Breaking News

ಸುದ್ದಿ

ಕಲುಷಿತ ನೀರು ಸೇವಿಸಿದ ಪರಿಣಾಮ ವಾಂತಿಭೇದಿ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ….

ವಿಜಯನಗರ : ಇಷ್ಟು ದಿನ ಕಲುಷಿತ ನೀರು ಸೇವನೆಯಿಂದಾಗಿ ಜನ ಅಸ್ವಸ್ಥರಾಗುವ ಘಟನೆಗಳು ಹೆಚ್ಚಾಗಿ ರಾಯಚೂರಿನಲ್ಲಿ ಕಂಡು ಬರುತ್ತಿದ್ದವು. ಈಗ ಆ ನೀರು ವಿಜಯನಗರಕ್ಕೂ ಹರಿದಿದೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಅನ್ನೋ ಹಾಗೆ ಈಗ ಅಧಿಕಾರಿಗಳು ನೀರು ಪರಿಶೀಲನೆಗೆ ಮುಂದಾಗಿದ್ದಾರೆ. ನೀರು ಮನುಷ್ಯನಿಗೆ ಅತ್ಯಗತ್ಯವಾದ ಜೀವಜಲ. ಆದರೆ ಕಲುಷಿತ ನೀರು ಸೇವನೆಯಿಂದಾಗಿ ಜನ ಅಸ್ವಸ್ಥರಾಗುತ್ತಿರುವ ಘಟನೆಗಳು ಆಗಾಗ ರಾಜ್ಯದಲ್ಲಿ ಕಂಡು ಬರುತ್ತಿದ್ದು ಆತಂಕಕ್ಕೆ ಎಡೆಮಾಡಿವೆ. …

Read More »

ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ…

ಹುಬ್ಬಳ್ಳಿ: ರಾಮಜನ್ಮ ಭೂಮಿ ಹೋರಾಟದಲ್ಲಿ ಭಾಗಿಯಾದ ಶ್ರೀಕಾಂತ್ ಪೂಜಾರ ಬಂಧನ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡುತ್ತಿದ್ದಾರೆ.ಇದೇ ಜನವರಿ 22 ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಸಿದ್ದವಾಗಿದ್ದರೆ. ಇತ್ತ ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಅರೆಸ್ಟ್ ಮಾಡ್ತಿದ್ದಾರೆಂದು, ಬಿಜೆಪಿ ಕಾರ್ಯಕರ್ತರು ಶ್ರೀರಾಮ ಜಯರಾಮ ಎಂದು ಭಜನೆ ಮಾಡುವುದರ ಮೂಲಕ ಪ್ರತಿಭಟನೆ ಮಾಡ್ತಿದ್ದಾರೆ. ಇನ್ನು ಸಿದ್ದರಾಮಯ್ಯ …

Read More »

ಚಿತ್ರಕಲಾ ಪರೀಕ್ಷೆಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಸುಳ್ಳ ಗ್ರಾಮದ ಶ್ರೀ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ….

ನವಲಗುಂದ: ಧಾರವಾಡ ತಾಲೂಕಿನ ಹೆಬ್ಬಳ್ಳಿಯ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪರೀಕ್ಷೆಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಸುಳ್ಳ ಗ್ರಾಮದ ಶ್ರೀ ಶಿವಾನಂದ ಭಾರತಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಈ ಹಿರಿಯ ಶ್ರೇಣಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರಾದ ಭಾಗ್ಯ ಜಿ. ಮಣಕವಾಡ 483 ಅಂಕಗಳನ್ನು ಪಡೆದು ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸೌಮ್ಯ ಎನ್ ಲಕ್ಷ್ಮೀಶ್ವರ 477 ಅಂಕಗಳನ್ನು ಪಡೆದು ದ್ವಿತೀಯ …

Read More »

ಕೆಸಿಸಿ ಬ್ಯಾಂಕ್ ಅನೇಕ ಸಾಲದ ಯೋಜನೆಯ ಮೂಲಕ ಗ್ರಾಹಕರಿಗೆ ಉತ್ತಮ ಕೊಡುಗೆ….

ಕುಂದಗೋಳ : ಕೆಸಿಸಿ ಬ್ಯಾಂಕ್ ಅನೇಕ ಸಾಲದ ಯೋಜನೆಯ ಮೂಲಕ ಗ್ರಾಹಕರಿಗೆ ಉತ್ತಮ ಕೊಡುಗೆ ನೀಡುತ್ತಿದ್ದು ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಬ್ಯಾಂಕ್ ನಿರ್ದೇಶಕ ಉಮೇಶ ಹೆಬಸೂರ ಹೇಳಿದರು.ಪಟ್ಟಣದ ಕೆಸಿಸಿ ಬ್ಯಾಂಕಿನಲ್ಲಿ ಹಮ್ಮಿಕೊಂಡಿದ್ದ ಕುಂದಗೋಳ ಹಾಗೂ ಸಂಶಿ ಶಾಖೆಯಲ್ಲಿ ಹೊಸ ಬೆಳಕು ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾಠ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕ್ ಮೊದಲು ರೈತರಿಗೆ ಮಾತ್ರ ಸೌಲಭ್ಯ ನೀಡುತ್ತಿತ್ತು. ಇದೀಗ ಎಲ್ಲ ವರ್ಗದ ಜನರಿಗೂ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. …

Read More »

ನೂತನ ವರ್ಷದ ಕ್ಯಾಲೆಂಡ‌ರ್ ಬಿಡುಗಡೆ ಸಮಾರಂಭ ಬೆಳ್ಳಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು…..

ಕುಂದಗೋಳ : ಸಂಶಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಂಸ್ಥೆಗೆ ಡಿಸೆಂಬರ್ 2023 ರಿಂದ ಮುಂದಿನ ಐದು ವರ್ಷಗಳವರೆಗೆ ಆಡಳಿತ ಮಂಡಳಿಗೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ಸಂಸ್ಥೆಯ ಸಿಬ್ಬಂದಿ ವರ್ಗದಿಂದ ಸನ್ಮಾನ ಸಮಾರಂಭ ಹಾಗೂ ಸಂಸ್ಥೆಯ ನೂತನ ವರ್ಷದ ಕ್ಯಾಲೆಂಡ‌ರ್ ಬಿಡುಗಡೆ ಸಮಾರಂಭ ಬೆಳ್ಳಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ನೂತನ ವರ್ಷದ ಅಂಗವಾಗಿ ಸಂಶಿ ಅರ್ಬನ್ ಕೋಂ ಆಪರೇಟಿವ್‌ ಬ್ಯಾಂಕ್‌ ಹಾಗೂ ಸಿಬ್ಬಂದಿ …

Read More »

ಬಿಜೆಪಿ ಮೊದಲಿನಿಂದಲೂ ‌ಮಾಡುತ್ತಿದೆಂದು ರಾಮ ಮಂದಿರ ಕೇಸ್ ರೀ ಒಪನ್ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಸಮರ್ಥನೆ….

ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟಗಾರ ಅರೆಸ್ಟ್ ವಿಚಾರ, ಪೋಲಿಸರು ತಮ್ಮ ರೋಟಿನ್ ವರ್ಕ್ ಮಾಡಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು, ರೋಟಿನ್ ವರ್ಕ್ ಗೆ ಬಣ್ಣ ಹಚ್ಚಿ ಬೇರೆ ತರಹದ ಮೇಸಜ್ ಪಾಸ್ ಮಾಡಿ ಜನರ ಕೋಮು ಸೌಹಾರ್ದತೆ ಹಾಳು ಮಾಡೋದು ಬಿಜೆಪಿ ಮೊದಲಿನಿಂದಲೂ ‌ಮಾಡುತ್ತಿದೆಂದು ರಾಮ ಮಂದಿರ ಕೇಸ್ ರೀ ಒಪನ್ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ …

Read More »

ಹುಬ್ಬಳ್ಳಿ, ಧಾರವಾಡ ಬೈಪಾಸ್‌ನಲ್ಲಿ ಬೈಕ್‌ ಸವಾರನ ಮೇಲೆ ಹತ್ತಿದ ಟಿಪ್ಪರ್…

ಧಾರವಾಡ : ಹುಬ್ಬಳ್ಳಿ, ಧಾರವಾಡ ಬೈಪಾಸ್‌ನಲ್ಲಿ ಬೈಕ್‌ ಸವಾರನ ಮೇಲೆ ಟಿಪ್ಪರ್ ವಾಹನ ಹತ್ತಿ ಹೋದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಬೈಪಾಸ್‌ ನಿರ್ಮಾಣ ಕೆಲಸ ನಡೆಯುತ್ತಿದ್ದು, ಟಿಪ್ಪ‌ರ್ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಬೈಕ್‌ ಸವಾರ ಟಿಪ್ಪ‌ರ್ ಹಿಂದಿಕ್ಕಿ ಮುಂದೆ ಹೋಗುವ ಅವಸರದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ದೂರು ದಾಖಲಿಸಿಕೊಂಡಿದ್ದಾರೆ.

Read More »

ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದ ಸಚಿವಾರಿಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ…

ಬೆಂಗಳೂರು: ಭಗವಾನ್ ರಾಮನನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಹೋಲಿಸಿ ಮಾತನಾಡಿದ್ದಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹೆಚ್ ಆಂಜನೇಯ ಅವಿವೇಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಇಂತಹ ಅವಿವೇಕಿಗಳು, ಸ್ವಜನಪಕ್ಷಪಾತಿಗಳು, ಹಿಂದೂ ವಿರೋಧಿಗಳು ಈ ಹಿಂದೆ ರಾಜ್ಯದ ಸಚಿವಾರಿಗಿದ್ದರು ಎಂಬುದು ರಾಜ್ಯದ ದೌರ್ಭಾಗ್ಯ. ಆಂಜನೇಯ ಮನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪೂಜಾ ಕೈಂಕರ್ಯ ನೆರವೇರಿಸಲಿ. ಹಿಂದೂಗಳ ಆರಾಧ್ಯ ದೈವ ಶ್ರೀ ರಾಮ ದೇವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ …

Read More »

ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನ ಗೆಲ್ಲಲು ಕಾಂಗ್ರೆಸ್‌ ಹೈಕಮಾಂಡ್‌ ಟಾರ್ಗೆಟ್‌….

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳನ್ನ ಗೆಲ್ಲಲು ಕಾಂಗ್ರೆಸ್‌ ಹೈಕಮಾಂಡ್‌ ಟಾರ್ಗೆಟ್‌ ನೀಡಿದೆ. ಅದರಂತೆ ಹೆಚ್ಚು ಸ್ಥಾನಗಳನ್ನ ಗೆಲ್ಲಲ್ಲು ರಾಜ್ಯ ಕಾಂಗ್ರೆಸ್‌ ನಾಯಕರು ಭರ್ಜರಿ ತಯಾರಿ ನಡೆಸಿದೆ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಯಾಗಿರುವ ಡಿ ಕೆ ಶಿವಕುಮಾರ್‌ ಗೆ ಅವರಿಗೆ ಬೆಂಗಳೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯ ನಾಲ್ಕು ಲೋಕಸಭಾ ಕ್ಷೇತ್ರಗಳ ಫೈಕಿ ಕನಿಷ್ಠ ಎರಡು ಕ್ಷೇತ್ರಗಳನ್ನ ಗೆಲ್ಲುವ ಮಾಸ್ಟರ್‌ …

Read More »

ರಾಮಮಂದಿರದಲ್ಲಿ 24 ಅರ್ಚಕರಿರುತ್ತಾರೆ….

ಅಯೋಧ್ಯೆ: ರಾಮಮಂದಿರದಲ್ಲಿ 24 ಅರ್ಚಕರಿರುತ್ತಾರೆ. ಇವರಲ್ಲಿ ಇಬ್ಬರು ಎಸ್‌ಸಿ ಮತ್ತು ಒಬ್ಬರು ಒಬಿಸಿಯವರಾಗಿರುತ್ತಾರೆ. ಮೂರು ತಿಂಗಳ ತರಬೇತಿ ನಂತರ ಈ ಅರ್ಚಕರನ್ನು ನಿಯೋಜಿಸಲಾಗುವುದು. ತರಬೇತಿಯಲ್ಲಿರುವ ಅರ್ಚಕರು ಯುವ ಗುರುಕುಲದ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಅವರು ಯಾವುದೇ ಮೊಬೈಲ್ ಫೋನ್ ಬಳಸುವಂತಿಲ್ಲ ಅಥವಾ ಯಾವುದೇ ಹೊರಗಿನವರೊಂದಿಗೆ ಸಂಪರ್ಕ ಹೊಂದುವಂತಿಲ್ಲ. ನಗರ ರಾಮನಿಗೆ ಸೇರಿದ್ದು, ಇಲ್ಲಿ ಆದರ್ಶಗಳು ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವೂ ಇರುತ್ತದೆ. ರಾಮ್ ಲಲ್ಲಾ ಅವರ ಪವಿತ್ರೀಕರಣದೊಂದಿಗೆ, ಪುರೋಹಿತರಿಗೆ ಸಂಬಂಧಿಸಿದ ಹೊಸ …

Read More »