Breaking News

ದಂಡಿಗಾನಹಳ್ಳಿ ಜಲಾಶಯದಲ್ಲಿ ‌ಮುಳುಗಿದ್ದ ವಿದ್ಯಾರ್ಥಿಗಳ ಶವ ಪತ್ತೆ.

ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ವಿದ್ಯಾರ್ಥಿಗಳ ಶವಗಳು ಪತ್ತೆಯಾಗಿವೆ.ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ದಂಡಿಗಾನಹಳ್ಳಿಯ ಜಲಾಶಯದಲ್ಲಿ ನಿನ್ನೆ ಸಂಜೆ ಈಜಾಡಲು ಹೋಗಿ ಐವರಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿಅಗ್ನಿಶಾಮಕದಳದ ಸಿಬ್ಬಂದಿ ಸತತವಾಗಿ ಬೆಳಿಗ್ಗೆಯಿಂದ ಶವಗಳಿಗಾಗಿ ಶೋಧ ನಡೆಸಿದ್ದರು. ಕೊನೆಗೂ ಕಾರ್ಯಾಚರಣೆ ಮಾಡಿ ಶವವನ್ನು ಹೊರತೆಗೆದಿದ್ದಾರೆ.ಬೆಂಗಳೂರು ಮೂಲದ ಸತೀಶ ಶಿವಕುಮಾರ್ (23), ಕೇರಳ ಮೂಲದ ಅಭಿಲಾಶ(23) ಎಂಬ ವಿದ್ಯಾರ್ಥಿಗಳ ಶವಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.‌ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *