Breaking News
Featured Video Play Icon

ಕೇಶ್ವಾಪೂರ ಭಾಗದಲ್ಲಿಯೂ ಮರುಳು ಮಾಫಿಯಾ ಜೋರು: ಅಧಿಕಾರಿಗಳೇ ಕಣ್ಣು ಬಿಟ್ಟು ನೋಡಿ…

ಅಕ್ರಮ ಮರಳಿಗೆ ಸಕ್ರಮ ಪಾಲುದಾರಿಕೆ!!!!!!

ಅವಳಿನಗರದ ಅನಧಿಕೃತ ಮರಳು ದಂಧೆ!!!!!

ಟಫ್ ಕಮಿಷನರ್ ಬಂದ್ರು ಅವರ ಕಣ್ಣಿಗೆ ಉಸಕು ಚೆಲ್ಲುತ್ತಿರುವ ಖತರ್ನಾಖ್ ಪೊಲೀಸರು..????

ತಿಂಗಳ ಕಮಿಷನ್.. ಊರ ಹೊರಗೆ ವ್ಯವಹಾರ!!!

ಮೀಡಿಯಾ ಪಾಲುದಾರರಿಗೆ ಇನ್ ಟೈಮ್ ಮುಟ್ಟುತ್ತೆ ಮಂತ್ಲಿ ಕಮಿಷನ್!!!!

ಕೇಶ್ವಾಪೂರ ಹಾಗು ಗಬ್ಬೂರ್ ಬೈ ಪಾಸ್ ಮತ್ತು ಕಾರವಾರ ರೋಡ್ ನಲ್ಲಿ ಮರಳು ದಂಧೆಯ ಹೀರೋಗಳ ರಾತ್ರಿ ಡ್ಯೂಟಿ!!!!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನಧಿಕೃತ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದೆ. ಈ ಮಧ್ಯ ಮರಳು ಮಾರಾಟದ ನಾಲ್ಕು ವಾಹನಗಳನ್ನು ಪೊಲೀಸ್ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಜಪ್ತಿ ಮಾಡಿರುವುದು ಖುಷಿಯ ವಿಷಯ‌. ಆದರೆ ಕೇಶ್ವಾಪೂರ ಭಾಗದಲ್ಲಿ ಬಹುತೇಕ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ..ಇದು ಕೇವಲ ಕೇಶ್ವಾಪೂರ ಭಾಗದಲ್ಲಿ ಮಾತ್ರವಲ್ಲಿ ನಗರದ ಅನೇಕ ಕಡೆಗಳಲ್ಲಿ ಮರಳು ಅಡ್ಡಾಗಳು ತಲೆ ಎತ್ತಿ ನಿಂತಿವೆ…ಏನಿದು ಸ್ಟೊರಿ ಅಂತಿರಾ ಡೀಟೇಲ್‌ ಆಗಿ ಹೇಳ್ತಿವಿ ನೋಡಿ..ಎಸ್‌… ವಾಣಿಜ್ಯ ನಗರಿ ಹುಬ್ಬಳ್ಳಿಯ…ಛೋಟಾ ಮುಂಬೈ ಎಂದು ಕರೆಯಿಸಿಕೊಳ್ಳುವ ಈ ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಮರಳು ಮಾರಾಟದ ಅಡ್ಡೆಗಳು ತಲೆಯೆತ್ತಿವೆ. ದೊಡ್ಡ ನಗರಗಳಲ್ಲಿ ನಡೆಯುವ ಎಲ್ಲ ದಂಧೆಗಳು ಕೂಡ ಸದ್ದಿಲ್ಲದೇ ಹುಟ್ಟಿಕೊಳ್ಳುತಿವೆ. ವಾಣಿಜ್ಯ ನಗರಿಯಲ್ಲಿ ಮರಳುದಂಧೆಯ ಕಾರುಬಾರು ಜೋರಾಗಿಯೇ ನಡೆದಿದೆ. ಇನ್ನು ಈ ಮರಳು ದಂಧೆ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿಯ ನೆರಳಲ್ಲಿ ಮರಳು ಮಾರಾಟ ಮಾಫಿಯಾ ನಡೆಯುತ್ತಿದ್ದು ಸಾಕಷ್ಟು ಸದ್ದು ಮಾಡಿದೆ. ಇನ್ನೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತಾಲಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನಧಿಕೃತ ಮರಳು ಸಾಗಾಣಿಕೆ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆ ವೇಳೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ತಪಾಸಣೆ ಮಾಡಿ, ಪರವಾನಗಿ ಇಲ್ಲದ 4 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಕಾರವಾರ ರಸ್ತೆ, ವಿಶಾಲನಗರ, ಕೇಶ್ವಾಪುರ, ಗಬ್ಬೂರ ಬೈಪಾಸ್, ಇನ್ನು ಹಲವೆಡೆ ಸದ್ದಿಲ್ಲದೇ ನಡೆಯುತ್ತಿರುವ ಮರಳು ಮಾರಾಟದ ದಂಧೆ ಬಗ್ಗೆ ಸ್ವಲ್ಪ ಅಧಿಕಾರಿಗಳು ಕೂಡ ಗಮನ ಹರಿಸಬೇಕಾಗಿದೆ. ಹು-ಧಾರವಾಡಕ್ಕೆ ಹೊಸದಾಗಿ ಬಂದಿರುವ ಪೋಲಿಸ್‌ ಕಮೀಷನರ್‌ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡು ಒಂದೊಂದೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತಿದ್ದಾರೆ. ಆದ್ರೆ ಎಲ್ಲದಕ್ಕೂ ಕಮೀಷನರ್‌ ಬರಬೇಕು ಅಂದ್ರೆ ಹೇಗೆ .ಯಾವುದೇ ಇಲಾಖೆ ಆದ್ರೂ ಕೂಡ ಅದಕ್ಕೊಬ್ಬರು ಅಧಿಕಾರಿ ಇರ್ತಾರೆ. ಕಾಯ್ದೆ, ಕಾನೂನುಗಳಿರುತ್ತವೆ. ಅದರ ಪ್ರಕಾರ ತನಿಖೆ ನಡೆಸಿ ದಂಧೆಕೋರರ ಹೆಡಮುರಿ ಕಟ್ಟಬೇಕೇ ಹೊರತು ಎಲ್ಲವುದಕ್ಕೂ ಕಮೀಷನರ್‌ ಬರಬೇಕು ಅಂದ್ರೆ ಅದು ಅಸಾಧ್ಯ. ಪೋಲಿಸ್‌ ಕಮೀಷನರ್‌ನಿಂದ ಶಬ್ಬಾಷ್‌ಗಿರಿ ತೆಗದುಕೊಳ್ಳಬೇಕೆ ಹೊರತು ಅವರಿಂದ ಬೈಯಿಸಿಕೊಳ್ಳುವಂತಾಗಬಾರದು..ಹು-ಧಾ ಪೋಲಿಸ್‌ ಇಲಾಖೆ ಉತ್ತಮ ಆಡಳಿತ ವ್ಯವಸ್ಥೆ ಮೂಲಕ ಜನರಲ್ಲಿ ನಂಬಿಕೆ ಗಳಿಸಿದೆ. ಅದನ್ನೂ ಹಾಗೇ ಉಳಿಸಿಕೊಕೊಂಡು ಉತ್ತಮ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಮರಳು ಮಾಫಿಯಾ ದಂಧೆಗೆ ಕಡಿವಾಣ ಹಾಕಬೇಕಾಗಿದೆ… ಇದರ ಮದ್ಯ ಹಲವು ಪೋಲಿಸ್‌ ಅಧಿಕಾರಿಗಳು, ಮತ್ತು ಕೆಲ ಅಧಿಕಾರಿಗಳು, ಮಾಧ್ಯಮ ಮಿತ್ರರು ಸೇರಿದಂತೆ ಹಲವರು ಈ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ. ಇನ್ನೂ ಈ ಮರಳು ದಂಧೆಗೆ ನಡೆಯಬೇಕು ಅಂದ್ರೆ ಎಲ್ಲಾ ಇಲಾಖೆಗೂ ಮಾಮೂಲಿ ಖಾಯಂ ಅಂತೆ ಇನ್ನು ಈ ಸುದ್ದಿ ಪೋಲಿಸ್ ಕಮೀಷನರ್‌ ಗಮನಕ್ಕೆ ಬಂದಿಲ್ಲ. ಅವರ ಗಮನಕ್ಕೆ ಬರುವ ಮೊದಲೇ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವತ್ತ ಗಮನ ಹರಿಸಿ. ಹುಬ್ಬಳ್ಳಿ-ಧಾರವಾಡಕ್ಕೆ ಹೊಸದಾಗಿ ನೇಮಕವಾಗಿ ಬಂದಿರೋ ಕಮೀಷನರ್‌ ಯಾವುದಕ್ಕೂ ಹಿಂದು ಮುಂದೆ ನೋಡುವುದಿಲ್ಲ. ಯಾಕಂದ್ರೆ ಈಗಾಗಲೇ ಬಂದ ಕೆಲವೇ ತಿಂಗಳುಗಳಲ್ಲಿ ಅವರ ಕಾರ್ಯವೈಖರಿ ಎಂತಹದ್ದು ಎಂಬುವುದು ಅವಳಿನಗರದ ಜನತೆಗೆ ಮನವರಿಕೆಯಾಗಿದೆ.. ಹೀಗಾಗಿ ಕಮೀಷನರ್‌ ಸಾಹೇಬ್ರ ನಿಮ್ಮ ಬೆನ್ನಿಗಿದ್ದಾರೆ. ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ, ಆದಷ್ಟು ಬೇಗೆ ತೆಲೆ ಎತ್ತಿನಿಂತಿರುವ ಈ ಮರಳು ಮಾಫಿಯಾ ಬಗ್ಗೆ ಸೂಕ್ತ ಕ್ರಮ ಜರುಗಿಸಿ ದಂಧೆಕೋರರ ಕೈಗೆ ಕೋಳ ಹಾಕಿ ಸಂಪೂರ್ಣ ಮರಳುಗಾರಿಕೆಗೆ ಬ್ರೇಕ್‌ ಹಾಕಬೇಕಿದೆ.. ಇನ್ನಾದ್ರೂ ಸಂಭಂದಪಟ್ಟ ಅಧಿಕಾರಿಗಳು ಹಣದಾಸೆ ಬಿಟ್ಟು ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಮರಳು ದಂಧೆಗೆ ಸಂಪೂರ್ಣ ಕಡಿವಾಣ ಹಾಕ್ತರಾ ಅನ್ನೋದನ್ನು ಕಾದು ನೋಡಬೇಕಿದೆ… Shaikh ಬಿಗ್‌ ಟಿವಿ ನ್ಯೂಸ್‌ ಹುಬ್ಬಳ್ಳಿ

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *