Breaking News

ವಂಚನೆ ಮಾಡಿದ್ದ ಖತರ್ನಾಕ ಆಸಾಮಿ : ಬಂಧಿಸುವಲ್ಲಿ ಪೋಲಿಸರು ಯಶಸ್ವಿ

ಹುಬ್ಬಳ್ಳಿ : ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಖತರ್ನಾಕ ಆಸಾಮಿಯನ್ನು, ಗೋಕುಲ ರೋಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಲ್ಲಾಪುರ ನಿವಾಸಿ ವಿನಾಯಕ ವಾಘಚವಾರೆ ಎಂಬಾತನೇ ಮೋಸ ಮಾಡಿದ ವ್ಯಕ್ತಿ. ನಗರದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ತಾನು ಗಣಿಗಾರಿಕೆ ಉದ್ಯಮ ನಡೆಸುತ್ತಿದ್ದು, ಈ ವ್ಯವಹಾರದಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ, ಆ ಹಣವನ್ನು ನಾನು ದ್ವಿಗುಣ ಮಾಡಿಕೊಡುತ್ತೇನೆ ಎಂದು ಹಣವನ್ನು ಪಡೆದಿದ್ದ ಅಷ್ಟೇ ಅಲ್ಲದೇ, ಹಣ ಕಳೆದುಕೊಂಡಿದ್ದ ಉದ್ಯಮಿಗೆ ವಿನಾಯಕ ಚೆಕ್‌’ಗಳನ್ನು ನೀಡಿದ್ದ, ಅವುಗಳು ಕೂಡಾ ಬೌನ್ಸ್ ಆಗಿದ್ದು, ಹೀಗಾಗಿ ವಿನಾಯಕ ವಿರುದ್ಧ ಹಣ ಕಳೆದುಕೊಂಡ ಉದ್ಯಮಿ ಪ್ರಕರಣ ದಾಖಲಿಸಿ ಕೋರ್ಟ್’ನಲ್ಲಿ ದಾವೆ ಹೂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿನಾಯಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ, ಹಾಗಾಗಿ ವಿನಾಯಕ ಮೇಲೆ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ, ಗೋಕುಲ ರಸ್ತೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಖಚಿತ ಮಾಹಿತಿ ಮೇರೆಗೆ ಪುಣೆಯಲ್ಲಿ ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share News

About Shaikh BigTv

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *