Breaking News

ರಷ್ಯಾದಿಂದ ಮೊದಲ ಬಾರಿಗೆ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ

ಉಕ್ರೇನ್: ರಷ್ಯಾ-ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಭಾರತ ಸೇರಿದಂತೆ ಕೆಲವು ದೇಶಗಳು ಪ್ರಯತ್ನಿಸುತ್ತಲೇ ಇವೆ. ಭಾರತ ಶಾಂತಿಯುತ ಮಾತುಕತೆಯ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಹಲವು ಬಾರಿ ಮನವಿ ಮಾಡಿದೆ. ಅಮೆರಿಕ, ಫ್ರಾನ್ಸ್ ಸೇರಿದಂತೆ ಇತರೆ ದೇಶಗಳು ಕೂಡ ಇದಕ್ಕೆ ಧ್ವನಿ ಸೇರಿಸಿದ್ದವು. ಆದರೆ, ಈ ಎರಡು ರಾಷ್ಟ್ರಗಳ ಯುದ್ಧ ಭೀಕರ ಹಂತಕ್ಕೆ ಹೋಗಿದ್ದು, ರಷ್ಯಾ ಮೊದಲ ಬಾರಿಗೆ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಅಥವಾ ಐಸಿಬಿಎಂ ಪ್ರಯೋಗ ಮಾಡಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ಕುರಿತ ನಿಯಮಾವಳಿಯಲ್ಲಿ ಬದಲಾವಣೆ ತರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಯುದ್ಧದಲ್ಲಿ ಮೊದಲ ಬಾರಿ ರಷ್ಯಾ ಐಸಿಬಿಎಂ ಅನ್ನು ಬಳಕೆ ಮಾಡಿದೆ. ಈ ಬಗ್ಗೆ ಉಕ್ರೇನ್ ವಾಯುಪಡೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ರಷ್ಯಾ ಇಂದು ಬೆಳಗ್ಗೆ ಮಧ್ಯ ಉಕ್ರೇನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆ ಮಾಡಿದೆ ಎಂದು ಹೇಳಿದೆ. ಆದರೆ, ಇದರಿಂದ ಆಗಿರುವ ಹಾನಿ ಅಥವಾ ಸಾವುನೋವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಉಕ್ರೇನ್ ಬಹಿರಂಗಪಡಿಸಿಲ್ಲ.
ಉಕ್ರೇನ್ ಕಳೆದ ವಾರಾಂತ್ಯದಲ್ಲಿ ಅಮೆರಿಕ ಮತ್ತು ಇಂಗ್ಲೆಂಡ್ ನಿರ್ಮಿತ ಕ್ಷಿಪಣಿಗಳನ್ನು ರಷ್ಯಾದ ಮೇಲೆ ಉಡಆವಣೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಇದೇ ಮೊದಲ ಬಾರಿಗೆ ಯುದ್ಧದಲ್ಲಿ ರಷ್ಯಾ ಐಸಿಬಿಎಂ ಪ್ರಯೋಗ ಮಾಡಿದೆ. ಉಕ್ರೇನ್​ನಲ್ಲಿ ಯುದ್ಧದ ಭೀಕರತೆ ಹೆಚ್ಚಾಗಿರುವುದರಿಂದ ಈಗಾಗಲೇ ಭಾರತ, ಅಮೆರಿಕಾ ಮುಂತಾದ ದೇಶಗಳು ಕೈವ್​ನಲ್ಲಿನ ರಾಯಭಾರ ಕಚೇರಿಯನ್ನು ಬಂದ್ ಮಾಡಿವೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *