ಧಾರವಾಡ: ಧಾರವಾಡದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೆ.ಎಚ್.ಕಬ್ಬರ ತಾಂತ್ರಿಕ ಶಿಕ್ಷಣ ಸಂಸ್ಥೆ ವತಿಯಿಂದ “ವಿಶ್ವ ಶಾಂತಿ” ಎಂಬ ಹೆಸರಿನಡಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಈ ಜಾಥಾ ಕೆಸಿಡಿ ಸರ್ಕಲ್‌ನಿಂದ ಆರಂಭವಾಗಿ ಜುಬ್ಲಿ ಸರ್ಕಲ್ ಮಾರ್ಗವಾಗಿ ಭಾರತೀಯ ರೆಡ್ ಕ್ರಾಸ್ ಕಚೇರಿವರೆಗೆ ಸಾಗಿತು.
ಈ ಜಾಥಾದಲ್ಲಿ ಪಾಲ್ಗೊಂಡಿದ್ದ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ವಿಶ್ವ ಶಾಂತಿ, ಆರೋಗ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಮಹಾಂತೇಶ ವೀರಾಪುರ, ಡಾ.ಉಮೇಶ ಹಳ್ಳಿಕೆರೆ, ಕೆ.ಎಚ್.ಕಬ್ಬರ ತಾಂತ್ರಿಕ ಸಂಸ್ಥೆ ಪ್ರಾಚಾರ್ಯೆ ವೇದಾವತಿ ತಿವಾರಿ ಹಾಗೂ ಉಪನ್ಯಾಸಕ ರಾಜಕುಮಾರ ಜೋಗಳೆ ಸೇರಿದಂತೆ ಇತರರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

