ಚೀನಾ: ಚೀನಾದ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ಸಮುದ್ರದಲ್ಲಿ ಮುಳುಗಡೆ ಆಗಿದೆ ಎಂದು ಅಮೆರಿಕ ಹೇಳಿದೆ.
ಇತ್ತೀಚೆಗೆ ಭಾರತ ಸೇರಿದಂತೆ ನೆರೆಯ ರಾಜ್ಯಗಳ ಮೇಲೆ ಸೇನಾ ಸಾಮರ್ಥ್ಯ ಬಲ ಪ್ರದರ್ಶನಕ್ಕೆ ಮುಂದಾಗಿರುವ ಚೀನಾದ ಪರಮಾಣು ದಾಳಿ ನಡೆಸುವ ಸಾಮರ್ಥ್ಯದ ಜಲಂತರ್ಗಾಮಿ ಹಡಗು ಮುಳುಗಡೆ ಆಗಿದೆ. ಆದರೆ ಮುಳುಗಡೆಯ ವಿವರ ಬಹಿರಂಗಗೊಂಡಿಲ್ಲ.
ವಿಶ್ವದ ಅತಿದೊಡ್ಡ ನೌಕಾಪಡೆ ಹೊಂದಿರುವ ಚೀನಾ ಬಳಿ ಈಗಾಗಲೇ 370ಕ್ಕೂ ಹೆಚ್ಚು ಜಲಂತಾರ್ಗಾಮಿ ಹಡಗು ಇದೆ. ಇತ್ತೀಚೆಗೆ ಹೊಸ ಪೀಳಿಗೆಯ ಪರಮಾಣು-ಸಜ್ಜಿತ ಜಲಾಂತರ್ಗಾಮಿ ನೌಕೆಗಳ ಉತ್ಪಾದನೆಯ ಕೂಡಾ ಪ್ರಾರಂಭಿಸಿದೆ.
ಚೀನಾದ ಹೊಸ ಪ್ರಥಮ ದರ್ಜೆಯ ಪರಮಾಣು ಚಾಲಿತ ದಾಳಿ ಜಲಾಂತರ್ಗಾಮಿ ಮೇ ಮತ್ತು ಜೂನ್ ನಡುವೆ ಸಮುದ್ರದಲ್ಲಿ ಮುಳುಗಡೆ ಆಗಿದೆ. ಇದು ಚೀನಾಗೆ ಅತ್ಯಂತ ಮುಜುಗರದ ವಿಷಯವಾಗಿದ್ದು, ಅಧಿಕೃತವಾಗಿ ಎಲ್ಲೂ ಮಾಹಿತಿ ಹೊರಗೆ ಬರದಂತೆ ನೋಡಿಕೊಳ್ಳುತ್ತಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





