Breaking News

ಕರ್ನಾಟಕ

ರಾಜ್ಯದಲ್ಲಿ 48,049 ಕೊರೋನಾ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ನಿನ್ನೆಯೇ ಕೊರೋನಾ ಸೋಂಕಿನ  ಪ್ರಕರಣಗಳ ಸಂಖ್ಯೆ ಅರ್ಧ ಲಕ್ಷ ಸಮೀಪಿಸಿತ್ತು. ಈಗ ಆ ಸಂಖ್ಯೆ ಮತ್ತೆ ಮುಂದುವರೆದಿದೆ. ಇಂದು ಹೊಸದಾಗಿ 48,049 ಮಂದಿಗೆ ಕೊರೋನಾ ಪಾಸಿಟಿವ್  ಎಂಬುದಾಗಿ ದೃಢಪಟ್ಟಿದೆ.ಅಲ್ಲದೇ ಸೋಂಕಿನಿಂದಾಗಿ 22 ಮಂದಿ ಸಾವನ್ನಪ್ಪಿದ್ದಾರೆ.

Read More »

ಕಂಟೇನರ್ ವಾಹನಕ್ಕೆ‌ ಆಕಸ್ಮಿಕ್ ಬೆಂಕಿ : ಸುಟ್ಟ ಬಸ್ಮವಾದ ಕೊರಿಯರ್

ಧಾರವಾಡ: ಕೊರಿಯರ್ ಸಾಗಿಸುವ ಕಂಟೆನರ್ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿರುವ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗಷ್ಟೇ ನಡೆದಿದೆ. ಬೆಳಗಾವಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಕಂಟೇನರ್ ಲಾರಿ ಹುಬ್ಬಳ್ಳಿಯ ಕಡೆಗೆ ತೆರಳುತಿತ್ತು. ಆದರೆ ಲಾರಿಯ ಹಿಂಬದಿಯ ಕಂಟೆನರ್ ಬಾಕ್ಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಸುಡುತ್ತಿರುವ ವಾಸನೆ ಗಮನಿಸಿದ ಲಾರಿಯ ಚಾಲಕ ಯರಿಕೊಪ್ಪದ ರಮ್ಯಾ ರೆಸಿಡೆನ್ಸಿ ಬಳಿಯಲ್ಲಿ ಲಾರಿಯ ನಿಲ್ಲಿಸಿ, …

Read More »

ಭ್ರಷ್ಟ ಪೊಲೀಸ್ ರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕಮಲ್ ಪಂಥ್

ಬೆಂಗಳೂರು: ನಗರದಲ್ಲಿ ಇತ್ತಿಚೆಗೆ ಪೊಲೀಸರ ಮೇಲೆ ಭ್ರಷ್ಟ ಆರೋಪಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿ ಖುದ್ದು ಕಮಿಷನರ್ ಕಮಲ್ ಪಂಥ್ ರಿಯಾಕ್ಟ್ ಮಾಡಿದ್ದಾರೆ. ಪೊಲೀರ ಮೇಲೆ ಹದ್ದಿನ ಕಣ್ಣೀಡಲು ಡಿಸಿಪಿಗಳಿಗೆ ಪಂಥ್ ಸೂಚನೆ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದು, ಭ್ರಷ್ಟಾಚಾರದಲ್ಲಿ ತೊಡಗುವ ಯಾವೂದೇ ಅಧಿಕಾರಿ ಆದ್ರೂ ಬಿಡಲ್ಲ, ಅವ್ರ ಮೇಲೆ ಮುಲಾಜಿಲ್ಲದೆ ಕ್ರಮ ಕೈ ಗೊಳ್ಳುತ್ತೆ ಎಂದು ವಾರ್ನ್ ಮಾಡಿದ್ದಾರೆ.

Read More »

ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ರದ್ದು

ಬೆಂಗಳೂರು: ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ್ರೇ ಮತ್ತ ವೀಕೆಂಡ್ ಕರ್ಪ್ಯೂವನ್ನು ಮುಂದುವರೆಸಲಾಗುತ್ತದೆ. ಇದೀಗರಾಜ್ಯದಲ್ಲಿ ಜಾರಿಗೊಳಿಸಿದ್ದಂತ ವೀಕೆಂಡ್ ಕರ್ಪ್ಯೂವನ್ನು  ರದ್ಧುಗೊಳಿಸಲಾಗುತ್ತಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ್ರೇ ಮತ್ತೆ ಮುಂದುವರೆಸಲಾಗುತ್ತದೆ. ಆಸ್ಪತ್ರೆಗೆ ಸೇರುವವರ ಸಂಖ್ಯೆಯ ಆಧಾರದ ಮೇಲೆ ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು. ಸಿಎಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ …

Read More »

ಡಾ.ಶಿವಕುಮಾರ ಸ್ವಾಮೀಜಿ 3ನೇ ಪುಣ್ಯ ಸ್ಮರಣೆ : ಐಜಿಪಿಗೆ ಗುಡುಗಿದ ಸಿಎಂ

ತುಮಕೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ ದಾಸೋಹ ದಿನಾಚರಣೆಗೆ ಚಾಲನೆ ನೀಡಿದರು.ಈ ವೇಳೆ ಜನ ಗುಂಪು ಸೇರಿದ್ದಕ್ಕೆ ಐಜಿಪಿ ಮೇಲೆ ಸಿಎಂ ಗದರಿದ ಪ್ರಸಂಗ ನಡೆದಿದೆ. ಐಜಿಪಿ ಬಳಿ ಸೀನಿಯರ್ ಆಫೀಸರ್ ಆಗಿದ್ದೀಯಾ ಅಷ್ಟು ಗೊತ್ತಾಗೊಲ್ವಾ ನಿನಗೆ ಜನ ದೂರ ನಿಲ್ಲುವಂತೆ ಹೇಳು ಎಂದು ಏರುದ್ವನಿಯಲ್ಲಿ ಗುಡುಗಿದ್ದಾರೆ.ತ್ರಿವಿದ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಮೂರನೇ ಪುಣ್ಯ ಸ್ಮರಣೆ ಆಗಮಿಸಿದ್ದ ಹಿನ್ನೆಲೆಯಲ್ಲಿ  ಈ ಘಟನೆ ಸಂಭವಿಸಿದೆ.

Read More »

ರಾತ್ರೋರಾತ್ರಿ ಪ್ರತಿಭಟನೆಗಿಳಿದ ರೈತರು: ಬೇಗನೆ ಹೋಟೆಲ್ ಬಂದ್ ಮಾಡಿಸಿದ್ದಕ್ಕೆ ಉಟಕ್ಕಾಗಿ ಪರದಾಡಿದ ಅನ್ನದಾತನ….!

ಹುಬ್ಬಳ್ಳಿ: ಪೊಲೀಸರು ಬೇಗನೆ ಹೊಟೇಲುಗಳನ್ನು ಬಂದ್ ಮಾಡಿಸಿದ್ದರಿಂದ ಊಟ ಸಿಕ್ಕಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ರೈತರು ಇಲ್ಲಿನ ಎಪಿಎಂಸಿ ಎದುರು ಹು-ಧಾ ಮುಖ್ಯ ರಸ್ತೆ ಹಾಗೂ ಬಿಆರ್ ಟಿಎಸ್ ರಸ್ತೆ ಬಂದ್ ಮಾಡಿ ರಾತ್ರಿ ಪ್ರತಿಭಟಿಸಿದರು. ಮೆಣಸಿನಕಾಯಿ ಮಾರಾಟಕ್ಕೆ ಧಾರವಾಡ ಸೇರಿದಂತೆ ಗದಗ, ಬಾಗಲಕೋಟೆ ಜಿಲ್ಲೆ ಹಾಗೂ ಬೇರೆ ಬೇರೆ ಊರುಗಳಿಂದ ರೈತರು ಬಂದಿದ್ದರು. ಮೆಣಸಿನಕಾಯಿ ತೂಕ ಆಗಿಲ್ಲ. ಪೊಲೀಸರು ಬೇಗನೇ ಎಲ್ಲ ಹೋಟೆಲ್ ಗಳನ್ನು ಬಂದ್ ಮಾಡಿಸಿದ್ದಾರೆ. ಹೀಗಾಗಿ …

Read More »

ಮೆಡಿಕಲ್ ಕಾಲೇಜಿನ 63 ವಿದ್ಯಾರ್ಥಿಗಳಿಗೆ ಕೊರೊನಾ ದೃಢ

ಚಾಮರಾಜನಗರ : ಜಿಲ್ಲೆಯ ಮೆಡಿಕಲ್ ಕಾಲೇಜಿನ 63 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಯಡಿಪುರ ಬಳಿಯಿರುವ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 63 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಮೆಡಿಕಲ್ ಕಾಲೇಜಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ.

Read More »

ರೈತರಿಗೆ ಸಿಹಿ ಸುದ್ದಿ

ಬೆಂಗಳೂರು : ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ ಯೋಜನೆಗೆ ಶೇ.15 ರಷ್ಟು ಸಹಾಯಧನ ಹೆಚ್ಚಿಸಿದೆ. ಈ ಮೂಲಕ ಪಿಎಂಎಫ್‌ಎಂಇ ಯೋಜನೆಯ ಸಹಾಯಧನ ಶೇ.50 ರಷ್ಟಾಗಿದೆ. ಇನ್ನು ಈ ಯೋಜನೆ ರೈತರ ಆದಾಯ ದ್ವಿಗುಣಗೊಳಿಸಲಿದೆ’ ಎಂದರು.

Read More »

ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ನೂತನ ಆಯುಕ್ತರ ಭೇಟಿ

ಹುಬ್ಬಳ್ಳಿ : ಅವಳಿ ನಗರದ ಬೀದಿಬದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಗೋಪಾಲಕೃಷ್ಣ ಬಿ. ಅವರನ್ನು ಭೇಟಿ ಮಾಡಿ ಶುಭಕೋರಲಾಯಿತು. ಬೆಂಗೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾದ ಮಾರುಕಟ್ಟೆ ಪ್ರಾರಂಭಿಸಲು, ಬೀದಿಬದಿ ವ್ಯಾಪಾರಿಗಳ ಸರ್ವೆ ನೋಂದಣಿ ಮಾಡುವುದು ಸೇರಿದಂತೆ ಬೇಡಿಕೆಗಳ ಮನವಿಯನ್ನು ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಅಮೃತ ಇಜಾರಿ, ಅಧ್ಯಕ್ಷರಾದ ಹುಲಿಗೆಮ್ಮ ಚಲವಾದಿ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಟೌನ್ ವೆಂಡರ್ ಕಮಿಟಿ …

Read More »

ಪಾಲಕರಿಂದ ಪ್ರಾಂಶುಪಾಲರಿಗೆ ಮನವಿ ಸಲ್ಲಿಕೆ

ಚಾಮರಾಜನಗರ : ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳಲ್ಲಿ ಕೋವಿಡ್‌ ಸೋಂಕು ಕಂಡು ಬರುತ್ತಿದೆ. ಅಲ್ಲದೇ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆಯ ಕೆಲ ಮಕ್ಕಳಿಗೆ ಕೋವಿಡ್‌ ಸೋಂಕು ದೃಢಪಟ್ಟ ಕಾರಣ ಶಾಲೆಗೆ ರಜೆ ಘೋಷಿಸಿ, ಆನ್‌ಲೈನ್‌ ತರಗತಿ ನಡೆಸಬೇಕೆಂದು ಒತ್ತಾಯಿಸಿ ಪೋಷಕರು ಶಾಲೆಯ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು. ಎಷ್ಟೇ ತಿಳಿ ಹೇಳಿದರೂ ಮಕ್ಕಳಿಗೆ ಭೌತಿಕ ಅಂತರ ಕಾಪಾಡಬೇಕೆಂಬ ಪರಿವೆ ಇರುವುದಿಲ್ಲ. ಆಟಕ್ಕೆ ಬಿಟ್ಟಾಗ ಜೊತೆಯಾಗುತ್ತಾರೆ. ಇದರಿಂದ ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಸೋಂಕು …

Read More »