ಸ್ಯಾಂಡಲ್‌ವುಡ್‌ನ ಯುವ ಸಂಗೀತ ನಿರ್ದೇಶಕ, ಗಾಯಕ ವಾಸುಕಿ ವೈಭವ್ ತನ್ನ ಬಹುಕಾಲದ ಗೆಳತಿ ಜೊತೆಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ, ಅವರ ಹೊಸ ಬದುಕು ತುಂಬಾ ಸುಂದರವಾಗಿರಲಿ ಎಂಬುವುದೇ ಎಲ್ಲರ ಹಾರೈಕೆ. ವಾಸುಕಿ ವೈಭವ್ ಮನಗೆದ್ದ ಹುಡುಗಿ ಯಾರು ಎಂಬ ಕುತೂಹಲ ತುಂಬಾ ಜನರಿಗಿತ್ತು, ಅದಕ್ಕೆ ಉತ್ತರ ಸಿಕ್ಕಿದೆ, ಬಿಗ್‌ಬಾಸ್‌ನಲ್ಲಿ ವಾಸುಕಿ ವೈಭವ್ ಅವರ ಆಟದ ಶೈಲಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದರು, ವಿನ್ನರ್ ಪಟ್ಟಕ್ಕೆ ಕಠಿಣ ಸ್ಪರ್ಧೆ ನೀಡುವಲ್ಲಿ ಯಶಸ್ವಿಯಾಗಿದ್ದರು, ಬಿಗ್‌ಬಾಸ್‌ನಲ್ಲಿರುವಾಗ ಅವರ ರಚಿಸಿದ ಮನಸ್ಸಿಂದ ಯಾರೂ ಕೆಟ್ಟವರಲ್ಲ. ಹಾಡನ್ನು ಸುದೀಪ್ ಅವರು ಹಾಡಿದ ಮೇಲೆ ಆ ಹಾಡು ಮನೆ ಮನೆಗೆ ತಲುಪುವ ಮೂಲಕ ವಾಸುಕಿ ವೈಭವ್ ಎಂಬ ಯುವ ಪ್ರತಿಭೆ ಮತ್ತಷ್ಟು ಗುರುತಿಸಿಕೊಂಡರು.ಮನಸ್ಸಿಂದ ಯಾರೂ ಕೆಟ್ಟವರಲ್ಲಾ ಹಾಡನ್ನು ಇಂದಿಗೂ ಜನ ಮರೆತಿಲ್ಲ, ಇದೀಗ ಚಿತ್ರ ನಟನೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ ಇಂಥ ಪ್ರತಿಭೆಯ ಮನಕದ್ದ ಸುಂದರಿ ಯಾರು ಎಂಬ ಕುತೂಹಲ ವಾಸುಕಿ ವೈಭವ್ ಅವರ ಅಭಿಮಾನಿಗಳಿತ್ತು, ಆ ಹುಡುಗಿ ಬೃಂದಾ ವಿಕ್ರಮ್.
bigtvnews | Hubli Dharwad News | Kannada News | Karnataka News Hubli News | News In Hubli | Local news





