‘ಶೆಟ್ಟರ್ ಜೊತೆಗೆ ನಾವಿದ್ದೇವೆ, ಅವರ ಆಗಮನದಿಂದ ಬದಲಾವಣೆಯಾಗಿದೆ’
ಹುಬ್ಬಳ್ಳಿ: ನಾವು ಪ್ರತಿಯೊಂದು ಹಂತದಲ್ಲೂ ಬಿಜೆಪಿ ಸರ್ಕಾರದ ತಪ್ಪು ಮುಂದಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ಇವತ್ತು ನಮಗೆ ದೊಡ್ಡ ಅವಕಾಶ ಸಿಕ್ಕಿದೆ. ದೇವರು ವರವನ್ನು ಕೊಡುವುದಿಲ್ಲ ಶಾಪವನ್ನು ಕೊಡುವುದಿಲ್ಲ, ಅವಕಾಶ ಮಾತ್ರ ಕೊಡುತ್ತಾನೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ-ಧಾರವಾಡ ಮಾಧ್ಯಮದ ಮಿತ್ರರಿಗೆ ಅಭಿನಂದನೆಗಳು. ಸಮಾಜಕ್ಕೆ ಸತ್ಯ ಸಂಗತಿ, ಎಲ್ಲ ವರ್ಗದ ಜನರನ್ನು ರಕ್ಷಣೆ ನೀವು ಮಾಡಿದ್ದೀರಿ. ನಾನು ಜಗದೀಶ್ ಶೆಟ್ಟರ್, ಸವದಿ ಭೇಟಿ ಕಾರ್ಯಕ್ರಮ ಮಾತ್ರ ಹಾಕಿಕೊಂಡಿದ್ದೇನೆ. ಬಿ ಫಾರಂ ಕೊಟ್ಟ ಮೇಲೆ ಜಗದೀಶ್ ಶೆಟ್ಟರ್ ಜೊತೆ ಮಾತಾಡಿರಲಿಲ್ಲ. ನಾನು ಪ್ರಚಾರದಲ್ಲಿ ಬ್ಯೂಸಿ ಆಗಿದ್ದೆ. ಶೆಟ್ಟರ್, ಸವದಿ, ಗುಬ್ಬಿ ಶ್ರೀನಿವಾಸ ಅವರಿಂದ ನಮಗೆ ಶಕ್ತಿ ಬಂದಿದೆ ಎಂದರು.
ಸೋಲು ಗೆಲವು ಚುನಾವಣೆಯಲ್ಲಿ ಸಾಮಾನ್ಯ. ಶೆಟ್ಟರ್, ಸವದಿ ಹಾಗೂ ಗುಬ್ಬಿ ಶ್ರೀನಿವಾಸ ಅವರಿಂದ ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಅವರಿಂದ ಬದಲಾವಣೆ ಆಯ್ತು. ಇವತ್ತು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ನಾವು ನುಡಿದಂತೆ ನಡೆಯುತ್ತೇವೆ. ಶೆಟ್ಟರ್ ಜೊತೆ ನಾವು ಇರುತ್ತೇವೆ. ನಮಗೆ ವರಿಷ್ಠರ ಆದೇಶ ಇದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇಲೆ ಕೆಲ ಸಂದೇಶ ಹೇಳಬೇಕಿತ್ತು. ಶೆಟ್ಟರ್‌ಗೆ ಸಂದೇಶ ತಲುಪಿಸಿದ್ದೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷ ಅವರ ಜೊತೆ ಇದೆ ಎಂದ ಅವರು, ಶೆಟ್ಟರ್ ಗೆ ಸ್ಥಾನ ಮಾನ ಕೊಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಒಂದೇ ಮಾತಿನಲ್ಲಿ ಹೇಳುತ್ತೇನೆ. ಪಕ್ಷ ಅವರ ಜೊತೆ ಇದೆ. ನಾವೇನು ಗೌಪ್ಯವಾಗಿ ಇಡುವುದಿಲ್ಲ ಎಲ್ಲವನ್ನೂ ನಿಮಗೆ ಹೇಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





