ಗ್ರಾಮಕ್ಕೊಂದು ಬಸ್ ನಿಲ್ದಾಣ ಇದ್ರೆ ಸಾಕು. ಆದ್ರೆ ಇಲ್ಲೋಂದು ಗ್ರಾಮದಲ್ಲಿ ಒಂದು ಉತ್ತಮವಗಿರೋ ಬಸ್ ನಿಲ್ದಾಣ ಇದ್ರೂ ಕೂಡಾ ಇನ್ನೊಂದು ಬಸ್ ನಿಲ್ದಾಣ ಮಡಲಾಗಿದೆ. ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಭರಮಣ್ಣ ನಾಯಕ ದುರ್ಗದಲ್ಲಿ ನಡೆದಿದೆ.ಜಿಲ್ಲಾಪಂಚಾಯತಿ ಅನುದಾನದಲ್ಲಿ 4ಲಕ್ಷ ವೆಚ್ಚದಲ್ಲಿ ಒಂದು ಉತ್ತಮವಾದ ಬಸ್ ತಂಗುದಾಣವಿದೆ.ಅದರ ಪಕ್ಕದಕ್ಕಿ ಕೇವಲ ಜಂಕ್ ಶೀಟ್ ಹಾಕಿದ ಯಾವುದೇ ಉಪಯೋಗವಿಲ್ಲದ 5ಲಕ್ಷದ ಬಸ್ ನಿಲ್ದಾಣವನ್ನು ಭೂಸೇನಾ ನಿಗಮದವರು ನಿರ್ಮಸಿದ್ದಾರೆ.ಮಳೆ ಬಿಸಿಲಿಗೆ ತಡೆ ಇಲ್ಲದ ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ಇದೆಯಾ ಎನ್ನೋದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಒಂದರ ಪಕ್ಕದಲ್ಲಿ ಒಂದು ಬಸ್ ತಂಗುದಾಣದ ಅವಶ್ಯಕತೆ ಇದೆಯಾ ಎನ್ನೋದು ಮತ್ತೊಂದು ಉತ್ತರಿಸಲಾಗದ ಪ್ರಶ್ನೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





