Breaking News

ವಾಯುಮಾಲಿನ್ಯ ಹೆಚ್ಚಳ: ಗಾಳಿಯ ಗುಣಮಟ್ಟ ತೀವ್ರಗತಿಯಲ್ಲಿ ಕುಸಿತ

ಮೈಸೂರು: ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಗಾಳಿಯ ಗುಣಮಟ್ಟ ತೀವ್ರಗತಿಯಲ್ಲಿ ಕುಸಿಯುತ್ತಿದೆ ಎಂದು ಗ್ರೀನ್‌ ಪೀಸ್‌ ಇಂಡಿಯಾ ಸಂಸ್ಥೆಯ ಸಂಶೋಧನಾ ವರದಿಯು ತಿಳಿಸಿದೆ.
ಇದು ವಾಯು ಮಾಲಿನ್ಯದಿಂದ ನಗರದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಸುತ್ತುವರಿದಿರುವ ಮೈಸೂರಿನ ಗಾಳಿ ಶುದ್ಧವಾಗಿರಬೇಕಿತ್ತು. ಆದರೆ, ಮಾಲಿನ್ಯಕಾರಕ ಕಣಗಳಾದ ಪಿ.ಎಂ. ಗಾಳಿಯಲ್ಲಿರುವ ದೂಳಿನ ಕಣಗಳ ಪ್ರಮಾಣ 2.5 ಹಾಗೂ ಪಿ.ಎಂ. 10 ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಸಂಸ್ಥೆಯ ಸ್ಪೇರ್‌ ದಿ ಏರ್ 2 ವರದಿಯು ತಿಳಿಸಿದೆ. ವಾಹನಗಳು ಉಗುಳುವ ಹೊಗೆ, ರಸ್ತೆಯ ದೂಳು, ಹೊಸ ಕಟ್ಟಡ ನಿರ್ಮಾಣ ಮತ್ತು ಹಳೆ ಕಟ್ಟಡಗಳ ನೆಲಸಮ, ಕೈಗಾರಿಕೆಗಳ ಮಾಲಿನ್ಯ ಮತ್ತು ಕಟ್ಟಿಗೆ, ಪ್ಲಾಸ್ಟಿಕ್ ಉರಿಸುವಿಕೆ ಮೊದಲಾದ ಕಾರಣಗಳಿಂದ ಮಾಲಿನ್ಯಕಾರಕಗಳು ಗಾಳಿಯನ್ನು ಸೇರುತ್ತಿವೆ ಎಂದು ಮಾಹಿತಿ ನೀಡಿದೆ.
ಸಂಸ್ಥೆಯ ಸಂಶೋಧನಾ ತಂಡದ ಆಕಾಂಕ್ಷಾ ಸಿಂಗ್, ವಿಶಾಖಪಟ್ಟಣದಲ್ಲಿ ಗಾಳಿಯಲ್ಲಿ ಪಿ.ಎಂ. 2.5 ಕಣಗಳ ಪ್ರಮಾಣ 10 ಪಟ್ಟು, ಪಿಎಂ 10 ಕಣಗಳ ಪ್ರಮಾಣ 9 ಪಟ್ಟು ಹೆಚ್ಚಿದ್ದರೆ, ಬೆಂಗಳೂರಿನಲ್ಲಿ ಕ್ರಮವಾಗಿ 6 ಪಟ್ಟು ಹಾಗೂ 4.5 ಪಟ್ಟು ಹೆಚ್ಚಿದೆ. ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ. ಪಿ.ಎಂ. 10 ಕಣಗಳ ಮಟ್ಟವು ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಿದೆ. ಈ ಕಣಗಳ ಪ್ರಮಾಣ ವಾರ್ಷಿಕ 1.5ರಿಂದ 2.5ರಷ್ಟು ಸರಾಸರಿ ಹೆಚ್ಚಳವಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *