Breaking News

ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚು..

ಬೆಂಗಳೂರು: ಮಳೆಗಾಲದಲ್ಲಿ ಜ್ವರ, ಡೆಂಗ್ಯೂ ಸೇರಿದಂತೆ ಕಣ್ಣಿನ ಸೋಂಕಿನ ಸಮಸ್ಯೆ ಕೂಡ ಹೆಚ್ಚು. ಭಾರಿ ಮಳೆ ಮತ್ತು ಪ್ರವಾಹ ವಾತಾವರಣಗಳು ಇದಕ್ಕೆ ಪ್ರಮುಖ ಕಾರಣಗಳು. ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನುಕೂಲವಾಗುವ ಪರಿಸ್ಥಿತಿ, ಹವಾಮಾನ ಬದಲಾವಣೆ ಮತ್ತು ಪ್ರವಾಹ, ಕಲುಷಿತ ವಾತಾವರಣದಿಂದ ಅನೈರ್ಮಲ್ಯ ಪರಿಸ್ಥಿತಿ ಉಂಟಾಗಿ ಕಣ್ಣಿನ ಸೋಂಕು ಹೆಚ್ಚುತ್ತದೆ.

ರಸ್ತೆಯಲ್ಲಿ ಮಳೆಯ ಕೊಳಚೆ ನೀರುಗಳ ಮೇಲೆ ವಾಹನಗಳು ಸವಾರಿ ಮಾಡಿದಾಗ ಅದರಿಂದ ಮೈಕ್ರೋಡ್ರಾಪ್ಸ್​ ಮೂಲಕ ಸೋಂಕುಗಳು ಪರಿಸರದಲ್ಲಿ ಹರಡುವುದರಿಂದ ಅದೂ ಕೂಡ ಕಣ್ಣಿನ ಸಮಸ್ಯೆ ತಂದಿಡುತ್ತದೆ. ಇದರಿಂದ ಕಣ್ಣಿನ ಊತ, ಕೆರೆತ, ನೀರು ಬರುವಿಕೆ, ಪಿಸುರು, ಕಣ್ಣು ರೆಪ್ಪೆ ಊದಿಕೊಳ್ಳುವುದು, ಕೆಂಪಾಗುವುದು ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರ ಭೇಟಿ ಅವಶ್ಯಕ.ಪ್ರವಾಹ, ಅಧಿಕ ಮಳೆಯಲ್ಲಿ ಅನೇಕ ಬಾರಿ ಮಕ್ಕಳು ಕೊಳಚೆ ನೀರು ಮುಟ್ಟಿ ಕಣ್ಣೊರೆಸಿಕೊಳ್ಳುತ್ತಾರೆ. ಅನೇಕ ಬಾರಿ ಶುಚಿತ್ವವನ್ನು ನಿರ್ವಹಣೆ ಮಾಡುವುದು ಕೂಡ ಸವಾಲೇ. ಇದರ ಹೊರತಾಗಿ ಮಾನ್ಸೂನ್​ನಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್​​ ಬೆಳೆಯುವ ಪ್ರಮಾಣ ಜಾಸ್ತಿಯಾಗಿದ್ದು, ಸೋಂಕು ತಗಲುತ್ತದೆ.

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *