Breaking News

ಸುದ್ದಿ

ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿತ….

ಚಿನ್ನ ಮತ್ತು ಬೆಳ್ಳಿಯ ಬೆಲೆ ಈ ವಾರ ಮತ್ತೆ ಕುಸಿಯುತ್ತಿದ್ದು, ಗರಿಷ್ಠ ಬೆಲೆಯ ಮಟ್ಟಕ್ಕೆ ಹೋಲಿಸಿದರೆ, ಭಾರೀ ಇಳಿಕೆಯಾಗಿದೆ. ಕಳೆದ ಶುಕ್ರವಾರವೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಗಣನೀಯ ಇಳಿಕೆ ದಾಖಲಾಗಿತ್ತು. ಇದೀಗ ಮತ್ತೆ ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲೇ ಸಾಗಿದ್ದು, ಸೋಮವಾರ ಮತ್ತಷ್ಟು ಇಳಿಕೆ ಕಂಡಿದೆ. ಜಾಗತಿಕ ಬೇಡಿಕೆಯಲ್ಲಿನ ಇಳಿಕೆಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಈ ಕುಸಿತವು ಬರುತ್ತಿದೆ. ಇಂದು ಸೋಮವಾರ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) …

Read More »

ಶೇರೆವಾಡ ಗ್ರಾಮದಲ್ಲಿ ಶಾಲಾ‌ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ‌ ಸಚಿವ ಲಾಡ್

ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದಲ್ಲಿ ಸರಿಯಾಗಿ ಬಸ್ ಬರದೇ ಇರುವುದು ಸೇರಿದಂತೆ ಶಾಲಾ ಮಕ್ಕಳ ಸಮಸ್ಯೆಗಳನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಆಲಿಸಿದರು. ನಮಗೆ ಸಮಯಕ್ಕೆ ಸರಿಯಾಗಿ ಬಸ್ ಬರಲ್ಲ ಬಂದರೂ ಬಸ್ ತುಂಬಾ ತುಂಬಿರುತ್ತೇವೆ ಆದ್ದರಿಂದ ಶಾಲೆಗೆ ‌ಹೋಗಲು ತೊಂದರೆ ಆಗುತ್ತದೆ‌ ಇದರ ಜೊತೆಗೆ ಸರಿಯಾಗಿ ರಸ್ತೆ ಇಲ್ಲಾ ದುರಸ್ತಿ ಮಾಡಿಸಲು ಸಚಿವ ಸಂತೋಷ ಲಾಡ್ ಬಳಿ ಮನವಿ ಮಾಡಿದರು. ಮನವಿ …

Read More »

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಪಾಲಕರಾಗಿ ಮುಂಬಡ್ತಿ ಹೊಂದಿದವರಿಗೆ ಸನ್ಮಾನ..

ಹುಬ್ಬಳ್ಳಿ: ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಿಲಯ ಮೇಲ್ವಿಚಾರಕರಿಂದ ನಿಲಯ ಪಾಲಕರಾಗಿ ಮುಂಬಡ್ತಿ ಹೊಂದಿದ ರಾಮಯ್ಯ ಪೂಜಾರ, ಪ್ರಭಾಕರ ಮೋಟಗಿ, ಮಹೇಶ ಹಣಗಿ ಮತ್ತು ಶ್ರೀಪಾದ ಹುಲಕೋಟಿ ಅವರನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾದ ಸಿ.ವಿ.ಕರವೀರಮಠ ಅವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ವಿನೋದಕುಮಾರ ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ಸುರೇಶ ಗುರಣ್ಣನವರ, ಲಕ್ಷ್ಮಿ ಮೊರಬ, ಶೋಭಾ ಚಾಕಲಬ್ಬಿ, ಹಿರಿಯ ನಿಲಯ ಪಾಲಕರಾದ …

Read More »

ಬಿಜೆಪಿ ಸರ್ಕಾರ ಇದ್ದಾಗ ತನ್ವಿರ್ ಸೇರ್ ಪತ್ರ ಬರೆಯಲಿಲ್ಲ ಯಾಕೆ? ಪ್ರಮೋದ್ ಮುತಾಲಿಕ್..

ಧಾರವಾಡ: ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿ ಗಲಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಯುವಕರು ಅಮಾಯಕರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ತನ್ವಿರ್ ಸೇರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿರುವುದಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಧಾರವಾಡದಲ್ಲಿ ಮಾತನಾಡಿರುವ ಅವರು, ಈಗ ಕಾಂಗ್ರೆಸ್ ಸರ್ಕಾರ ಬಂದಿರುವುದರಿಂದ ತನ್ನೀರ್ ಸೇರ್ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಇದೇ ಪತ್ರವನ್ನು ಬಿಜೆಪಿ ಸರ್ಕಾರ ಇದ್ದಾಗ ಅವರು …

Read More »

ನವಲಗುಂದದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ..

ನವಲಗುಂದ: 24ನೇಯ ಕಾರ್ಗಿಲ್ ವಿಜಯೋತ್ಸವವನ್ನು ದೇಶ್ಯಾದ್ಯಂತ ಆಚರಿಸಲಾಗುತ್ತಿದ್ದು, ಅದರ ಪ್ರಯುಕ್ತ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಮತ್ತು ಶ್ರೀ ಶಂಕರ ಕಲಾ ಹಾಗೂ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಎನ್ ಎಸ್ ಎಸ್, ಎನ್ ಸಿ ಸಿ, ಮತ್ತು ಭಾರತ ಸೌಟ್ಸ್ ಗೈಡ್ಸ್ ಘಟಕಗಳ ಸಹಯೋಗದಲ್ಲಿ, ಜಾಥಾವನ್ನು ಶ್ರೀ ಗಣೇಶ ಗುಡಿಯಿಂದ ಆರಂಭಿಸಲಾಯಿತು. ಅಲ್ಲಿಂದ ರೈತ ಭವನಕ್ಕೆ ಹೋಗಿ ರೈತರ ಸ್ಮಾರಕಕ್ಕೆ ವಂದಿಸಿ,ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಕೈಗೊಂಡು ಕೃಷ್ಣ …

Read More »

ಲಂಡನ್​ನಲ್ಲಿ ಅಪಘಾತ ಆಂಧ್ರಪ್ರದೇಶದ 25 ವರ್ಷದ ಯುವಕ ಕಿರಣ್ ಕುಮಾರ್ ಸಾವು…

ಆಂಧ್ರಪ್ರದೇಶ: ಜೂನ್ 26ರಂದು ಲಂಡನ್​ನಲ್ಲಿ ಅಪಘಾತಕ್ಕೊಳಗಾಗಿದ್ದ ಆಂಧ್ರಪ್ರದೇಶದ 25 ವರ್ಷದ ಯುವಕ ಕಿರಣ್ ಕುಮಾರ್ ಸಾವನ್ನಪ್ಪಿದ್ದಾರೆ. ಗುಂಟೂರು ಜಿಲ್ಲೆಯ ಚೆಬ್ರೋಲು ಮಂಡಲದ ಗೋದಾವರ್ರು ಗ್ರಾಮದ ನಿವಾಸಿ ಕಿರಣ್​ ಕುಮಾರ್​ ಏಲೂರಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ ತನ್ನ ಉನ್ನತ ಶಿಕ್ಷಣ ಎಂಎಸ್‌ಗಾಗಿ ಇಂಗ್ಲೆಂಡ್​ನ ಲಂಡನ್‌ನಲ್ಲಿ ನೆಲೆಸಿದ್ದರು. ಉನ್ನತ ಶಿಕ್ಷಣದ ಬಳಿಕ ಯುಕೆಯಲ್ಲಿ ಉದ್ಯೋಗ ಪಡೆಯಲು ತಜ್ಞರ ಸಲಹೆ ಮೇರೆಗೆ ಕೆಲವು ಕೋರ್ಸ್​ಗಳಿಗಾಗಿ ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಹೀಗೆ ಜೂನ್​ 26ರಂದು ಕುಮಾರ್ …

Read More »

ಪತ್ನಿಯೊಂದಿಗೆ ಅಮೆರಿಕಾಗೆ ಹಾರಿದ ಮೆಗಾಸ್ಟಾರ್ ಚಿರಂಜೀವಿ

ತೆಲುಗು ಸಿನಿಮಾ ರಂಗದ ಖ್ಯಾತ ನಟ ಚಿರಂಜೀವಿ ಇತ್ತೀಚೆಗಷ್ಟೇ ಪತ್ನಿಯೊಂದಿಗೆ ವಿಮಾನದಲ್ಲಿ ಪ್ರಯಾಣಿಸಿದ್ದರು. ಆ ಫೋಟೋಗಳನ್ನು ಚಿರಂಜೀವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವಿರಾಮ ಬಯಸಿ ಅವರು ಪ್ರವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಸಲಿ ಸುದ್ದಿ ಈಗ ಹೊರ ಬಿದ್ದಿದೆ. ಮೆಗಾಸ್ಟಾರ್ ಚಿರಂಜೀವಿ ಪತ್ನಿಯೊಂದಿಗೆ ಪ್ರಯಾಣ ಬೆಳೆಸಿದ್ದು ಅಮೆರಿಕಾಗೆ ಎಂದು ಹೇಳಲಾಗುತ್ತಿದೆ. ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿರಂಜೀವಿ ಅವರ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅದಕ್ಕಾಗಿ ಪತ್ನಿಯೊಂದಿಗೆ ಅಮೆರಿಕಾಗೆ …

Read More »

ತಮನ್ನಾ, ರಜನಿ ಕಾಂಬಿನೇಷನ್ ನ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ಗೆ ಮಳೆ ಅಡ್ಡಿ ತಂದಿದೆ

ತಮನ್ನಾ ಸಖತ್ತಾಗೆ ಸ್ಟೆಪ್ ಹಾಕಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಕಾವಾಲಾ ಹಾಡು ಇಡೀ ದೇಶದ ಡಾನ್ಸ್ ಪ್ರೇಮಿಗಳ ಮನಸ್ಸು ಗೆದಿತ್ತು. ಈ ಹಾಡಿಗೆ ಸಾಕಷ್ಟು ಮಂದಿ ರೀಲ್ಸ್ ಮಾಡಿದ್ದು, ತಮಿಳಿನಲ್ಲಿ ರಿಲೀಸ್ ಆಗಿದ್ದ ಈ ಹಾಡನ್ನು ಇದೀಗ ತೆಲುಗು ಭಾಷೆಯಲ್ಲೂ ತಯಾರು ಮಾಡಲಾಗಿತ್ತು. ಆ ಹಾಡಿನ ಬಿಡುಗಡೆ ಕಾರ್ಯಕ್ರಮವನ್ನು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಆದರೆ ಅದಕ್ಕೀಗ ವರುಣ ಬ್ರೇಕ್ ಹಾಕಿದ್ದಾನೆ. …

Read More »

ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ಉಪನ್ಯಾಸಕ….

ಮಂಗಳೂರು:ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಂದಿಗೆ ಅಸ್ವಾಭಾವಿಕ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ ಅಪರಾಧಿ ಉಪನ್ಯಾಸಕನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿಎಸ್‌ಸಿ-1) ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಳಾಯಿಯ ಪೃಥ್ವಿರಾಜ್ (33) ಶಿಕ್ಷೆಗೊಳಗಾದ ವ್ಯಕ್ತಿ. 2014ರ ಆ.1ರಿಂದ 2016ರ ಸೆ.2ರವರೆಗೆ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಅಸ್ವಾಭಾವಿಕ ರೀತಿಯ ಲೈಂಗಿಕ ಕ್ರಿಯೆ ಮೂಲಕ …

Read More »

ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚು..

ಬೆಂಗಳೂರು: ಮಳೆಗಾಲದಲ್ಲಿ ಜ್ವರ, ಡೆಂಗ್ಯೂ ಸೇರಿದಂತೆ ಕಣ್ಣಿನ ಸೋಂಕಿನ ಸಮಸ್ಯೆ ಕೂಡ ಹೆಚ್ಚು. ಭಾರಿ ಮಳೆ ಮತ್ತು ಪ್ರವಾಹ ವಾತಾವರಣಗಳು ಇದಕ್ಕೆ ಪ್ರಮುಖ ಕಾರಣಗಳು. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲವಾಗುವ ಪರಿಸ್ಥಿತಿ, ಹವಾಮಾನ ಬದಲಾವಣೆ ಮತ್ತು ಪ್ರವಾಹ, ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚುತ್ತದೆ. ರಸ್ತೆಯಲ್ಲಿ ಮಳೆಯ ಕೊಳಚೆ ನೀರುಗಳ ಮೇಲೆ ವಾಹನಗಳು ಸವಾರಿ ಮಾಡಿದಾಗ ಅದರಿಂದ ಮೈಕ್ರೋಡ್ರಾಪ್ಸ್​ ಮೂಲಕ ಸೋಂಕುಗಳು ಪರಿಸರದಲ್ಲಿ ಹರಡುವುದರಿಂದ ಅದೂ ಕೂಡ …

Read More »