ಹುಬ್ಬಳ್ಳಿ : ೪೪ ವರ್ಷ ಸಿತಿಪತಿಯಾಗಿ ವೈವಾಹಿಕ ಜೀವನ ನಡೆಸಿದ್ದು, ಸಾವಿನಲ್ಲೂ ಗಂಡ ಹೆಂಡತಿ ಒಂದಾಗಿದ್ದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಕುಸುಗಲ್ ಗ್ರಾಮದ ಶಂಕರಪ್ಪ ಹೊಂಬಳ ಹಾಗೂ ಅವರ ಪತ್ನಿ ಅನ್ನಪೂರ್ಣ ಹೊಂಬಳ ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ. ಅಂದ ಹಾಗೇ 72 ವರ್ಷದ ಶಂಕರಪ್ಪ ಅವರು ಇಂದು ಬೆಳಿಗ್ಗೆ 6 ಗಂಟೆಗೆ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಗಂಡನ ಸಾವಿನ ಸುದ್ದಿ ಕೇಳಿ ಕೆಲವೆ ಗಂಟೆಯಲ್ಲಿ ಪತ್ನಿ ಅನ್ನಪೂರ್ಣ ಮೃತಪಟ್ಟು ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳನ್ನ ಅಗಲಿದ್ದಾರೆ. ಇನ್ನೂ ಇವರ ಅಗಲಿಕೆಗೆ ಇಡೀ ಕುಸುಗಲ್ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ. ಇಬ್ಬರು ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದು, ಇಂದು ಸಂಜೆ 6 ಗಂಟೆಗೆ ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

