Breaking News

ಸಿನಿಮಾ

ನಟಿ ಕಾರ್ತಿಕಾ ನಾಯರ್‌ ನಮ್ಮ ರಾಯಲ್ ಫೇರಿಟೇಲ್ ಬಿಗಿನ್ಸ್ ಬ್ಲೆಸ್ಡ್ ಎಂದು ಬರೆದುಕೊಂಡಿದ್ದಾರೆ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಬೃಂದಾವನ’ ಸಿನಿಮಾದ ಮೂಲಕ ಪರಿಚಯವಾದವರು ನಟಿ ಕಾರ್ತಿಕಾ ನಾಯರ್‌ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವಾರು ನಟಿ-ನಟಿಯರುಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಕೋರಿದರು. ನಟಿ ಕಾರ್ತಿಕಾ ನಾಯರ್ ಹಿರಿಯ ನಟಿ ರಾಧಾ ಅವರ ಪುತ್ರಿ. ನಟಿ ಕಾರ್ತಿಕಾ ತನ್ನ ನಿಶ್ಚಿತ ವರ ರೋಹಿತ್ ಮೆನನ್ ಅವರನ್ನು ಕೇರಳದಲ್ಲಿ ವಿವಾಹವಾದರು. ಸಮಾರಂಭದ ಚಿತ್ರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಕೇರಳದ …

Read More »

ತಮಿಳು ಸ್ಟಾರ್ ಸೂರ್ಯ ‘ಕಂಗುವ’ ಸೆಟ್‌ನಲ್ಲಿ ಆಕಸ್ಮಿಕವಾಗಿ ಗಾಯ….

ತಮಿಳು ಸ್ಟಾರ್ ಸೂರ್ಯ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ ‘ಕಂಗುವ’ ಸೆಟ್‌ನಲ್ಲಿ ಆಕಸ್ಮಿಕವಾಗಿ ಗಾಯಗೊಂಡಿದ್ದಾರೆ. ಚಿತ್ರೀಕರಣದ ವೇಳೆ ರೋಪ್ ಕ್ಯಾಮೆರಾ ಭುಜದ ಮೇಲೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸದ್ಯ ನಟ ಸೂರ್ಯ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಚೆನ್ನೈನ ಹೊರಗಡೆ ಇರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಸಿರುತೈ ಶಿವ ನಿರ್ದೇಶನದ ‘ಕಂಗುವ’ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. …

Read More »

ರಾಕಿಭಾಯ್ ಖಡಕ್ ಲುಕ್‌ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ….

ರಾಕಿಂಗ್ ಸ್ಟಾರ್ ಯಶ್ ಲಂಡನ್‌ನಿಂದ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಬಿಜಿಎಸ್ ಉತ್ಸವ 2023 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಯಶ್‌19 ಅಪ್‌ಡೇಟ್ ಬಗ್ಗೆಯೂ ಮಾತನಾಡಿದ್ದಾರೆ. ರಾಕಿಭಾಯ್ ಖಡಕ್ ಲುಕ್‌ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಶ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊ, ವಿಡಿಯೋಗಳು ವೈರಲ್ ಆಗ್ತಿದೆ. KGF’ ಚಾಪ್ಟರ್‌-2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ಯಶ್ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ನಮ್ ಬಾಸ್ …

Read More »

ತಮಿಳು ಬಿಗ್ ಬಾಸ್‌ನ ಏಳನೇ ಸೀಸನ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ…

ತಮಿಳು ನಟಿ ವಿಚಿತ್ರಾ ತೆಲುಗಿನ ಸೀನಿಯರ್ ಹೀರೊ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ವಿಚಿತ್ರಾ ಈ ಹಿಂದೆ ಹಲವು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ತಮಿಳು ಬಿಗ್ ಬಾಸ್‌ನ ಏಳನೇ ಸೀಸನ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇದೇ ರಿಯಾಲಿಟಿ ಶೋ ಅನ್ನು ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ. 1991ರಲ್ಲಿ ವಿಚಿತ್ರಾ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 20 ವರ್ಷಗಳ …

Read More »

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರು…

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. 2 ಭಾಗಗಳಾಗಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಪ್ರಶಾಂತ್‌ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ಆರ್ಭಟ ನೋಡೋಕೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಡಿಸೆಂಬರ್ 1ಕ್ಕೆ ‘ಸಲಾರ್’ ಟ್ರೈಲರ್ ರಿಲೀಸ್ ಆಗಲಿದೆ. ಯಾವ ಭಾಗದಲ್ಲಿ ಯಾರು ‘ಸಲಾರ್’ ಚಿತ್ರವನ್ನು ವಿತರಣೆ ಮಾಡುತ್ತಾರೆ? ಎನ್ನುವ ಬಗ್ಗೆಯೂ ಚಿತ್ರತಂಡ ಮಾಹಿತಿ ಕೊಡುತ್ತಿದೆ. …

Read More »

ಸೈಡ್- B ಭಾವನಾತ್ಮಕ ಕತೆಗೆ ಸಿನಿರಸಿಕರು ಫಿದಾ ಆಗಿದ್ದಾರೆ….

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್- B ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸೆಪ್ಟೆಂಬರ್ 1ರಂದು ಚಿತ್ರದ ಮೊದಲ ಭಾಗ ರಿಲೀಸ್ ಆಗಿತ್ತು. 2ನೇ ಭಾಗ ಈ ಪ್ರೇಕ್ಷಕರನ್ನು ರಂಜಿಸುತ್ತಿದೆ. ಭಾವನಾತ್ಮಕ ಕತೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಹೇಮಂತ್ ರಾವ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ನಾಯಕಿಯರಾಗಿ ಮಿಂಚಿದ್ದಾರೆ. ಕನ್ನಡ ಜೊತೆಗೆ ತೆಲುಗು, ತಮಿಳು, …

Read More »

ಹಮದಾಬಾದ್ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ‘ಚಿಣ್ಣರ ಚಂದ್ರ’ ಹೊರಟು ನಿಂತಿದೆ…

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಚಿಣ್ಣರ ಚಂದ್ರ’ ಸುದ್ದಿಯಲ್ಲಿದೆ. ಈಗಾಗಲೇ ಈ ಸಿನಿಮಾ ಮೆಲ್ಬರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿ ಸ್ಪರ್ಧೆಯ ಅಂತಿಮ ಹಂತ ತಲುಪಿದೆ. ಇದೀಗ ಅಹಮದಾಬಾದ್ ಅಂತರರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ‘ಚಿಣ್ಣರ ಚಂದ್ರ’ ಹೊರಟು ನಿಂತಿದೆ. ಅಧಿಕೃತವಾಗಿ ಚಿತ್ರೋತ್ಸವಕ್ಕೆ ಆಯ್ಕೆ ಆಗಿರುವ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದೆ. ‘ಚಿಣ್ಣರ ಚಂದ್ರ’ ಚಿತ್ರ ಶಿಕ್ಷಣದ ಮಹತ್ವ ಸಾರುವ ಜೊತೆ ಜೊತೆಗೆ ಸಮಾಜದಲ್ಲಿ ಸದಭಿರುಚಿ, ಸೌಹಾರ್ದತೆ ಮತ್ತು ಸಮಾನತೆ …

Read More »

ವಾಸುಕಿ ವೈಭವ್ ಮನಗೆದ್ದ ಹುಡುಗಿ ಬೃಂದಾ ವಿಕ್ರಮ್…

ಸ್ಯಾಂಡಲ್‌ವುಡ್‌ನ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್‌ ತನ್ನ ಬಹುಕಾಲದ ಗೆಳತಿ ಜೊತೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ, ಅವರ ಹೊಸ ಬದುಕು ತುಂಬಾ ಸುಂದರವಾಗಿರಲಿ ಎಂಬುವುದೇ ಎಲ್ಲರ ಹಾರೈಕೆ. ವಾಸುಕಿ ವೈಭವ್ ಮನಗೆದ್ದ ಹುಡುಗಿ ಯಾರು ಎಂಬ ಕುತೂಹಲ ತುಂಬಾ ಜನರಿಗಿತ್ತು, ಅದಕ್ಕೆ ಉತ್ತರ ಸಿಕ್ಕಿದೆ, ಬಿಗ್‌ಬಾಸ್‌ನಲ್ಲಿ ವಾಸುಕಿ ವೈಭವ್‌ ಅವರ ಆಟದ ಶೈಲಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು, ವಿನ್ನರ್‌ ಪಟ್ಟಕ್ಕೆ ಕಠಿಣ ಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಗಿದ್ದರು, ಬಿಗ್‌ಬಾಸ್‌ನಲ್ಲಿರುವಾಗ ಅವರ …

Read More »

ಬಾಲಿವುಡ್ ನಟ ನಾನಾ ಪಾಟೇಕರ್ ಅಭಿಮಾನಿಯೊಬ್ಬನ ಕೆನ್ನೆಗೆ ಬಾರಿಸಿದ್ದ ವಿಡಿಯೋ ವೈರಲ್….

ಬಾಲಿವುಡ್ ನಟ ನಾನಾ ಪಾಟೇಕರ್ ಅಭಿಮಾನಿಯೊಬ್ಬನ ಕೆನ್ನೆಗೆ ಬಾರಿಸಿದ್ದ ವಿಡಿಯೋ ವೈರಲ್ ಆಗ್ತಿದೆ. ಸೆಲ್ಫಿ ಕೇಳುವುದಕ್ಕೆ ಹೋದ ಹುಡುಗನ ಮೇಲೆ ಗರಂ ಆಗಿ ಹಿರಿಯ ನಟ ಕೈ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕೊನೆಗೂ ನಾನಾ ಪಾಟೇಕರ್ ಮೌನ ಮುರಿದಿದ್ದಾರೆ. ಅಸಲಿಗೆ ಆ ಸಂದರ್ಭದಲ್ಲಿ ಏನಾಯ್ತು? ಎಂದು ವಿವರಿಸಿದ್ದಾರೆ. ಪ್ರತಿಭಾನ್ವಿತ ನಟ ನಾನಾ ಪಾಟೇಕರ್‌ಗೆ ವಿವಾದಗಳು ಹೊಸದೇನಲ್ಲ. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಆರೋಪದಲ್ಲಿ ಸಿಲುಕಿದ್ದರು. ಆದರೆ …

Read More »

ನಟಿ ರಶ್ಮಿ ಪ್ರಭಾಕರ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ…

ಕನ್ನಡ ಕಿರುತೆರೆ ನಟಿಯರು ಹೆಚ್ಚಾಗಿ ಪರಭಾಷೆಗಳಲ್ಲಿ ಮಿಂಚುವುದು ಸಹಜ. ಈ ಸಾಲಿಗೆ ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಹೊರತಾಗೇನೂ ಇಲ್ಲ.ತಮಿಳಿನ ಧಾರಾವಾಹಿಗಳಲ್ಲಿ ನಟಿಸುತ್ತಲೇ, ಕನ್ನಡ ಕಿರುತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳುವ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದರು. ಈಗ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಕಾರ್ಯಕ್ರಮದಲ್ಲಿ ಕೆಂಪು ಗೌನ್ ಧರಿಸಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Read More »