ಕುಂದಗೋಳ : ಬೆಣ್ಣೆ ಹಳ್ಳದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿದ ಹಂಚಿನಾಳ ಗ್ರಾಮದ ಜನರನ್ನೂ ನಿರಾಶ್ರಿತರ ಕೇಂದ್ರದಲ್ಲೇ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ಮಾಡಿ ಸಮಸ್ಯೆ ಆಲಿಸಿದರು.
ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮಕ್ಕೆ ಬೆಣ್ಣೆ ಹಳ್ಳದ ಪ್ರವಾಹದಿಂದ ನೀರು ನುಗ್ಗಿ 25 ಮನೆಗಳು ಜಲಾವೃತವಾಗಿ ನಿರಾಶ್ರಿತರ ಕೇಂದ್ರ ತೆರೆದಿತ್ತು.
ಈ ವಿಷಯವಾಗಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರಾಶ್ರಿತರ ಸಮಸ್ಯೆ ಆಲಿಸಿದಾಗ ಪ್ರತಿಯೊಬ್ಬರು ‘ನಮ್ಮ ಊರನ್ನು ಬೆಣ್ಣೆ ಹಳ್ಳದ ಪ್ರವಾಹದಿಂದ ಸ್ಥಳಾಂತರ ಮಾಡಿ ನಮಗೆ ಪುನಃ ಮನೆ ಕಟ್ಟಿಸಿ ಕೊಡಿರಿ ಎಂದು ವೃದ್ಧೆಯರು ಕೈ ಮುಗಿದರು.
ಬಳಿಕ ಗ್ರಾಮದ ಜನ ಕಳೆದ ಹಲವು ವರ್ಷಗಳ ಹಿಂದೆ ಹಂಚಿನಾಳ ಗ್ರಾಮ ಸ್ಥಳಾಂತರ ಆಗಿದೆ ಎನ್ನುವ ದಾಖಲೆ ಪರಿಶೀಲಿಸಿ ಮನೆ ಬಿದ್ದವರಿಗೆ ಪರಿಹಾರ ಕೊಡಿಸಿ ನಮಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ ನಿವಾರಿಸಿ ಎಂದರು.
ಈ ವೇಳೆ ಡಿ.ವಿ.ಎಸ್ ಸಂಘಟನೆ ದಲಿತ ಕುಟುಂಬಗಳು ಹಲವು ವರ್ಷಗಳಿಂದ ಸಮಸ್ಯೆಗೆ ಸಿಲುಕಿವೆ, ಗ್ರಾಮ ಸ್ಥಳಾಂತರ ಮಾಡಿ ಪರಿಹಾರ ನೀಡಿರಿ ನಮಗೆ ಹೋರಾಟಕ್ಕೆ ಅಣಿಯಾಗಲು ಅವಕಾಶ ಮಾಡಬೇಡಿ ಎಂದು ಮನವಿ ಸಲ್ಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

