Breaking News

ಬಾಲಿವುಡ್ ನಟ ನಾನಾ ಪಾಟೇಕರ್ ಅಭಿಮಾನಿಯೊಬ್ಬನ ಕೆನ್ನೆಗೆ ಬಾರಿಸಿದ್ದ ವಿಡಿಯೋ ವೈರಲ್….

ಬಾಲಿವುಡ್ ನಟ ನಾನಾ ಪಾಟೇಕರ್ ಅಭಿಮಾನಿಯೊಬ್ಬನ ಕೆನ್ನೆಗೆ ಬಾರಿಸಿದ್ದ ವಿಡಿಯೋ ವೈರಲ್ ಆಗ್ತಿದೆ. ಸೆಲ್ಫಿ ಕೇಳುವುದಕ್ಕೆ ಹೋದ ಹುಡುಗನ ಮೇಲೆ ಗರಂ ಆಗಿ ಹಿರಿಯ ನಟ ಕೈ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಕೊನೆಗೂ ನಾನಾ ಪಾಟೇಕರ್ ಮೌನ ಮುರಿದಿದ್ದಾರೆ. ಅಸಲಿಗೆ ಆ ಸಂದರ್ಭದಲ್ಲಿ ಏನಾಯ್ತು? ಎಂದು ವಿವರಿಸಿದ್ದಾರೆ.

ಪ್ರತಿಭಾನ್ವಿತ ನಟ ನಾನಾ ಪಾಟೇಕರ್‌ಗೆ ವಿವಾದಗಳು ಹೊಸದೇನಲ್ಲ. ಈ ಹಿಂದೆಯೂ ಕಾಸ್ಟಿಂಗ್ ಕೌಚ್ ಆರೋಪದಲ್ಲಿ ಸಿಲುಕಿದ್ದರು. ಆದರೆ ಈಗ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಸಂಕಷ್ಟ ಎದುರಿಸುವಂತಾಗಿತ್ತು. ‘ಜರ್ನಿ’ ಸಿನಿಮಾದಲ್ಲಿ ನಾನಾ ಪಾಟೇಕರ್ ನಟಿಸುತ್ತಿದ್ದಾರೆ. ಸದ್ಯ ವಾರಣಾಸಿಯಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಬ್ಯುಸಿಯಾಗಿರುವಾಗಲೇ ಅಭಿಮಾನಿಯೊಬ್ಬ ನಾನಾ ಪಾಟೇಕರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆಗ ನಾನಾ ಪಾಟೇಕರ್ ಕೋಪಗೊಂಡು ಸೆಲ್ಫಿ ಕೇಳಲು ಬಂದ ಹುಡುಗನ ತಲೆಗೆ ಹೊಡೆದಿದ್ದರು. ಸೆಟ್ ನಲ್ಲಿದ್ದ ಸಿಬ್ಬಂದಿ ಬಾಲಕನ ಕತ್ತು ಹಿಡಿದು ಹೊರಗೆ ತಳ್ಳಿದ್ದರು.
ಖ್ಯಾತ ನಟ ಈ ರೀತಿ ಅಭಿಮಾನಿ ಮೇಲೆ ಕೈ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ವಿಡಿಯೋ ಮಾಡಿ ನಾನಾ ಪಾಟೇಕರ್ ಕ್ಷಮೆ ಕೇಳಿದ್ದಾರೆ. “ಈವರೆಗೆ ನಾನು ಫೋಟೊ ಕೊಡಲ್ಲ ಎಂದು ಯಾರಿಗೂ ಹೇಳಿಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆ. ನನ್ನನ್ನು ಕ್ಷಮಿಸಿ. ನಾನು ಅಲ್ಲೇ ನೇರವಾಗಿ ಆ ಹುಡುಗನ ಕ್ಷಮೆ ಕೇಳಿದೆ. ಆದರೆ ಆತ ಭಯದಿಂದ ಓಡಿಹೋದ” ಎಂದು ನಾನಾ ಪಾಟೇಕರ್ ಹೇಳಿದ್ದಾರೆ.

Share News

About BigTv News

Check Also

ಅಭಿಮಾನಿಗಳಿಗೆ ಶಾಕ್ ಡಾಲಿ

ಡಾಲಿ ಧನಂಜಯ್ ಹುಟ್ಟುಹಬ್ಬದ ಹಿನ್ನೆಲೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಈ ಬಾರಿ ತಾವು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು …

Leave a Reply

Your email address will not be published. Required fields are marked *