Breaking News

ಲಂಚಕೋರತನವನ್ನು ಸಹಿಸುವುದಿಲ್ಲ‌: ಸಂತೋಷ್ ಲಾಡ್.

ಕಲಬುರಗಿ: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಲಬುರ್ಗಿಯ ಕೆಲ ಲಂಚಬಾಕ ಅಧಿಕಾರಿಗಳನ್ನು ಅಮಾನತು ಮಾಡಿ ಲಂಚಕೋರತನವನ್ನು ಸಹಿಸುವುದಿಲ್ಲ‌ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಸದ್ಯ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳ ಪ್ರವಾಸದಲ್ಲಿರುವ ಕಾರ್ಮಿಕ ಸಚಿವರು ಹಲವು ದಿನಗಳಿಂದ ತಮ್ಮ ಲಂಚಬಾಕತನದಿಂದ ಕಾರ್ಮಿಕರ ಜೀವ ಹಿಂಡುತ್ತಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಫಲಾನುಭವಿಗೆ ಮಂಜೂರಾದ 9 ಸಾವಿರ ಸಹಾಯಧನ ಬದಲಿಗೆ 90 ಸಾವಿರ ಹಣ ಮಂಜೂರು ಮಾಡಿದ ಆಪಾದನೆಯಲ್ಲಿ ರಮೇಶ್ ಸುಂಬಡ ಎಂಬ ಕಾರ್ಮಿಕ ಅಧಿಕಾರಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲು ಸಚಿವರು ಆದೇಶಿಸಿದ್ದಾರೆ. ಅಲ್ಲದೇ ಈತ ಅವಧಿ ಮೀರಿ ಸಲ್ಲಿಕೆಯಾದ ಮದುವೆ ಸಹಾಯಧನ ಅರ್ಜಿಗಳನ್ನು ಮಂಜೂರು ಮಾಡುತ್ತಿದ್ದದ್ದು ಸಹ ಪತ್ತೆಯಾಗಿದೆ. ಈತ ತನ್ನ ಸಂಬಂಧಿಯ ಸಿ ಎಸ್ ಸಿ ಸೆಂಟರ್ ಗಳಿಂದ ಸ್ವೀಕೃತವಾಗುವ ಅರ್ಜಿಗಳ ಜೇಷ್ಠತೆ ಪರಿಗಣಿಸದೇ ಅಪರಾಧ ಎಸಗುತ್ತಿದ್ದದ್ದು ಬೆಳಕಿಗೆ ಬಂದಿದೆ.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *