, ನನ್ನ ಪತ್ನಿ ಜ್ವರ, ಅಸ್ವಸ್ಥತೆ ಕಾರಣದಿಂದಾಗಿ ಸೆಪ್ಟೆಂಬರ್ 19ರಂದು ನಿಧನರಾದರು. ಬಿಹಾರ್‍ನ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯಿಂದ ನೀಡಲಾಗಿರುವ ಮರಣ ಪ್ರಮಾಣ …

Read More »

ಬೆಂಗಳೂರಲ್ಲಿ 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ.!

ಬೆಂಗಳೂರು : ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‍ರಾಜ್ಯ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿ 5 ಕೋಟಿ ರೂ. ಮೌಲ್ಯದ 5ಕೆಜಿ ಹ್ಯಾಸ್ ಹಾಯಿಲ್ ಮತ್ತು ಒಂದು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಪ್ರಕಾಶ್ ಮತ್ತು ದಾರಾಸ್ವಾಮಿ ಬಂಧಿತ ಆರೋಪಿಗಳು. ಮಾದಕ ವಸ್ತು ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಾದ …

Read More »

ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ : ಕರವೇ ಅಧ್ಯಕ್ಷ್ಯ ಟಿ. ಎ ನಾರಾಯಣ ಗೌಡ

ಬೆಂಗಳೂರು : ಡಿಸೆಂಬರ್‌ 31ರ ಕರ್ನಾಟಕ ಬಂದ್‌ಗೆ ಸಧ್ಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ್ಯ ಟಿ.ಎ ನಾರಾಯಣ ಗೌಡ ಹೇಳಿದ್ದಾರೆ.ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷರು, ’31ರ ಕರ್ನಾಟಕ ಬಂದ್‌ಗೆ ಸಧ್ಯಕ್ಕೆ ನಮ್ಮ ಬೆಂಬಲವಿಲ್ಲ . ಯಾಕಂದ್ರೆ, ಬಂದ್‌ಗೆ ಒಂದಷ್ಟು ಯೋಜನೆ ಮಾಡಿಕೊಳ್ಳಬೇಕು. ಈ ರೀತಿ ಏಕಾಏಕಿ ಪ್ರತಿಭಟನೆ ಮಾಡಿದ್ರೆ, ಜನರಿಗೆ ತೊಂದರೆ ಆಗುತ್ತೆ. ಹಾಗಾಗಿ ನಾಳಿನ ಕರವೇ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ …

Read More »