Breaking News

ಕೊಪ್ಪಳದ ಹಿರೇಹಳ್ಳಕ್ಕೆ ಹಾರಿದ ಮಹಿಳೆಯ ರಕ್ಷಣೆ

ಕೊಪ್ಪಳ: ಹಿರೇಹಳ್ಳಕ್ಕೆ ಹಾರಿ ಮಹಿಳೆಯನ್ನು ಗ್ರಾಮದ ಯುವಕರು ರಕ್ಷಿಸಿರುವ ಘಟನೆ ನಗರದ ಭಾಗ್ಯನಗರದಲ್ಲಿ ಶನಿವಾರ ನಡೆದಿದೆ.
ಹಳ್ಳಕ್ಕೆ ಹಾರಿದ ಮಹಿಳೆಯನ್ನು ತಾಲೂಕಿನ ಓಜನಹಳ್ಳಿ ಗ್ರಾಮದ ಭರಮಮ್ಮ ಮಡಿವಾಳರ್ ಎಂದು ಗುರುತಿಸಲಾಗಿದೆ.
ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿರುವ ಭರಮಮ್ಮ ಕಳೆದೊಂದು ವಾರದಿಂದಲೂ ಭಾಗ್ಯನಗರ ಸಮೀಪದಲ್ಲಿ ಹಿರೇಹಳ್ಳದ ದಡದಲ್ಲಿರುವ ಕರಿಬಸವೇಶ್ವರ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದರು.
ಶನಿವಾರ ತಡರಾತ್ರಿಯಿಂದಲೇ ಹಿರೇಹಳ್ಳ ಜಲಾಶಯದಿಂದ ಹಳ್ಳಕ್ಕೆ ನೀರು ಬಿಡುಗಡೆ ಮಾಡಿದ್ದು, ಬೆಳಗ್ಗೆ ಹೊತ್ತಿಗೆ ಹಳ್ಳದ ಎರಡು ದಂಡೆಯ ಮೇಲೆ ನೀರು ಹರಿಯುತ್ತಿದೆ. ಈ ವೇಳೆ ಸೀರೆ ಹಿಂಡಿಕೊಂಡು ಬರುವ ನೆಪದಲ್ಲಿ ಹಳ್ಳದ ದಡಕ್ಕೆ ತೆರಳಿದ ಭರಮಮ್ಮ, ಏಕಾಏಕಿ ಹರಿಯುತ್ತಿದ್ದ ಹಿರೇಹಳ್ಳಕ್ಕೆ ಹಾರಿದ್ದಾರೆ. ಹಳ್ಳದಲ್ಲಿ ಸ್ವಲ್ಪ ದೂರ ಕೊಚ್ಚಿಹೋಗಿ, ಮುಳ್ಳುಕಂಟಿಗಳಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಬಳಿಕ ಮಗನನ್ನು ಕರೆಯಿಸಿ, ಮತ್ತೆ ಕರಿಬಸವೇಶ್ವರ ದೇವಸ್ಥಾನದಲ್ಲಿ ಇರಿಸಿದ್ದಾರೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *