Breaking News

ಸಿಎಂ ಸಿದ್ದರಾಮಯ್ಯ ಕುರಿತು ಗುಡುಗಿದ ಸಿಟಿ ರವಿ

ಹುಬ್ಬಳ್ಳಿ: ಹೊಸ ಸಿಎಂ, ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್‌ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದ್ದೇವೆ ಅಂತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು, ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಡಜನ್‌ಗೂ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದಿದ್ದರು. ನೀವು ಸಂಗೊಳ್ಳಿ ರಾಯಣ್ಣ ಅಂತ ನಾನು ಭಾವಿಸಲ್ಲ ಎಂದರು.ಸಿದ್ದರಾಮಯ್ಯ ಸರ್ಕಾರಕ್ಕೆ ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್‌ ಸರ್ಕಾರ ಡಮಾರ್ ಆಗುತ್ತದೆ .ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಬ್ರಷ್ಟಾಚಾರದ ಸರ್ಕಾರ.ಉಪ್ಪು ತಿಂದವರು ನೀರು ಕುಡಿಯಲಬೇಕು. ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್ ಎಂದು ಸಿ.ಟಿ. ರವಿ ಗುಡುಗಿದರು.

ಸುಳ್ಳು ಲೆಕ್ಕ ಕಳ್ಳ ಬಿಲ್ಲು 100 ಪರ್ಸೆಂಟ್ ಲೂಟಿ. ಅವರ ಹಗರಣ ಮರೆಮಾಚೋಕೆ ಇನ್ನೊಬ್ಬರ ಕಡೆ ಬೊಟ್ಟು ಮಾಡೋದು. ತಪ್ಪು ಯಾರ ಮಾಡಿದ್ರು ತಪ್ಪೇ. ಅವರ ತರಹ ಜಾತಿ ಗುರಾಣಿ ಬಳಸಲ್ಲ. ಭ್ರಷ್ಟಾಚಾರ ಮುಚ್ಚಿ ಹಾಕೋಕೆ ಸಾಧ್ಯ ಇಲ್ಲ. ಸತ್ಯ ಯಾವತ್ತಾದರೂ ಹೊರಬರಲೇಬೇಕು. ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿ ಇರಬಾರದು. ನಾವು ಇವತ್ತು ಈದ್ದಾ ಮೈದಾನದಲ್ಲಿ ಭಗವಾ ಧ್ವಜಾ ಹಾರಿಸಿದ್ದೇವೆ. ಮೂವತ್ತು ವರ್ಷಗಳ ಹಿಂದೆ ನಾನು ಇಲ್ಲಿ ಹೋರಾಟ ಮಾಡೋಕೆ ಬಂದಿದ್ದೆ. ಇವತ್ತು ಇಲ್ಲಿ ಭಗವಾ ಧ್ವಜಾ ಹಾರಿಸಿದ್ದೇವೆ, ಇದು ನಮ್ಮ ಭೂಮಿ. ಹಿಂದುತ್ವ ಬಿಟ್ಟು ಭಾರತ ಇಲ್ಲ, ಭಾರತವನ್ನು ಬಿಟ್ಟು ಹಿಂದೂತ್ವ ಇಲ್ಲ. ರಾಣಿ ಚೆನ್ನಮ್ಮ ಮೈದಾನದಲ್ಲಿ ಇವತ್ತು ಗಣೇಶ ಪ್ರತಿಷ್ಠಾಪನೆ ಆಗಿದೆ. ಭಾರತ ಅಂದ್ರೆ ಚೈತನ್ಯ ಭೂಮಿ,ಕರ್ಮ ಭೂಮಿ ಎಂದು ಅವರು ಹೇಳಿದರು.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *