Breaking News

ಸಂಡೂರು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ

ಸಂಡೂರು: ಸಂಡೂರು ಕ್ಷೇತ್ರದ ವಿಧಾನ ಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು, ಇಂದು ಕ್ಷೇತ್ರದ ವಿವಿಧೆಡೆ ಪ್ರಚಾರ ಆರಂಭಿಸಿದರು.
ಪತಿ ಇ ತುಕಾರಾಂ ಅವರೊಂದಿಗೆ ಯಶವಂತ ನಗರ, ಸೋಮಲಾಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.
ಪ್ರಚಾರದ ವೇಳೆ ಮಾತನಾಡಿದ ಅನ್ನಪೂರ್ಣ ಅವರು, ಯಶವಂತ ನಗರದಲ್ಲಿ ನಾವು ಬದುಕು ಕಟ್ಟಿಕೊಂಡಿದ್ದು ಇಲ್ಲಿನ ಜ‌ನ ಪ್ರತಿ ಬಾರಿಯೂ ನಮಗೆ ಹೆಚ್ಚಿನ ಮತ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಬಾರಿಯೂ ಅದೇ ವಿಶ್ವಾಸ, ಪ್ರೀತಿ ತೋರುತ್ತಿದ್ದು, ನಿಮಗೆ ನಾನು ಎಂದೆಂದೂ ಋಣಿ ಎಂದರು.
ದೇವಸ್ಥಾನ, ಮಠಕ್ಕೆ ಭೇಟಿ ಯಶವಂತ ನಗರದ ಗಂಡಿ ಮಾಲಿಯಮ್ಮ ದೇವಸ್ಥಾನ ಮತ್ತು ಸಿದ್ದರಾಮೇಶ್ವರ ಮಠಕ್ಕೆ ಭೇಟಿ ನೀಡಿದ ಅನ್ನಪೂರ್ಣ ಅವರು ಆಶೀರ್ವಾದ ಪಡೆದರು.
ಸೋಲಾಪುರದಲ್ಲಿ ಮಾತನಾಡಿದ ಅನ್ನಪೂರ್ಣ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *