Breaking News

ಕರ್ನಾಟಕ

ಮತ್ತೆ ಪೋಡಿ ಯೋಜನೆ ಆರಂಭಿಸಿದ ಸರ್ಕಾರಕ್ಕೆ ಅಭಿನಂದನೆ : ಎಮ್.ಆರ್.ಪಾಟೀಲ್

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ನಗರ ಪ್ರದೇಶದ ಕ್ಷೇತ್ರ ಹೊರತುಪಡಿಸಿ ಉಳಿದ 174 ವಿಧಾನಸಭಾ ಕ್ಷೇತ್ರಗಳಲ್ಲಿ ಪೋಡಿ ಯೋಜನೆಯನ್ನು ಈ ಹಿಂದೆ ಬಿಜೆಪಿ ಸರ್ಕಾರ ಪ್ರಾರಂಭಿಸಲಾಗಿತ್ತು. ಆದರೆ ಸದ್ಯ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಜೂನ್ 30 ರಂದು ನಿಲ್ಲಿಸಿದರು. ಇದರಿಂದಾಗಿ ಕುಂದಗೋಳ ಕ್ಷೇತ್ರ ಸೇರಿದಂತೆ ರಾಜ್ಯದ ಬಹುತೇಕ ಜನರಿಗೆ ತೊಂದರೆ ಉಂಟಾಗಿತ್ತು. ಈ ಬಗ್ಗೆ ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಶಾಸಕನಾದ ನಾನು …

Read More »

ಉತ್ತರ ಕನ್ನಡದಲ್ಲಿ ಸರ್ಕಾರಿ ಶಾಲೆಗಳು ಅವನತಿಯತ್ತ.

ಕಾರವಾರ (ಉತ್ತರ ಕನ್ನಡ) : ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಸರ್ಕಾರ ನಾನಾ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಆದರೂ ಸರ್ಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಗಡಿ ಜಿಲ್ಲೆ ಉತ್ತರ ಕನ್ನಡದಲ್ಲಿ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಿದ್ದು, ಕಳೆದ 6 ವರ್ಷಗಳಲ್ಲಿ ಬರೋಬ್ಬರಿ 13 ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳೇ ಇಲ್ಲದೇ ಬಾಗಿಲು ಮುಚ್ಚಿವೆ.ಹೌದು, ಕಾರವಾರ ಕರ್ನಾಟಕದ ಗಡಿ ಪ್ರದೇಶವಾಗಿದ್ದು, ಗೋವಾ ಗಡಿಯಲ್ಲಿ …

Read More »

ನಿವೃತ್ತಿ ಹೊಂದಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಲ್ ಜೀವಣ್ಣವರ ಅವರಿಗೆ ಸನ್ಮಾನ.

ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಿವೃತ್ತಿ ಹೊಂದಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಲ್ ಜೀವಣ್ಣವರ ಅವರಿಗೆ ಶಾಲ ಹೊದಿಸಿ ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್ ಎಲ್ ಜಿವಣ್ಣವರ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಲ್ಲರೂ ನನ್ನ ಮೇಲೆ ಪ್ರೀತಿ ವಿಶ್ವಾಸದಿಂದ ನೋಡಿಕೊಂಡಿದ್ದಾರೆ ಅವರನ್ನು ಎಂದಿಗೂ ನಾನು ಮರೆಯುವುದಿಲ್ಲ ಎಂದು ಹೇಳಿದ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ …

Read More »

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೆಟ್ಟ ಹುಳುಗಳು ಹೊರ ಬರುತ್ತಿವೆ: ಪ್ರಮೋದ್ ಮುತಾಲಿಕ್

ಧಾರವಾಡ: ಬೆಂಗಳೂರಿನ ಸುಲ್ತಾನ್‌ಪಾಳ್ಯ ಎಂಬ ಪ್ರದೇಶದಲ್ಲಿ ಸಿಸಿಬಿ ಪೊಲೀಸರು ಇಂದು ಐದು ಜನ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಉಗ್ರ ಸಂಘಟನೆಗಳು ಗರಿಗೆದರಿವೆ ಎಂದಿದ್ದಾರೆ. ಬೆಂಗಳೂರಲ್ಲಿ ಸಿಕ್ಕ ಶಂಕಿತ ಉಗ್ರರ ಬಳಿ ಪಿಸ್ತೂಲ್, ಸಜೀವ ಗುಂಡು, ಸ್ಯಾಟೈಟ್ ಫೋನ್ ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ. ಸುಲ್ತಾನ್‌ಪಾಳ್ಯ ಎಂಬ ಪ್ರದೇಶದ ಒಂದು ಮನೆಯಲ್ಲಿ …

Read More »

ವಿದ್ಯಾವರ್ಧಕ ಸಂಘದ 134 ನೇ ಸಂಸ್ಥಾಪನಾ ದಿನಾಚರಣೆ

ಧಾರವಾಡ : ಕರ್ನಾಟಕ ವಿದ್ಯಾವರ್ಧಕ ಸಂಘದ 134 ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜುಲೈ 20 ರಿಂದ 24 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ತಿಳಿಸಿದರು. ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕನ್ನಡಿಗರ ಹಿರಿಮೆ ಹೆಚ್ಚಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಧಾರವಾಡ 134 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ …

Read More »

ಅಯೋಧ್ಯೆ ರಾಮಮಂದಿರದ ಯಾಗ ಕಾರ್ಯಕ್ರಮದಲ್ಲಿ ಧಾರವಾಡದ ವಿದ್ವಾಂಸ ಭಾಗಿ

ಧಾರವಾಡ: ಅಯೋಧ್ಯೆಯ ರಾಮಮಂದಿರ ಪ್ರದೇಶದಲ್ಲಿ ಜು.21 ರಿಂದ 28ರವರೆಗೆ ವಿಶ್ವ ಪರಿಷತ್ ವತಿಯಿಂದ ಚತುರ್ವೇದ ಸಂಹಿತಾ ಯಾಗ, ಶ್ರೀಮದ್ ಭಾಗವತ ಹಾಗೂ ವಾಲ್ಮೀಕಿ ರಾಮಾಯಣದ ಪಾರಾಯಣ ಹಾಗೂ ಯಾಗ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧಾರವಾಡದ ವೈದಿಕ ವಿದ್ವಾಂಸ ಗಿರೀಶ ಶೆಲ್ಲಿಕೇರಿ ಪಾಲ್ಗೊಳ್ಳಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ ವಿವಿಧೆಡೆಯಿಂದ 40 ವೈದಿಕ ವಿದ್ವಾಂಸರು ತೆರಳಲಿದ್ದಾರೆ. ಶುಕ್ಲ ಯಜುರ್ವೇದದ 3,000 ಶ್ಲೋಕ ಸೇರಿ 1.30 ಲಕ್ಷ ಶ್ಲೋಕಗಳ ಮೂಲಕ ಆಹುತಿ ನೀಡಲಾಗುವುದು. ವಿದ್ವಾಂಸ ಗಿರೀಶ ಅವರು …

Read More »

ರಾಷ್ಟ್ರೀಯ ವಿಪಕ್ಷಗಳ ಎರಡನೇ ‌ಮಹಾಘಟಬಂಧನ ಸಭೆ.

ಬೆಂಗಳೂರು : ಕಾಂಗ್ರೆಸ್ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಷ್ಟ್ರೀಯ ವಿಪಕ್ಷಗಳ ಎರಡನೇ ‌ಮಹಾಘಟಬಂಧನ ಸಭೆ ನಡೆಯುತ್ತಿದೆ. 25 ಪಕ್ಷಗಳ 46ಕ್ಕೂ ಅಧಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಮಹಾಮೈತ್ರಿ ಸಭೆ ಆರಂಭವಾಗಿದೆ. ಆರು ಪ್ರಮುಖ ಅಂಶಗಳ ಮೇಲೆ ಸಭೆಯಲ್ಲಿ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಂಬಂಧ ಕಾರ್ಯತಂತ್ರ ರೂಪಿಸಲು ಸಭೆ ಮಹತ್ವದ್ದಾಗಿದೆ.ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, …

Read More »

ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ.

ಮೈಸೂರು :ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೆ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಪಿರಿಯಾಪಟ್ಟಣ ಬಳಿಯ ಕಂಪಲಾಪುರ ಗ್ರಾಮದ ಬಳಿ ಇಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೌದೆ ತುಂಬಿಕೊಂಡು ನಿಂತಿದ್ದ ಟ್ರಾಕ್ಟರ್​ಗೆ ಕಂಪಲಾಪುರ ಬಳಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮುದಾಸಿರ್, ಮುಜಾಹಿದ್ ಹಾಗೂ ಅಹ್ಮದ್ ಪಾಷಾ …

Read More »

ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ.

ಬೆಂಗಳೂರು:ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದು, ಮೃತದೇಹವನ್ನು ಇಂದಿರಾ ನಗರದಲ್ಲಿರುವ ಅವರ ಸ್ನೇಹಿತ ಹಾಗು ಕೇರಳ ಕಾಂಗ್ರೆಸ್‌ ಮುಖಂಡರಾಗಿದ್ದ ದಿವಂಗತ ಟಿ.ಜಾನ್ ಮನೆಗೆ ಕೊಂಡೊಯ್ಯಲಾಗಿದೆ. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಕ್ಷದ ಹಿರಿಯ ನಾಯಕನ ಮೃತದೇಹವನ್ನು ಹುಟ್ಟೂರಿಗೆ ರವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆ 11 ಗಂಟೆಯ ನಂತರ ಹೆಚ್ಎಎಲ್ ಏರ್​ಪೋರ್ಟ್‌ನಿಂದ ತಿರುವನಂತಪುರಂಗೆ ಮೃತದೇಹ ರವಾನೆಯಾಗಲಿದೆ.ಇಂದಿರಾನಗರದ …

Read More »

ಮಟ್ಕಾ ದಂಧಗೆ ಮಟ್ಟ ಹಾಕಲು ಪೊಲೀಸ್ ಕಮೀಷನರೇಟ್: ಮಂತ್ಲಿ ತಿಂದವನ ವಿಚಾರಣೆ…? ಯಾವಾಗ ಸರ್ …?

ಕಮೀಷನರ್ ಸರ್ ಯಾವಾಗ ಸಿಬ್ಬಂದಿಯ ವಿಚಾರಣೆ…? ಹುಬ್ಬಳ್ಳಿ: ಮಟ್ಕಾ ದಂದೆಯಲ್ಲಿ ಬಿಗ್ ಟಿವಿ ನ್ಯೂಸ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ಇಬ್ಬರನ್ನು ಪೊಲೀಸರು ಕಾಟಾಚಾರಕ್ಕೆ ಬಂಧಿಸಿದ್ದಾರೆ. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡು 5700 ವಶಕ್ಕೆ ಪಡೆದುಕೊಂಡಿದ್ದಾರೆ.ಆದರೆ ಇದರ ಮೂಲ ಒಬ್ಬ ಮಾಲಿಕನನ್ನು ಪೊಲೀಸರು ಇನ್ನೂ ವಶಕ್ಕೆ ಪಡೆಯದೆ ತನಿಖೆ ಕೊಡ ಮಾಡಿಲ್ಲ. ಯಾಕಿಷ್ಟು ನಿರ್ಲಕ್ಷ್ಯ..? ಇದು ಸಾರ್ವಜನಿಕರಲ್ಲಿ ಅಸಮಾಧಾನ ಹುಟ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಮೂಲು ತಿಂದ ಆ ಪೊಲೀಸಪ್ಪನನ್ನು ಕೂಡಾ …

Read More »