ಬೆಂಗಳೂರು: ಇಂದು ನಟಿ ಶ್ರುತಿ ಹರಿಹರನ್ ಸೈಬರ್ ಕ್ರೈಂ ಠಾಣೆಗೆ ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ. ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ#MeToo ಆರೋಪ ಮಾಡಿದ ಹೊತ್ತಲ್ಲೇ ಸರ್ಜಾ ಅವರ ಇ-ಮೇಲ್, ಫೇಸ್ಬುಕ್ ಹಾಗೂ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿರೋ ಬಗ್ಗೆ, ಅವರ ಮಾನೇಜರ್ ಶಿವಾರ್ಜುನ್ ದೂರು ನೀಡಿದ್ದರು. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶ್ರುತಿಹರಿಹರನ್ ವಿರುದ್ಧ FIR ದಾಖಲಾಗಿತ್ತು. ವಿಚಾರಣೆಗೆ ಹಾಜರಾಗಲು ಶೃತಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶೃತಿ ಇಂದು ವಿಚಾರಣೆಗೆ ಹಾಜರಾಗೋ ಸಾಧ್ಯತೆ ಇದೆ. ಅಲ್ಲದೆ ಮಹಿಳಾ ಆಯೋಗ ಸೇರಿದಂತೆ ಡಿಜಿಯನ್ನ ಭೇಟಿಯಾಗೋ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





