Breaking News

ಕರ್ನಾಟಕ

ರಾಜ್ಯ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಯ ಬಳಿಕ ಅಸಮಾಧಾನ…

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ಸರ್ಕಾರ ರಚನೆಯ ಬಳಿಕ ಅಸಮಾಧಾನ ಭುಗಿಲೆದಿದ್ದು, ಪಕ್ಷದಲ್ಲಿನ ಅಸಮಾಧಾನವನ್ನ ಶಮನಗೊಳಿಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮುಂದಾಗಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 10ರಿಂದ 10.30ರವರೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯ ನೀಡುತ್ತೇನೆ. ತಮ್ಮ ಕ್ಷೇತ್ರದಲ್ಲಿನ ಕೆಲಸ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು. ಹೊರಗಡೆ ಹೋಗುವ ದಿನ ಹೊರತಾಗಿ ಬೆಂಗಳೂರಿನಲ್ಲಿರುವ ಎಲ್ಲಾ ದಿನ ಸಮಯಾವಕಾಶ ನೀಡಲಾಗುವುದು …

Read More »

ಭಾರತೀಯ ಜನತಾ ಪಕ್ಷವು 12 ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ….

ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಒಂದೊಂದೇ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿವೆ. ಈ ಪೈಕಿ ಬಿಜೆಪಿ ಅಂತಿಮಗೊಂಡ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿತು. ಆದರೆ ಪಟ್ಟಿಯಲ್ಲಿ ಪಕ್ಷದ ಹಿರಿಯ ನಾಯಕಿ, ಮಾಜಿ ಸಂಸದೆಯ ಹೆಸರನ್ನು ಕೈ ಬಿಡಲಾಗಿದೆ. ಇದು ಮುಂದಿನ ರಾಜಕೀಯ ಬೆಳವಣಿಗೆಗಳತ್ತ ಕೌತುಕ ಮೂಡಿಸಿದೆ. ಇದೇ ನವೆಂಬರ್ 30 ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಭಾರತೀಯ ಜನತಾ ಪಕ್ಷವು 12 ಅಭ್ಯರ್ಥಿಗಳ ನಾಲ್ಕನೇ …

Read More »

ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜಯರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆ…..

ಅಣ್ಣಿಗೇರಿ: ನವಲಗುಂದ ವಿಧಾನಸಭಾ ಮತಕ್ಷೇತ್ರದ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಪರಪ್ಪ ಮುಷಪ್ಪ ರೂಗಿ, ನ್ಯೂ ಸೆಕೆಂಡರಿ ಸ್ಕೂಲ್ ವಿದ್ಯಾರ್ಥಿನಿ ಕುಮಾರಿ ಸಂಜನಾ ನಾಗರಹಳ್ಳಿ ಅವರು ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ತಂಡದಲ್ಲಿ ಸ್ಥಾನವನ್ನು ಪಡೆದಿದ್ದು ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜಯರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇವರಿಗೆ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಶಾಸಕ ಕೋನರಡ್ಡಿ ಅವರು ಶುಭಾಶಯ ಕೋರಿದರು.

Read More »

ಕಾಂಗ್ರೆಸ್ ಮನೆಯೊಂದು ನಾಲ್ಕು ಬಾಗಿಲು ಆಗಿದೆ ಎಂದು ಶಾಸಕ ಮಹೇಶ ತೆಂಗಿನಕಾಯಿ…

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಬಣದ ರಾಜಕಾರಣ ಆರಂಭವಾಗಿದೆ. ಇದೀಗ ಕಾಂಗ್ರೆಸ್ ಮನೆಯೊಂದು ನಾಲ್ಕು ಬಾಗಿಲು ಆಗಿದೆ ಎಂದು ಶಾಸಕ ಮಹೇಶ ತೆಂಗಿನಕಾಯಿ ಕಿಡಿಕಾರಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಯಾವುದೇ ರೀತಿಯ ಆಪರೇಷನ್ ಕಮಲ ಮಾಡಿಲ್ಲ. ಜನರು ಬಿಜೆಪಿಗೆ ವಿಪಕ್ಷ ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ ರಚನಾತ್ಮಕ ಹೋರಾಟ ಮಾಡತ್ತೇವೆ. ಕಾಂಗ್ರೆಸ್’ನವರು ಆಪರೇಷನ್ ಹಸ್ತದಲ್ಲಿ ಹಸ್ತ ಮಾಡಿಕೊಳ್ಳುವ ಕೆಲಸವನ್ನು ಅವರೇ ಮಾಡಿಕೊಂಡಿದ್ದಾರೆ ಎಂದರು. ಸದ್ಯ ಕಾಂಗ್ರೆಸ್ ಮನೆಯೊಂದು ನಾಲ್ಕು ಬಾಗಿಲು …

Read More »

ಕೆಲಸ ಮಾಡದೆ ಕೇಂದ್ರ ಸರ್ಕಾರದ ಬಗ್ಗೆ ಬೆರಳು ತೋರಿಸಿದ್ರು…

ಚಿತ್ರದುರ್ಗ, ನವೆಂಬರ್‌ 07: ಕೆಲಸ ಮಾಡದೇ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡುವ ಕಾಂಗ್ರೆಸ್ ಸರ್ಕಾರದ ಕೆಲಸ ಬೇಜವಾಬ್ದಾರಿತನದ ಪರಮಾವಧಿ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ವಿಶ್ವೇಶ್ವರ ಹೆಗ್ಗಡೆ ಕಾಗೇರಿ ಅವರ ನೇತೃತ್ವದ ಬರ ಅಧ್ಯಯನ ತಂಡ ಆಗಮಿಸಿದ್ದು, ಜಿಲ್ಲೆಯ ಕೊಳಾಳ್ ಗ್ರಾಮದಿಂದ ಬರ ಅಧ್ಯಯನ ಪ್ರಾರಂಭಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರದಿಂದ ಬರ ಪರಿಹಾರಕ್ಕೆ ಪರಿಹಾರ ನೀಡಲಿ …

Read More »

ಲಂಚಕೋರತನವನ್ನು ಸಹಿಸುವುದಿಲ್ಲ‌: ಸಂತೋಷ್ ಲಾಡ್.

ಕಲಬುರಗಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಲಬುರ್ಗಿಯ ಕೆಲ ಲಂಚಬಾಕ ಅಧಿಕಾರಿಗಳನ್ನು ಅಮಾನತು ಮಾಡಿ ಲಂಚಕೋರತನವನ್ನು ಸಹಿಸುವುದಿಲ್ಲ‌ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಸದ್ಯ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸದಲ್ಲಿರುವ ಕಾರ್ಮಿಕ ಸಚಿವರು ಹಲವು ದಿನಗಳಿಂದ ತಮ್ಮ ಲಂಚಬಾಕತನದಿಂದ ಕಾರ್ಮಿಕರ ಜೀವ ಹಿಂಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಫಲಾನುಭವಿಗೆ ಮಂಜೂರಾದ 9 ಸಾವಿರ ಸಹಾಯಧನ ಬದಲಿಗೆ 90 ಸಾವಿರ ಹಣ ಮಂಜೂರು ಮಾಡಿದ ಆಪಾದನೆಯಲ್ಲಿ ರಮೇಶ್ ಸುಂಬಡ …

Read More »

ನವೆಂಬರ್ ಮಹಾಕ್ರಾಂತಿ ವರ್ಷಾಚರಣೆ….

ಧಾರವಾಡ: ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ, ಪ್ರಪಂಚದಲ್ಲೇ ಮೊದಲ ಬಾರಿಗೆ ಕಾರ್ಮಿಕ ವರ್ಗದ ಅಧಿಕಾರ ಸ್ಥಾಪನೆಗೆ ಕಾರಣವಾದ 1917ರಲ್ಲಿ ರಷ್ಯಾದಲ್ಲಿ ಜರುಗಿದ ನವೆಂಬರ್ ಮಹಾಕ್ರಾಂತಿಯ 106 ನೇ ವರ್ಷಾಚರಣೆ ಕಾರ್ಯಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್.ಯು.ಸಿ.ಐ-ಸಿ) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನವೆಂಬರ್ ಮಹಾಕ್ರಾಂತಿಯ ಶಿಲ್ಪಿಗಳಾದ ಕ ಲೆನಿನ್, ಸ್ಟಾಲಿನ್ ರವರ ಭಾವಚಿತ್ರಕ್ಕೆ ಜಿಲ್ಲಾ ಸಮಿತಿಯ ಹಿರಿಯ ಸದಸ್ಯರಾದ …

Read More »

ಕೆ ಇ ಎ ಪರೀಕ್ಷೆಗೆ ಮಂತ್ರಿಗಳೇ ಸಹಾಯ….

ಕಲಬುರಗಿ: ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಎಸ್ಕೇಪ್ ಪ್ರಕರಣಕ್ಕೆ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಿ ವೈ ವಿಜಯೇಂದ್ರ ಅವರು, ಬಿಜೆಪಿ ಸರ್ಕಾರ ಇದ್ದಾಗ ಪಿಎಸ್‌ಐ ಪರೀಕ್ಷೆ ಅಕ್ರಮದ ಬಗ್ಗೆ ಕಾಂಗ್ರೆಸ್ ಸತತವಾಗಿ ಆರೋಪ ಮಾಡಿತ್ತು. ಈಗ ಪ್ರಕರಣದ ಆರೋಪಿ ಆರ್‌ಡಿ ಪಾಟೀಲ್‌ಗೆ ಕಾಂಗ್ರೆಸ್ ಶಾಸಕರು, ಮಂತ್ರಿಗಳೇ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.ಇನ್ನು ಎಲ್ಲಾ ಗೊತ್ತಿದ್ದರೂ ಪೋಲೀಸರಿಗೆ ಯಾಕೆ ಹಿಡಿಯಲು ಆಗುತ್ತಿಲ್ಲ ಎಂದು ಕಲಬುರಗಿಯಲ್ಲಿ …

Read More »

ಹಿಂದೂ ದ್ವೇಷದ ಸರ್ಕಾರ ಕಾಂಗ್ರೆಸ್: ಪ್ರಮೋದ್ ಮುತಾಲೀಕ್.

ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂ ದ್ವೇಷ ಸರ್ಕಾರವಾಗಿದೆ, ಹಿಂದೂ ಕಾರ್ಯಕರ್ತರ ಜೈಲಿಗಟ್ಟೋದನ್ನೇ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಹುಲಿ ಉಗುರು ವಿಚಾರದಲ್ಲಿ ನೋಟೀಸ್ ಇಲ್ಲದೆ ಅರ್ಚಕರನ್ನು ಬಂಧಿಸಿದ್ದರು. ಆದರೆ ಶಾಖಾದ್ರಿ ಮನೆಯಲ್ಲಿ ಚಿರತೆ ಚರ್ಮ ಸಿಕ್ಕಿದೆ, ಆದರೂ ಇನ್ನೂ ಬಂಧನ ಮಾಡಿಲ್ಲ. ಶಾಖಾದ್ರಿಗಾದ್ರೆ ನೋಟೀಸ್ ಕೊಡ್ತೀರಾ ನೀವು, ನಾಟಕ ಮಾಡ್ತೀರಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು. …

Read More »
Featured Video Play Icon

ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇನ್ಸ್ಪೆಕ್ಟರ್ , ಎಎಸ್ಐ ವಿರುದ್ಧ ಎಫ್ಐಆರ್

ಇನ್ಸ್ಪೆಕ್ಟರ್ ವಿರುದ್ಧ ಎಫ್ ಐ ಆರ್…. ಹುಬ್ಬಳ್ಳಿ; ವಾಣಿಜ್ಯನಗರಿ ಹುಬ್ಬಳ್ಳಿಯ ಕೊಟ್ಟಿಲಿಂಗೇಶ್ವರ ನಗರದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಾಧ್ಯಮದ ವರದಿ ಬೆನ್ನಲ್ಲೇ ಕೇಶ್ವಾಪೂರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಯು.ಎಚ್. ಸಾತೇನಹಳ್ಳಿ ಹಾಗೂ ಎಎಸ್ಐ ಜಯಶ್ರೀ ಛಲವಾದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕೋಟಿಲಿಂಗೇಶ್ವರ ನಗರದ ನಿವಾಸಿ ನಿಖಿಲ್‌ ಕುಂದಗೋಳ(27) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕೇಶ್ವಾಪುರ ಠಾಣೆಯ ಇನ್’ಸ್ಪೆಕ್ಟರ್, ಎಎಸ್ಐ ಸೇರಿ ಎಂಟು ಮಂದಿ ವಿರುದ್ಧ …

Read More »