Breaking News

ಕೃಷಿ ಮೇಳದ ಉದ್ಘಾಟನೆಗೆ ಬರುವಂತೆ ಕುಲಪತಿಗಳು ಹೋಗಿ ಸಿಎಂಗೆ ಆಹ್ವಾನ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ : ಲಾಡ್

ಧಾರವಾಡ: ಕೃಷಿ ಮೇಳದ ಉದ್ಘಾಟನೆಗೆ ಬರುವಂತೆ ಕುಲಪತಿಗಳು ಹೋಗಿ ಸಿಎಂಗೆ ಆಹ್ವಾನ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಕೃಷಿ ಸಚಿವರು ವಾರಣಾಸಿಗೆ ಹೋಗಿರುವುದರಿಂದ ಅವರೂ ಬಂದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಕುಲಪತಿಗಳು ರಿಸರ್ಚ್ ಮಾಡಿದ್ದಾರೆ. ಅವರ ಬಳಿ ಅಂಕಿ ಸಂಖ್ಯೆ ಇರಬೇಕು. ಕೃಷಿ ವಿವಿಯಲ್ಲಿ ಎಷ್ಟು ಮೇಳಗಳು ಆಗಿವೆ. ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದರ ಬಗ್ಗೆ ಅವರಲ್ಲಿ ಮಾಹಿತಿ ಇರಬೇಕಿತ್ತು. ಅವರಿಗೆ ಬುದ್ದಿ ಹೇಳುವಷ್ಟು ನಾವು ದೊಡ್ಡವರಲ್ಲ ಎಂದರು.

ಸರ್ಕಾರಿ ಕೆಲಸದಲ್ಲಿರುವ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಂದರ್ಭದಲ್ಲಿ ಆರು ದಿನ ವೇತನ ಸಹಿತಿ ರಜೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಲಾಡ್, ರಾಜ್ಯದಲ್ಲಿ ಎಲ್ಲ ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆ ನೀಡುವ ಪ್ರಸ್ತಾವನೆ ಬಂದಿದೆ. ಇದಕ್ಕೆ ಎಲ್ಲ ಇಲಾಖೆಗಳ ಅಭಿಪ್ರಾಯ ಬೇಕು. ಎಲ್ಲ ಕೈಗಾರಿಕೆಗಳವರನ್ನೂ ಕರೆಯಿಸಿ ಸಭೆ ಮಾಡಿ ಅಭಿಪ್ರಾಯ ತೆಗೆದುಕೊಳ್ಳಬೇಕು. ಎಲ್ಲರ ಒಪ್ಪಿಗೆ ನಂತರ ಸರ್ಕಾರದ ಹತ್ತಿರ ಹೋಗುತ್ತೇವೆ ಎಂದರು.

Share News

About Shaikh BigTv

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *