Breaking News

sp ನಂದಗಾವಿ” ಸಿಡಿಲು ದಾಳಿ: ಲಂಚದ ಲೈನಲ್ಲಿ ಸಿಕ್ಕಿಬಿದ್ದ ಪೊಲೀಸರಿಗೆ ಜೈಲು!

ಲಂಚದ ಆಟಕ್ಕೆ ಫುಲ್ ಸ್ಟಾಪ್: ಕೆರೂರು ಠಾಣೆಯ PSI-ಕಾನ್ಸ್‌ಟೇಬಲ್ ಜೈಲು ಪಾಲು!

ಭ್ರಷ್ಟ ಪೊಲೀಸರಿಗೇ ಶಾಕ್: ಲೋಕಾಯುಕ್ತ ದಾಳಿಗೆ ಕುಸಿದ ಕೆರೂರು ಠಾಣೆ ಮಾನ!

ಹಣ ಕೊಡಿ, ಬೈಕ್ ತೆಗೆದುಕೊಳ್ಳಿ’ ಎಂದ ಪೊಲೀಸರ ಆಟ ಮುಗಿತು: ರೆಡ್ ಹ್ಯಾಂಡ್ ಸಿಕ್ಕಿಬಿದ್ದರು!

ಬಾಗಲಕೋಟೆ: ಜಿಲ್ಲೆಯ ಕೆರೂರ ಪೊಲೀಸ್ ಠಾಣೆಯಲ್ಲಿ ಭಾರಿ ಲಂಚ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ನಾಯ್ಕರ ಅವರು ಏಪ್ರಿಲ್ 21, 2026ರಂದು ಬಾಗಲಕೋಟೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು..

ದೂರು ಪ್ರಕಾರ, ಏಪ್ರಿಲ್ 17ರಂದು ಮುತ್ತಪ್ಪ ಅವರ ಸ್ನೇಹಿತ ಶಂಕ್ರಪ್ಪ ಬೂದಿಹಾಳ ಅವರನ್ನು ಅವರ ಬೈಕ್ (KA-29 EC-0914) ಸಮೇತ ಕೆರೂರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಸುಳ್ಳು ಪ್ರಕರಣದಲ್ಲಿ ಸಿಕ್ಕಿಸುವುದಾಗಿ ಬೆದರಿಕೆ ಹಾಕಲಾಗಿದೆ. ನಂತರ ಪ್ರಕರಣದಿಂದ ತಪ್ಪಿಸಿಕೊಳ್ಳಲು 1.70 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಹಣ ನೀಡಿದರೆ ಮಾತ್ರ ಬೈಕ್ ಬಿಡುವುದಾಗಿ ಹೇಳಲಾಗಿದೆ..

ಈ ಕುರಿತು ದೂರು ದಾಖಲಾದ ಹಿನ್ನೆಲೆ, ಏಪ್ರಿಲ್ 22ರಂದು ಲೋಕಾಯುಕ್ತ ಅಧಿಕಾರಿಗಳು ಜಾಲ ಬೀಸಿ ಕಾರ್ಯಾಚರಣೆ ನಡೆಸಿದರು. ಲಂಚದ ಹಣ ಸ್ವೀಕರಿಸುವಾಗಲೇ ಕೆರೂರ ಠಾಣೆಯ PSI ಭೀಮಪ್ಪ ರಬಕವಿ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಸಂತೋಷ ಬಿರಾದಾರರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಯಿತು..

ಈ ದಾಳಿ ಕರ್ನಾಟಕ ಲೋಕಾಯುಕ್ತ ಬಾಗಲಕೋಟೆ ಪೊಲೀಸ್ ಅಧೀಕ್ಷಕ ಎಂ.ಬಿ. ನಂದಗಾಂವಿ (IPS) ಅವರ ಮಾರ್ಗದರ್ಶನದಲ್ಲಿ, ಡಿಎಸ್ಪಿ ಸುರೇಶ್ ರೆಡ್ಡಿ ಹಾಗೂ ತಂಡದವರು ಯಶಸ್ವಿಯಾಗಿ ನಡೆಸಿದರು..

ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಧಿಕಾರಿಗಳ ಪಾತ್ರವೂ ಹೊರಬರುವ ಸಾಧ್ಯತೆ ಇದೆ.

Share News

About Shaikh BigTv

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *