Breaking News

ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಕುಶಲಕರ್ಮಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು : ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಚರ್ಮ ಕುಶಲಕರ್ಮಿಗಳಾದ ಆದಿ ಕರ್ನಾಟಕ, ಆದಿ ಮಾದಿಗ, ಚಮ್ಮಾರ, ಸಮಗಾರ, ಡೋರ, ಮೋಚಿ ಜನಾಂಗದವರಿಗೆ 2024-25 ನೇ ಸಾಲಿಗೆ ನಿಗಮದ ವಿವಿಧ ಯೋಜನೆಗಳಿಗೆ ಅಕ್ಟೋಬರ್ 05 ರಿಂದ ಅಕ್ಟೋಬರ್ 30 ರವರೆಗೆ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೌಶಲ್ಯ ಉನ್ನತೀಕರಣ ಯೋಜನೆ, ಸ್ವಾವಲಂಬಿ/ಸಂಚಾರಿ ಮಾರಾಟ ಮಳಿಗೆ, ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಫೂರ್ತಿ ಯೋಜನೆ, ಚರ್ಮಶಿಲ್ಪಿ ಯೋಜನೆ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ, ಡಾ.ಬಾಬು ಜಗಜೀವನ ರಾಂ ವಸತಿ ಕಾರ್ಯಾಗಾರ ಯೋಜನೆ, ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆಗಳಿದ್ದು, ಅರ್ಹ ಚರ್ಮ ಕುಶಲಕರ್ಮಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರ ದೂರವಾಣಿ ಸಂಖ್ಯೆ: 9880486220 ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ/ಎಸ್.ಟಿ ಸಹಾಯವಾಣಿ: 9482300400 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಸಂಯೋಜಕರು ತಿಳಿಸಿದ್ದಾರೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *