Breaking News

ರಾಕಿಭಾಯ್ ಖಡಕ್ ಲುಕ್‌ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ….

ರಾಕಿಂಗ್ ಸ್ಟಾರ್ ಯಶ್ ಲಂಡನ್‌ನಿಂದ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ. ಬಿಜಿಎಸ್ ಉತ್ಸವ 2023 ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಯಶ್‌19 ಅಪ್‌ಡೇಟ್ ಬಗ್ಗೆಯೂ ಮಾತನಾಡಿದ್ದಾರೆ. ರಾಕಿಭಾಯ್ ಖಡಕ್ ಲುಕ್‌ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಶ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೊ, ವಿಡಿಯೋಗಳು ವೈರಲ್ ಆಗ್ತಿದೆ.
KGF’ ಚಾಪ್ಟರ್‌-2 ಸಿನಿಮಾ ಬಂದೋಗಿ ಒಂದೂವರೆ ವರ್ಷ ಕಳೆದರೂ ಯಶ್ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಅಭಿಮಾನಿಗಳು ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದಾರೆ. ನಮ್ ಬಾಸ್ ಹೊಸ ಸಿನಿಮಾ ಅಪ್‌ಡೇಟ್ ಕೊಡೋದು ಯಾವಾಗ? ಸಿನಿಮಾ ಸೆಟ್ಟೇರೋದು ಯಾವಾಗ? ಶೂಟಿಂಗ್ ಮುಗಿಯೋದು ಯಾವಾಗ? ರಿಲೀಸ್ ಆಗೋದು ಯಾವಾಗ? ಅಂತ ತಲೆಕೆಡಿಸಿಕೊಂಡಿದ್ದಾರೆ. ಪರಿಪರಿಯಾಗಿ ಕೇಳಿ ಕೇಳಿ ಸುಮ್ಮನಾಗಿದ್ದಾರೆ.ಯಶ್ ತಮ್ಮ ಮುಂದಿನ ಚಿತ್ರಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ಕಸರತ್ತು ಮಾಡುತ್ತಿದ್ದಾರೆ. ‘KGF’ ಸರಣಿ ಬಳಿಕ ಮುಂದಿನ ಚಿತ್ರವನ್ನು ಬಹಳ ದೊಡ್ಡಮಟ್ಟದಲ್ಲೇ ಪ್ಲ್ಯಾನ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ತಡವಾಗುತ್ತಿದೆ. ಯಶ್ ಮುಂದಿನ ಸಿನಿಮಾ ಬಗ್ಗೆ ಬಹಳ ಒತ್ತಡದಲ್ಲಿದ್ದಾರೆ ಎನ್ನುವ ವಾದವೂ ಇದೆ. ಆದರೆ ಇದನ್ನು ಒಪ್ಪಲು ಯಶ್ ಸಿದ್ಧರಿಲ್ಲ. ಒಳ್ಳೆ ಸಿನಿಮಾ ಮಾಡೋಕೆ ಆರಂಭಿಸೋಕೆ ಮತ್ತಷ್ಟು ಸಮಯ ಬೇಕು ಎಂದು ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.

Share News

About BigTv News

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *