ಹುಬ್ಬಳ್ಳಿ: ಕುಸುಗಲ್ ರಸ್ತೆಯಲ್ಲಿರುವ ಕುಬೇರಪುರಂನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿನೂತನ ರೀತಿಯಲ್ಲಿ ಶ್ರೀನಿವಾಸ ಕಲ್ಯಾಣವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಆರಂಭದಲ್ಲಿಯೇ ವಿಶ್ವೇಶ್ವರ ಪೂಜೆ ಸಲ್ಲಿಸುವ ಮೂಲಕ ಕಲ್ಯಾಣ ಕಾರ್ಯಕ್ರಮ ನಡೆಸಿದ್ದು, ಮಹಿಳೆಯರು, ಮಕ್ಕಳು ಮದುವೆ ಮನೆಯಲ್ಲಿ ಲವಲವಿಕೆಯಿಂದ ಓಡಾಡುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ನೃತ್ಯ, ಸಂಗೀತ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮಕ್ಕೆ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್, ಪಾಲಿಕೆ ಸದಸ್ಯೆ ಉಮಾ ಮುಕುಂದ ಆಗಮಿಸಿದ್ದು, ವಿದ್ಯುಕ್ತವಾಗಿ ಚಾಲನೆ ನೀಡಿದರು. ಇದೇ ವೇಳೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಸ್ವರ್ಣಾ ಗ್ರೂಪ್ ಮಾಲೀಕ ಡಾ.ವಿ.ಎಸ್.ವಿ ಪ್ರಸಾದ್ ಅವರಿಗೆ ಸನ್ಮಾನಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

