BigTv News
December 21, 2022
Breaking News, ದಾವಣಗೆರೆ
ದಾವಣಗೆರೆ: ಜಲ್ಲಿಕಲ್ಲು ಟಿಪ್ಪರ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ನಾಗರಸನಹಳ್ಳಿ ಬಳಿ ನಡೆದಿದೆ. ಹೊನ್ನಾಯಕನಹಳ್ಳಿಯ ನಿವಾಸಿ, ಚಾಲಕ ಶಿವರಾಜ್(25), ಹೆಬ್ಬಾಳದ ನಿವಾಸಿ, ಕ್ಲೀನರ್ ತೇಜಸ್ ಕುಮಾರ್(32) ಮೃತ ದುರ್ದೈವಿಗಳು. ಮೃತರು ಕಳೆದ ಎರಡು ವರ್ಷಗಳಿಂದ ಕ್ವಾರೆಗಳಿಂದ ಜಲ್ಲಿ ಕಲ್ಲು ಸಾಗಿಸುತ್ತಿದ್ದರು. ಹೀಗೆ ಇಂದು (ಡಿ.20) ಜಲ್ಲಿ ಕಲ್ಲು ಸಾಗಿಸುವಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
November 27, 2022
Breaking News, ದಾವಣಗೆರೆ
ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಅಪಘಾತ ಪ್ರಕರಣ ಹೊನ್ನಾಳಿಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದು ಎ ಎಸ್ ಐ ಪುತ್ರ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ಸಂಭವಿಸಿದೆ. ಪ್ರಕಾಶ್ ಮೃತ ದುರ್ದೈವಿ. ಪ್ರಕಾಶ್, ಬೆಳಗಾವಿ ಜಿಲ್ಲೆಯ ಮಾಳಮಾರುತಿ ಪೊಲೀಸ್ ಠಾಣೆಯ ಎ ಎಸ್ ಐ ಪುತ್ರ ಎಂದು ತಿಳಿದುಬಂದಿದೆ.
Read More »
BigTv News
November 19, 2022
Breaking News, ದಾವಣಗೆರೆ
ದಾವಣಗೆರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 23 ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 23 ರಂದು ಬೆಳಿಗ್ಗೆ 09 ಗಂಟೆಗೆ ಬೆಂಗಳೂರಿನಿಂದ ಹೊರಟು 11 ಗಂಟೆಗೆ ಚಿತ್ರದುರ್ಗದ ಮುರಘಾ ಮಠ ಆವರಣದಲ್ಲಿರುವ ಹೆಲಿಪ್ಯಾಡ್‍ಗೆ ಆಗಮಿಸುವರು. ನಂತರ 11.15ಕ್ಕೆ ಜಗಳೂರಿನ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನ.23ರಂದು ಸಿಎಂ ದಾವಣಗೆರೆ ಜಿಲ್ಲಾ ಪ್ರವಾಸ ದಾವಣಗೆರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು …
Read More »
BigTv News
November 10, 2022
Breaking News, ದಾವಣಗೆರೆ
ದಾವಣಗೆರೆ : ಹೊನ್ನಾಳಿಯ ಎಂ.ಆರ್.ಚಂದ್ರಶೇಖರ ಸಾವಿನ ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುವವರೆಗೂ ಪೊಲೀಸರು ಯಾವುದೇ ತೀರ್ಮಾನಕ್ಕೂ ಬರಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಹೊನ್ನಾಳಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಹೋದರ ಎಂ.ಪಿ.ರಮೇಶ ಹಾಗೂ ಕುಟುಂಬಕ್ಕೆ ಚಂದ್ರು ನಿಧನದ ಹಿನ್ನೆಲೆಯಲ್ಲಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರು ಮರಣೋತ್ತರ ಪರೀಕ್ಷೆ ವರದಿ ಇನ್ನು 2 ದಿನಗಳಲ್ಲೇ ಬರಲಿದೆ ಎಂದರು. ಮರಣೋತ್ತರ ಪರೀಕ್ಷೆ ವರದಿ, ವಿಧಿ ವಿಜ್ಞಾನ ವರದಿ ಆಧಾರ …
Read More »
BigTv News
November 5, 2022
Breaking News, ದಾವಣಗೆರೆ
ದಾವಣಗೆರೆ: ಸಹೋದರನ ಮಗ ಚಂದ್ರಶೇಖರ್ ಸಾವು ಅಪಘಾತವಲ್ಲ, ಇದೊಂದು ಕೊಲೆ. ಹಿಂದುತ್ವದ ಬಗ್ಗೆ ತುಂಬಾ ಅಭಿಮಾನ ವನ್ನು ಹೊಂದಿದ್ದ ಆತನನ್ನು ಹೊಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕಣ್ಣಿರಿಟ್ಟಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಚಂದ್ರಶೇಖರ್ ಹಿಂದುತ್ವಕ್ಕಾಗಿ ಹೋರಾಟ ನಡೆಸುತ್ತಿದ್ದ. ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ಗಲಾಟೆ ಆದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ಎಂದರು. ಚಂದ್ರಶೇಖರ್ ಮನೆಗೆ ಬರದೆ ಎರಡು ದಿನವಾದಾಗಲೆ ನಾವು ನಾಪತ್ತೆ ಕೇಸ್ ದಾಖಲಿಸಿದ್ದೆವು. ಈಗ ಆತನ …
Read More »
BigTv News
September 20, 2022
Breaking News, ದಾವಣಗೆರೆ
ದಾವಣಗೆರೆ : ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ವಿತರಿಸುವ ಪಡಿತರದಲ್ಲಿ ಗೋಲ್ ಮಾಲ್ ಆರೋಪ ಮಾಡಿ ನ್ಯಾಯ ಸಿಗದೇ ಪರಿಸರ ಪ್ರೇಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕ ಜನರಿಗೆ ವಿತರಿಸುವ ಅಕ್ಕಿಯಲ್ಲಿ ಗೋಲ್ ಮಾಲ್ ಮಾಡುತ್ತಿದ್ದಾನೆ ಎಂದು ಆರೋಪಿ ಅಂಗಡಿ ಮಾಲೀಕನ ವಿರುದ್ಧ ಹೋರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಬಗ್ಗೆ ನೋಂದು ಆತ್ಮಹತ್ಯೆಗೆ ಶರಣಾಗಿದ್ದಾರೆ …
Read More »
BigTv News
August 30, 2022
Breaking News, ದಾವಣಗೆರೆ
ದಾವಣಗೆರೆ: ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ. ಹರ್ಷಾ ಕೆ.ಬಿ. (37) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ದಾವಣಗೆರೆ ನಗರದ ತಮ್ಮ ನಿವಾಸದಲ್ಲಿ ಕುಸಿದು ಬಿದ್ದ ಕೆಲವೇ ಕ್ಷಣಗಳಲ್ಲಿ ಡಾ.ಹರ್ಷಾ ಮೃತಪಟ್ಟಿದ್ದಾರೆ. ಕುಸಿದು ಬಿದ್ದ ತಕ್ಷಣ ತುರ್ತಾಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಡಾ.ಹರ್ಷಾ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇತ್ತೀಚೆಗಷ್ಟೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯಾಗಿ ಡಾ.ಹರ್ಷಾ ಅಧಿಕಾರ ಸ್ವೀಕರಿಸಿದ್ದರು. ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದ ಡಾ. ಹರ್ಷ, ಸೇನೆಯಲ್ಲಿ ಸೇವೆ ಮುಗಿಸಿ …
Read More »
BigTv News
May 23, 2022
Breaking News, ದಾವಣಗೆರೆ
ದಾವಣಗೆರೆ: ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ್ದ ಮಾಜಿ ಸಚಿವ, ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದಾವಣಗೆರೆ ಜಿಲ್ಲೆಯ ಬೈರನಹಳ್ಳಿ ಗ್ರಾಮದಲ್ಲಿ ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದರು. ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಶಾಸಕ ಎಂ.ಪಿ. ರೇಣುಕಾಚಾರ್ಯ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ತಾವೇ ಚಲಾಯಿಸಿ ಗಮನ ಸೆಳೆದಿದ್ದರು. ಗ್ರಾಮಕ್ಕೆ …
Read More »
admin
May 7, 2022
Breaking News, ದಾವಣಗೆರೆ
ದಾವಣಗೆರೆ: ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಯುವಕರಿಬ್ಬರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ನೆಡೆದಿದೆ. ಬಿದರಹಳ್ಳಿ ಗ್ರಾಮದ ಸಿದ್ದೇಶ ನಾಯ್ಕ್ ಹಾಗೂ ಲಕ್ಕಿನಕೊಪ್ಪದ ಗೀರಿಶ ನಾಯ್ಕ ಎಂಬುವವರೇ ದಾಂದಲೇ ಮಾಡಿದವರಾಗಿದ್ದು,ನರೇಗಾ ಕೆಲಸ ವಿಳಂಬ ಮಾಡಿದ್ದರಿಂದ ಗ್ರಾಂ ಪಂಚಾಯತಿ ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಕಛೇರಿಯ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. …
Read More »
admin
March 15, 2022
Breaking News, ದಾವಣಗೆರೆ
ದಾವಣಗೆರೆ : ನಗರದಲ್ಲಿ ನಗರ ದೇವತೆ ಶ್ರೀ ದುಗಾರ್ಂಬಿಕಾ ದೇವಿಯ ಜಾತ್ರೆ ಹಾಗೂ ಶ್ರೀ ಚೌಡೇಶ್ವರಿ ಜಾತ್ರೆ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ ಎಂದುಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ಮಾ.15 ರ ಬೆಳಿಗ್ಗೆ 06 ಗಂಟೆಯಿಂದ ಮಾ.16 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಾರಿಗೊಳಿಸಿದೆ.ಜಿಲ್ಲೆಯಲ್ಲಿ ಮಾ.13 ರಿಂದ ಮಾ.22 …
Read More »