Breaking News

ಯುವಕನ ಕೊಲೆ : ಆರೋಪಿಗಳಿಗೆ ಪೊಲೀಸರು ಗುಂಡೇಟು ನೀಡಿ ಬಂಧನ

ಹುಬ್ಬಳ್ಳಿ: ಗೋಪನಕೊಪ್ಪದಲ್ಲಿ ಶುಕ್ರವಾರ ರಾತ್ರಿ ಶಿವರಾಜ್ ಎಂಬ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸಂದೀಪ್ ಮತ್ತು ಕಿರಣ ಅಂತ ತಿಳಿದು ಬಂದಿದ್ದು, ಇವರು ಕೊಲೆಯಾದ ಶಿವರಾಜನ ಗೆಳೆಯರು ಅಂತ ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಗೋಪನಕೊಪ್ಪದಲ್ಲಿ ಆಟೋ ಚಾಲಕನಾಗಿದ್ದ ಶಿವರಾಜ ಜೊತೆ ಆತನ ಸ್ನೇಹಿತರಾಗಿದ್ದ ಸಂದೀಪ್ ಹಾಗೂ ಕಿರಣ ಎಂಬುವರ ನಡುವೆ ಹಳೇ ದ್ವೇಷ ಇದ್ದ ಕಾರಣ ಎರಡು ದಿನಗಳ ಹಿಂದೆ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ಇನ್ನುಳಿದ ಸ್ನೇಹಿತರು ಜಗಳ ಬಗೆ ಹರಿಯಿಸಿ ಕಳೆಸಿದ್ದರು. ಆದ್ರೆ ಶುಕ್ರವಾರ ರಾತ್ರಿ 10.30ಕ್ಕೆ ಗೋಪನಕೊಪ್ಪ ಸರ್ಕಲ್ ಬಳಿ ಶಿವರಾಜ ಹೋದಾಗ ಸಂದೀಪ್, ಕಿರಣ ಸೇರಿ ಶಿವರಾಜನಿಗೆ 30ಕ್ಕೂ ಹೆಚ್ಚು ಬಾರಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ವೇಳೆ ಕೊಲೆಯಾದ ಸ್ಥಳದಲ್ಲಿ 6ಕ್ಕಿಂತ ಹೆಚ್ಚು ಜನರಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಕೊಲೆಯ ಮಾಹಿತಿ ಲಭ್ಯವಾಗುತ್ತಿದ್ದ ಹಾಗೆ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ನೇತೃತ್ವದಲ್ಲಿ ಅಶೋಕ ನಗರ ಠಾಣೆಯ PSI ಮಂಜುನಾಥ ಹಾಗೂ ವಿದ್ಯಾನಗರ ಠಾಣೆಯ PSI ಭೀಮು ಸಾತನ್ನವರ ಮೂರು ಜನ ಆರೋಪಿಗಳನ್ನು ಬಂಧಿಸಿದ್ದರು. ಇನ್ನುಳಿದ ಆರೋಪಿಗಳು ಇರುವ ಸ್ಥಳವನ್ನು ತೋರಿಸುತ್ತೇನೆ ಎಂದು ಹಳೇ ಹುಬ್ಬಳ್ಳಿಯ ರೈಲ್ವೇ ಕ್ವಾಟರ್ಸ್‌ ಬಳಿಯಲ್ಲಿ ಬಂದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೆಪ್ ಆಗಲು ಪ್ರಯತ್ನಿಸಿದಾಗ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಘಟನೆಯಲ್ಲಿ 6 ಜನ ಪೊಲೀಸರಿಗೂ ಗಾಯವಾಗಿದ್ದು ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Share News

About Shaikh BigTv

Check Also

ಹುಬ್ಬಳ್ಳಿ. ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ನಿರಸ ಪ್ರತಿಕ್ರಿಯೆ

ಕನ್ನಡ ಪರ ಹೋರಾಟಗಾರ ವಾಟನಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. …

Leave a Reply

Your email address will not be published. Required fields are marked *