Breaking News

ಹಾವೇರಿ

ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿತ…

ಹಾವೇರಿ: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯುತ್ ಕಂಬಕ್ಕೆ ಕಟ್ಟಿ ವ್ಯಕ್ತಿಯ ಥಳಿಸಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮೂಕಬಸರಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನ ರಾಮಪ್ಪ ಹರಿಜನ ಎಂದು ಗುರುತಿಸಲಾಗಿದೆ. ಡಿಶ್ ಟಿವಿ ಕೇಬಲ್ ಕತ್ತರಿಸಿದ ಆರೋಪದ ಹಿನ್ನೆಲೆ ವ್ಯಕ್ತಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಏರಿಯಾದಲ್ಲಿ ಕೆಇಬಿ ಸಿಬ್ಬಂದಿ ಮರದ ಟೊಂಗೆಗಳನ್ನ ಕತ್ತರಿಸಿ ಹೋಗಿದ್ದಾರೆ. ಅದರ ಜೊತೆಗೆ ಕೇಬಲ್ ಟಿವಿ ವೈಯರ್ ಕತ್ತರಿಸಿ …

Read More »

ವರ್ಷದ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ….

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಗಣೇಶ ಚತುರ್ಥಿ, ದೀಪಾವಳಿ ಹಬ್ಬ ಬಂದರೆ ಸಾಕು ಸಂಭ್ರಮ ಮನೆ ಮಾಡಿರುತ್ತಿತ್ತು. ಆದರೆ ಈ ವರ್ಷದ ಸಂಭ್ರಮಕ್ಕೆ ಪಟಾಕಿ ದುರಂತದ ಕರಿಛಾಯೆ ಆವರಿಸಿದೆ. ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸಿ ಖುಷಿಪಡುತ್ತಿದ್ದ ಗ್ರಾಮದ ಮೂರು ಜೀವಗಳು ಪಟಾಕಿ ದುರಂತದಲ್ಲಿ ಬಲಿಯಾಗಿವೆ. ಕಾಟೇನಹಳ್ಳಿ ಗ್ರಾಮದ ಸ್ನೇಹಿತರಾಗಿದ್ದ ಶಿವಾನಂದ ಅಕ್ಕಿ(22), ದ್ಯಾಮಪ್ಪ ಓಲೇಕಾರ್ (25) ಹಾಗೂ ರಮೇಶ ಬಾರ್ಕಿ(26) ಪಟಾಕಿಯಲ್ಲಿ ದುರಂತದಲ್ಲಿ ಸಾವಿಗೀಡಾದವರು. …

Read More »

ಪಟಾಕಿ ಗೊಡೋನ್ ಗೆ ಬೆಂಕಿ: ಸುಮಾರು 1 ಕೋಟಿ ಮೌಲ್ಯದ ಸಿಡಿಮದ್ದು ಸುಟ್ಟು ಭಸ್ಮ

ಹಾವೇರಿ: ವೆಲ್ಡಿಂಗ್ ಮಾಡುವಾಗ ಬೃಹತ್ ಪಟಾಕಿಯ ಗೊಡೋನ್ ಗೆ ಬೆಂಕಿ ತಗುಲಿ ಸುಮಾರು 1 ಕೋಟಿ ಮೌಲ್ಯದ ಸಿಡಿಮದ್ದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿಯ ಇರುವ ಭೂಮಿಕಾ ಟ್ರೇಡರ್ಸ್ ಎಂಬ ಗೊಡೋನ್ ನಲ್ಲಿ ನಡೆದಿದೆ. ಸಿ ಜಿ ವಿರೇಶ್ ಎಂಬುವವರಿಗೆ ಸೇರಿದ್ದ ಗೊಡೋನ್ ಆಗಿದ್ದು, ಕೆಲಸ ಮಾಡುತ್ತಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಶಿವಕಾಶಿ ಎಂಬಲ್ಲಿಯಿಂದ ಬಂದಿದ್ದ ಪಟಾಕಿ ಸಾಮಾಗ್ರಿಗಳನ್ನು ಇಂದು …

Read More »

ಹಾವೇರಿಗೆ ಬರಲು ಹಾಂಸಿ, ಶಾಕಾರ ಗ್ರಾಮದ ಜನರ ಪರದಾಟ….

ಹಾವೇರಿ: ತಾಲೂಕಿನ ಹಾಂಸಿ, ಶಾಕಾರ ಗ್ರಾಮಗಳನ್ನು ತುಂಗಭದ್ರಾ ನದಿ ಹಾವೇರಿ ಜಿಲ್ಲೆಯಿಂದ ಪ್ರತ್ಯೇಕಿಸುತ್ತದೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ನಿತ್ಯ ಕೆಲಸ ಕಾರ್ಯಕ್ಕಾಗಿ ಹಾವೇರಿ ತಾಲೂಕು ಕೇಂದ್ರ ಹಾಗೂ ಸಮೀಪದ ಗ್ರಾಮಗಳನ್ನು ಅವಲಂಬಿಸಿದ್ದಾರೆ. ಇದೇ ಕಾರಣದಿಂದ ಸಂಚರಿಸಲು ಬ್ರಿಡ್ಜ್ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ. ತೆಪ್ಪ ಅಥವಾ ದೋಣಿಗಳ ಸಹಾಯದಿಂದಲೇ ತುಂಗಭದ್ರಾ ನದಿ ದಾಟಿಯೇ ಹಾವೇರಿಗೆ ಬರಬೇಕಾದ ಪರಿಸ್ಥಿತಿ ಇದೆ. ಇದಲ್ಲದೇ ಇದ್ದರೆ 40 ಕಿ.ಮೀ ದೂರ ಕ್ರಮಿಸಿ ಹಾವೇರಿಯ ಗುತ್ತಲ, ಹಾವನೂರು …

Read More »

ವಿಕಲಚೇತನರ ಸಿಟಿಂಗ್ ಥ್ರೋಬಾಲ್ ಪಂದ್ಯ ಭಾರತದ ಮಹಿಳಾ ,ಪುರುಷರ ತಂಡ ಗೆಲುವು.

ಹಾವೇರಿ :ಮಲೇಶಿಯಾದ ಕ್ವಾಲಾಲಂಪುರದಲ್ಲಿ ಜುಲೈ 29 ಮತ್ತು 30 ರಂದು ನಡೆದ ವಿಕಲಚೇತನರ ಸಿಟ್ಟಿಂಗ್​ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಇಬ್ಬರು ಆಟಗಾರರು ಹಾವೇರಿ ಜಿಲ್ಲೆಯವರಾಗಿದ್ದು, ಮಹಿಳಾ ತಂಡವನ್ನು ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದ ಮಂಜುಳಾ ಲಮಾಣಿ ಹಾಗು ಪುರುಷ ತಂಡವನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹರೀಶ್ ಶಿವಣ್ಣನವರ್ ಮುನ್ನಡಿಸಿದ್ದರು. ಮುಂಬರುವ ಪ್ಯಾರಾ ಏಷ್ಯನ್​ ಗೇಮ್ಸ್ …

Read More »

ಒಂದು ಕಾಲದಲ್ಲಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯ…

ಹಾವೇರಿ:ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿರುವ ಎಸ್​ಜೆಜೆಎಂ ಪಬ್ಲಿಕ್ ಶಾಲೆ ಹಲವು ದಶಕಗಳನ್ನು ಕಂಡ ಶಾಲೆ. ಈ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವಿವಿಧ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬ್ಯಾಡಗಿ ಪಟ್ಟಣದ ಪ್ರತಿಷ್ಠಿತ ಶಾಲೆಯಾಗಿದ್ದಎಸ್​ಜೆಜೆಎಂ ಪಬ್ಲಿಕ್ ಶಾಲೆ ಈಗ ಹಲವು ಇಲ್ಲಗಳ ನಡುವೆ ಕಾರ್ಯನಿರ್ವಹಿಸುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಅಜ್ಞಾನದ ಕತ್ತಲೆ ಓಡಿಸಿ ಬೆಳಕು ನೀಡಬೇಕಾದ ಶಾಲೆಯಲ್ಲಿ ವಿದ್ಯುತ್ ಇಲ್ಲ. ಇಲ್ಲಿಯ ಮಕ್ಕಳು ಕತ್ತಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಮೂಲೆ …

Read More »

ಸಂಪುಟದ ತೀರ್ಮಾಣಕ್ಕೆ ಕಾದು ನೊಡೋಣ: ಬಸವರಾಜ ಬೊಮ್ಮಾಯಿ

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಸಂಪುಟದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೊ ಕಾದು ನೋಡೊಣ ಎಂದು  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಜಾರಿ ಮಾಡಲು ಮುಖ್ಯಮಂತ್ರಿಗಳು ಸಭೆಗಳನ್ನು ಮಾಡಲಿ, ನಾಳೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಗೊತ್ತಾಗಲಿದೆಯಾವುದು ಕೊಡುತ್ತಾರೆ ಯಾವುದು ಇಲ್ಲ, ಏನು ಕಂಡಿಷನ್ ಹಾಕುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದರು.ಡಿಸಿಎಂ ಡಿ. ಕೆ. ಶಿವಕುಮಾರ್ ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ …

Read More »

ರಾಮಲಿಂಗ ಕಾಮದೇವರ ಮರುಪ್ರತಿಷ್ಠಾಪನೆ

ನವಲಗುಂದ : ಹೋಳಿ ಹುಣ್ಣಿಮೆಯಲ್ಲಿ ದಹನವಾದ ಶ್ರೀರಾಮಲಿಂಗ ಕಾಮದೇವರು ಯುಗಾದಿಯ ದಿನ ಈ ಪಟ್ಟಣದಲ್ಲಿ ಮರುಜನ್ಮ ಪಡೆಯಲಿದ್ದಾನೆ. ಬಾಲ ಕಾಮಣ್ಣ ಕುಳಿತ ಭಂಗಿಯಲ್ಲಿ ಯುಗಾದಿ ಪಾಡ್ಯದ ದಿನದಂದು ಮರುಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಪಟ್ಟಣದಲ್ಲಿ ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಯದಲ್ಲಿ ಭಕ್ತರು ಭಾಗಿಯಾಗುತ್ತಾರೆ. ಪೂಜೆ ಸಲ್ಲಿಸುತ್ತಾರೆ. ಬಾಲ ಕಾಮಣ್ಣನ ಮೂರ್ತಿಯನ್ನು ಕಂಡು ಸಂಭ್ರಮಿಸುತ್ತಾರೆ. ಇನ್ನೂ ಶ್ರೀರಾಮಲಿಂಗ ಕಾಮದೇವರನ್ನು ನಾಳೆ ಮಾರ್ಚ 22 ರ ಬುಧವಾರ ಬೆಳಿಗ್ಗೆ 6 …

Read More »

ಡಿಮಾನ್ಸ್‌ನಲ್ಲಿ ಸಾವಿಗೀಡಾದ ವಿಚಾರಣಾಧೀನ ಕೈದಿ

ಧಾರವಾಡ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಇಂಗಳಗುಂದಿ ಗ್ರಾಮದ ವಿಚಾರಣಾಧೀನ ಕೈದಿ ವಸಂತ ತಂಬಾಕದ (40) ಎಂಬಾತ ಧಾರವಾಡದ ಡಿಮಾನ್ಸ್‌ನಲ್ಲಿ ಸಾವಿಗೀಡಾಗಿದ್ದಾನೆ. ಸುಮಾರು 17 ಕಳ್ಳತನ ಪ್ರಕರಣದಡಿ ವಸಂತನನ್ನು ಯಲ್ಲಾಪುರ ಠಾಣೆ ಪೊಲೀಸರು ಬಂಧಿಸಿ, ಹಳಿಯಾಳ ಕಾರಾಗೃಹದಲ್ಲಿಟ್ಟಿದ್ದರು. ಎಲ್ಲಾ ಪ್ರಕರಣಗಳಲ್ಲೂ ಜಾಮೀನು ಪಡೆದುಕೊಂಡಿದ್ದ ವಸಂತನನ್ನು ಪೊಲೀಸರು ಕೇವಲ ಒಂದು ಪ್ರಕರಣದಡಿ ಬಂಧಿಸಿದ್ದರು. ಮಾ.6 ರಂದು ಕೈದಿ ವಸಂತನನ್ನು ಪೊಲೀಸರು ಚಿಕಿತ್ಸೆಗೆಂದು ಧಾರವಾಡದ ಡಿಮಾನ್ಸ್ಗೆ ಕರೆದುಕೊಂಡು ಬಂದಿದ್ದರು. ಆದರೆ,ಇದೀಗ ವಸಂತ ಆಸ್ಪತ್ರೆಯಲ್ಲೇ …

Read More »

ರೈತರಿಗೆ ಆರ್ಥಿಕ ನೆರವು : ಬಿತ್ತನೆ ಭೀಜಕ್ಕೆ 10 ಸಾವಿರ ರೂ-ಸಿಎಂ

ಹಾವೇರಿ: ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ, ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕ ಅಭಿವೃದ್ಧಿ ನಿಗಮದ ಮೂಲಕ ಮೆಗಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ರೈತರಿಗೆ ಆರ್ಥಿಕ ನೆರವು ನೀಡಲು ಮುಂಗಾರು ಹಂಗಾಮಿನಲ್ಲಿ ಬಿತ್ತನೆ …

Read More »