ಧಾರವಾಡ: ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿರುವ ತೆಲಗು ನಟ ಶ್ರೀಕಾಂತ ಅವರು ಭಾನುವಾರ ಧಾರವಾಡಕ್ಕೆ ಬಂದು ತಮ್ಮ ಹಳೆಯ ಗೆಳೆಯರನ್ನು ಭೇಟಿ ಮಾಡಿ, ಉಪಹಾರ ಸೇವಿಸಿ ಹೋಗಿದ್ದಾರೆ.
ಮೂಲತಃ ಗಂಗಾವತಿಯವರಾದ ಶ್ರೀಕಾಂತ, ಧಾರವಾಡ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದ ಅವರು, ತಮ್ಮ ಸ್ವಂತ ಊರು ಗಂಗಾವತಿಗೆ ಹೊರಟಿದ್ದರು. ಈ ವೇಳೆ ಧಾರವಾಡದ ತಮ್ಮ ಸ್ನೇಹಿತ ಉಪವನ ಹೋಟೆಲ್ ಮಾಲೀಕರಾದ ದಿನೇಶ ಶೆಟ್ಟಿ ಅವರ ಮನೆಗೆ ಭೇಟಿ ಕೊಟ್ಟು ಅವರ ಮನೆಯಲ್ಲೇ ಬೆಳಗಿನ ಉಪಹಾರ ಸೇವಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಉಪವನ ಹೋಟೆಲ್‌ನಲ್ಲೇ ಶ್ರೀಕಾಂತ ಅವರು ಉಪಹಾರ ಮಾಡುತ್ತಿದ್ದರು. ಹೀಗಾಗಿ ಆಗಾಗ ತಮ್ಮ ಗೆಳೆಯರ ಭೇಟಿಗೆ ನಟ ಶ್ರೀಕಾಂತ ಅವರು ಧಾರವಾಡಕ್ಕೆ
ಭೇಟಿ ನೀಡುತ್ತಲೇ ಇರುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

