ನವದೆಹಲಿ: ನಗರ ಪ್ರದೇಶಗಳಲ್ಲಿ ಚರಂಡಿಗಳು, ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಪೈಕಿ ಶೇ.92 ಮಂದಿ ಎಸ್‌ಸಿ, ಎಸ್ಟಿ, ಒಬಿಸಿ ಸಮುದಾಯಕ್ಕೆ ಸೇರಿದವರು. ಚರಂಡಿ ಸ್ವತ್ಛಗೊಳಿಸುವಂಥ ಅಪಾಯಕಾರಿ ಕೆಲಸದಲ್ಲಿ ತೊಡಗಿರುವವರ ಬಗ್ಗೆ ಇದೇ ಮೊದಲ ಬಾರಿಗೆ ಸರಕಾರ ಸಂಗ್ರಹಿಸಿದ ದತ್ತಾಂಶದಲ್ಲಿ ಈ ವಿಚಾರ ಬಹಿರಂಗಗೊಂಡಿದೆ.
29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 3 ಸಾವಿರ ನಗರ ಸ್ಥಳೀಯ ಸಂಸ್ಥೆಗಳಿಂದ ದತ್ತಾಂಶಗಳನ್ನು ಸರಕಾರ ಸಂಗ್ರಹಿಸಿದೆ. 38,000 ಕಾರ್ಮಿಕರ ಪೈಕಿ ಶೇ.91ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಸೇರಿದವರು. ಶೇ.68.9ರಷ್ಟು ಮಂದಿ ಪ.ಜಾತಿ, ಶೇ.14.7 ಮಂದಿ ಒಬಿಸಿ ಮತ್ತು ಶೇ.8.3ರಷ್ಟು ಮಂದಿ ಪ.ಪಂಗಡ, ಶೇ.8ರಷ್ಟು ಮಂದಿ ಜನರಲ್ ಕೆಟಗರಿಗೆ ಸೇರಿದವರು ಎಂಬುದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

