Breaking News

ಕೊರೋನಾ ಕುರಿತು ಮಹತ್ವದ ಮಾಹಿತಿಯನ್ನು ತಿಳಿಸಿದ ಕೋಡಿಮಠದ ಸ್ವಾಮೀಜಿ



ಬಳ್ಳಾರಿ: ಎರಡು ವರ್ಷಗಳಿಂದ ಕಾಡುತ್ತಿರುವ ಮಾರಕ ಕೋವಿಡ್‌ ಸೋಂಕು ಇನ್ನು ಒಂದೂವರೆ ವರ್ಷದಲ್ಲಿ ನಾಶವಾಗಲಿದೆ. ಆದರೆ ಅದು ಜಗತ್ತಿನಾದ್ಯಂತ ಸಾಕಷ್ಟು ಕಷ್ಟವನ್ನು ನೀಡಲಿದೆ ಎಂದು ಕೋಡಿಮಠದ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.ಅದರಂತೆ ಬಂದಿದೆ ಎಂದರು.

ರಾಜ್ಯದಲ್ಲಿ ಎಲ್ಲ ಕಡೆ ಕೆಂಡ-ಮಂಡಲ ಆಗುತ್ತೆ. ಗುಡುಗು ಸಿಡಿಲು ಮಿಂಚು ಬರಲಿದೆ. ಪ್ರಕೃತಿ ಮೇಲೆ ದಾಳಿ ಮಾಡುತ್ತದೆ, ಮಲೆನಾಡು ಬಯಲು ಆಗುತ್ತದೆ, ಬಯಲು ಮಲೆನಾಡು ಆಗುತ್ತದೆ ಎಂದು ಹೇಳಿದ್ದೆ. ಅದರಂತೆ ದೊಡ್ಡ ದೊಡ್ಡ ನಗರಕ್ಕೆ ಮಳೆಯಿಂದ ಹಾನಿಯಾಗುತ್ತದೆ.

ಮುಂಗಾರು ಇನ್ನೂ ಹೆಚ್ಚುತ್ತದೆ. ಹಿಂಗಾರಿನಲ್ಲಿ ಅಕಾಲಿಕ ಮಳೆ ಆಗುವ ಲಕ್ಷಣಗಳಿವೆ. ಕಳೆದ ಯುಗಾದಿ ವೇಳೆಗೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಆಗಲಿದೆ ಎಂದು ಹೇಳಿದ್ದೆ. ಗುಂಪುಗಳು ಆಗಲಿವೆ. ದೇಶದಲ್ಲಿ ಅವಘಡ ಆಗಲಿದೆ. ಪೈಗಂಬರ್‌ ಬಗ್ಗೆ ಅವಹೇಳನ ಮಾಡುವ ಮೂಲಕ ಆ ಅವಘಡ ಈಗ ಆರಂಭವಾಗಿದೆ.‌ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅದರ ಮುಂದುವರಿದ ಭಾಗವಾಗಿ ಅಪಾಯವಿದೆ. ಮತೀಯ ಗಲಭೆ ಆಗಲಿದೆ, ಸಾವುನೋವು ಆಗುವ ಬಗ್ಗೆಯೂ ಹೇಳಿದ್ದೆ ಎಂದು ಶ್ರೀಗಳು ಸ್ಮರಿಸಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *