ಜೈಲು ಒಳಗೆ ಗಾಂಜಾ ಸಪ್ಲೈ – ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ..?
ಹುಬ್ಬಳ್ಳಿ ಜೈಲಿನಲ್ಲಿ ಮಾದಕ ವಸ್ತು ಸಪ್ಲೈ ಆರೋಪ!
ಮಲಿಕ್ ಮರ್ಡರ್ ಕೇಸ್ ಆರೋಪಿಗಳಿಗೆ ರಾಜಾರೋಷ ಸೌಲಭ್ಯ..?
ಶಿಕ್ಷಾ ಸ್ಥಳವೇ? ಅಥವಾ ಆರಾಮ ಗೃಹವೇ? ಹುಬ್ಬಳ್ಳಿ ಜೈಲು ವಿವಾದ!
ಜೈಲು ಭದ್ರತೆ ಪ್ರಶ್ನೆಗೊಳಗೆ – ಸಮಗ್ರ ತನಿಖೆಗೆ ಒತ್ತಾಯ!
ಬೆಂಗಳೂರು, ಶಿವಮೊಗ್ಗದ ಬಳಿಕ ಇದೀಗ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲೂ ಗಂಭೀರ ಆರೋಪಗಳು ಕೇಳಿಬಂದಿವೆ. ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ರಾಜಾರೋಷವಾಗಿ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಮಾತುಗಳು ಜೋರಾಗಿವೆ…

ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕೆಲವೇ ದಿನಗಳ ಹಿಂದೆ ಹುಬ್ಬಳ್ಳಿ ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಬಳಿಕ “ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ” ಎಂದು ಹೇಳಿಕೆ ನೀಡಿದ್ದರು…
ಆದರೆ ಭೇಟಿ ನೀಡಿದ ಮೂರು ದಿನಗಳಲ್ಲೇ ಜೈಲಿನೊಳಗೆ ಎಗ್ಗಿಲ್ಲದೇ ಗಾಂಜಾ ಸಪ್ಲೈ ಆಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ…
ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಹೊರಗೆ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ, ಜೈಲಿನೊಳಗೆ ಗಾಂಜಾ ಹೇಗೆ ಪ್ರವೇಶಿಸುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ…
ಜೈಲಿನೊಳಗಿನ ಭದ್ರತೆ ಮೇಲೆ ಪ್ರಶ್ನಾರ್ಹತೆ..
ಸಬ್ ಜೈಲ್ ಹಾಗೂ ಸೆಂಟ್ರಲ್ ಜೈಲ್ ಎರಡಲ್ಲೂ ಸಪ್ಲೈ ಆರೋಪನಟೋರಿಯಸ್ ಹಾಗೂ ಕುಖ್ಯಾತ ರೌಡಿಶೀಟರ್‌ಗಳು ಇರುವ ಉಪ ಕಾರಾಗೃಹಒಳಗಿನಿಂದಲೋ ಅಥವಾ ಹೊರಗಿನ ಸಂಪರ್ಕಗಳ ಮೂಲಕವೋ ಸಪ್ಲೈ..?ತಪಾಸಣೆ ವ್ಯವಸ್ಥೆಯಲ್ಲಿ ಲೋಪವಿದೆಯೇ..?
ಜೈಲಿನಂತಹ ಭದ್ರತಾ ವಲಯದಲ್ಲಿ ಮಾದಕ ವಸ್ತು ಪ್ರವೇಶಿಸುತ್ತಿದ್ದರೆ ಅದು ಗಂಭೀರ ವಿಚಾರ. ಜೈಲಿನೊಳಗಿನ ಸಿಬ್ಬಂದಿ, ಭೇಟಿದಾರರು ಅಥವಾ ಇತರ ಮಾರ್ಗಗಳಿಂದ ಮಾದಕ ವಸ್ತುಗಳು ಒಳನುಗ್ಗುತ್ತಿವೆಯೇ ಎಂಬ ಬಗ್ಗೆ ಸಮಗ್ರ ತನಿಖೆ ಅಗತ್ಯವೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ…
ಸಮಗ್ರ ತನಿಖೆಗೆ ಆಗ್ರಹ..
ಕಾರಾಗೃಹ ಇಲಾಖೆ ಈ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಬೇಕಿದ್ದು, ಸಿಸಿಟಿವಿ ಪರಿಶೀಲನೆ, ಆಂತರಿಕ ತನಿಖೆ ಹಾಗೂ ವಿಶೇಷ ದಾಳಿ ನಡೆಸುವ ಮೂಲಕ ಸತ್ಯಾಂಶ ಬಹಿರಂಗಪಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ…
ಜೈಲಿನೊಳಗಿನ ರಾಜಾತಿಥ್ಯಕ್ಕೆ ತೆರೆ ಬೀಳಬೇಕಾದರೆ ಕಠಿಣ ಕ್ರಮವೇ ಪರಿಹಾರ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ…
bigtvnews | Hubli Dharwad News | Kannada News | Karnataka News Hubli News | News In Hubli | Local news

