Breaking News

ದಾಳಿಗೆ ಪ್ರಚೋದಿಸಿದರೆ ಪರಮಾಣು ದಾಳಿ ಮೂಲಕ ದಕ್ಷಿಣ ಕೊರಿಯಾದ ಸರ್ವನಾಶ: ಕಿಮ್ ಜಾಂಗ್ ಉನ್

ಸಿಯೋಲ್‌: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರಗಳನ್ನು ಬಳಸಲು ಪ್ರಯತ್ನಿಸಿದರೆ ಅವರ ಸರ್ಕಾರ ಅಂತ್ಯವಾಗಲಿದೆ ಎಂದು ದಕ್ಷಿಣ ಕೊರಿಯಾದ ನಾಯಕ ಹೇಳಿಕೆ ನೀಡಿದ ಬೆನ್ನಲ್ಲೇ, ದಾಳಿಗೆ ಪ್ರಚೋದಿಸಿದರೆ ಪರಮಾಣು ದಾಳಿ ಮೂಲಕ ದಕ್ಷಿಣ ಕೊರಿಯಾವನ್ನು ಸರ್ವನಾಶ ಮಾಡಬೇಕಾಗುತ್ತದೆ ಎಂದು ಕಿಮ್‌ ಗುಡುಗಿದ್ದಾರೆ.
ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇಂತಹ ವಾಗ್ವಾದ ಹೊಸದೇನಲ್ಲ, ಆದರೆ ಈ ಹೇಳಿಕೆಗಳು ಉತ್ತರ ಕೊರಿಯಾದಲ್ಲಿ ಪರಮಾಣು ಅಣ್ವಸ್ತ್ರ ಇರುವ ಬಗ್ಗೆ ಮತ್ತು ದಕ್ಷಿಣ ಕೊರಿಯಾ ಮೇಲಿನ ದ್ವೇಷದ ಬಗ್ಗೆ ಬಹಿರಂಗಪಡಿಸಿವೆ.
ಎರಡು ದಿನಗಳ ಹಿಂದೆ ವಿಶೇಷ ಕಾರ್ಯಾಚರಣೆ ಘಟಕಕ್ಕೆ ಭೇಟಿ ನೀಡಿದ್ದ ಕಿಮ್, ಉತ್ತರ ಕೊರಿಯಾದ ಸಾರ್ವಭೌಮತ್ವವನ್ನು ಅತಿಕ್ರಮಿಸಲು ದಕ್ಷಿಣ ಕೊರಿಯಾ ಸಶಸ್ತ್ರ ಪಡೆಗಳನ್ನು ಬಳಸಿದರೆ, ಅಣ್ವಸ್ತ್ರ ಸೇರಿದಂತೆ ತನ್ನಲ್ಲಿರುವ ಎಲ್ಲಾ ಆಕ್ರಮಣಕಾರಿ ಅಸ್ತ್ರಗಳನ್ನು ಹಿಂಜರಿಕೆಯಿಲ್ಲದೆ ಬಳಸುವಂತೆ ಸೂಚನೆ ನೀಡಿದ್ದಾರೆ ಎಂದು ಉತ್ತರ ಕೊರಿಯಾದ ಅಧಿಕೃತ ಸುದ್ದಿ ಕೇಂದ್ರ ವರದಿ ಮಾಡಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *